/newsfirstlive-kannada/media/post_attachments/wp-content/uploads/2023/07/KRS-2.jpg)
ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಸುರಿಯುತ್ತಿದ್ದು, ಇದರಿಂದಾಗಿ ಕೆಆರ್‌ಎಸ್ ಡ್ಯಾಂಗೆ ಒಳಹರಿವಿನ ಪ್ರಮಾಣ ಮತ್ತಷ್ಟು ಹೆಚ್ಚಳವಾಗಿದೆ.
124.80 ಅಡಿಯ ಕೆಆರ್‌ಎಸ್ ಡ್ಯಾಂನ 82.30 ಅಡಿ ಭರ್ತಿಯಾಗಿದೆ. 49.452 ಟಿಎಂಸಿ ಗರಿಷ್ಠ ಸಾಂದ್ರತೆ ಹೊಂದಿರುವ ಕೆಆರ್‌ಎಸ್‌ನಲ್ಲಿ 11.837 ಟಿಎಂಸಿ ಶೇಖರಣೆಯಾಗಿದೆ. ಹೀಗಾಗಿ ಡ್ಯಾಂನಿಂದ 528 ಕ್ಯೂಸೆಕ್ ನೀರು ಹೊರ ಹರಿಯುತ್ತಿದೆ.
ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವುದೇ ಇದಕ್ಕೆ ಕಾರಣವಾಗಿದೆ. ಹಾಗಾಗಿ ಡ್ಯಾಂಗೆ ಒಳಹರಿವು ಹೆಚ್ಚಳವಾಗಿದೆ. ಅಂದಹಾಗೆಯೇ ನಿನ್ನೆ 2,509 ಕ್ಯೂಸೆಕ್ ಇದ್ದ ಒಳಹರಿವು ಇಂದು 3,365 ಕ್ಯೂಸೆಕ್‌ಗೆ ಹೆಚ್ಚಿದೆ.
ಇಂದಿನ ಕೆಆರ್‌ಎಸ್ ನೀರಿನ ಮಟ್ಟ
ಗರಿಷ್ಠ ಮಟ್ಟ - 124.80 ಅಡಿ.
ಇಂದಿನ ಮಟ್ಟ - 82.30 ಅಡಿ.
ಗರಿಷ್ಠ ಸಾಂದ್ರತೆ - 49.452 ಟಿಎಂಸಿ
ಇಂದಿನ ಸಾಂದ್ರತೆ - 11.837 ಟಿಎಂಸಿ
ಒಳ ಹರಿವು - 3,365 ಕ್ಯೂಸೆಕ್
ಹೊರ ಹರಿವು - 528 ಕ್ಯೂಸೆಕ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us