newsfirstkannada.com

KRS ಡ್ಯಾಂ ನೀರಿನ ಪ್ರಮಾಣ ಕುಸಿತ.. ರೈತರ ಪ್ರತಿಭಟನೆಯ ನಡುವೆಯೂ ಇಂದು ತಮಿಳುನಾಡಿಗೆ 10,841 ಕ್ಯೂಸೆಕ್ ನೀರು ಬಿಡುಗಡೆ

Share :

Published August 22, 2023 at 10:29am

Update August 22, 2023 at 10:31am

  ಕೆಆರ್​ಎಸ್​ ಡ್ಯಾಂನ ನೀರಿನ ಮಟ್ಟ 104 ಅಡಿಗೆ ಕುಸಿತ

  ತಮಿಳುನಾಡಿಗಿಂದು 10,841 ಕ್ಯೂಸೆಕ್ ನೀರು ಬಿಡುಗಡೆ ಮಾಡಿದೆ

  ಮಳೆಯಿಲ್ಲ, ಬೆಳೆಯಿಲ್ಲ, ಕಾವೇರಿ ಕೊಳ್ಳದ ರೈತರಲ್ಲಿ ಹೆಚ್ಚಾದ ಆತಂಕ

ಮಂಡ್ಯ: ಕಾವೇರಿ ನೀರು ತಮಿಳುನಾಡಿಗೆ ಹರಿಸುವ ವಿಚಾರವಾಗಿ ರೈತರು ಕಾಂಗ್ರೆಸ್​ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆ. ಹೀಗಿದ್ದರು KRS ಡ್ಯಾಂನಿಂದ ತಮಿಳುನಾಡಿಗೆ ನೀರು ಬಿಡುಗಡೆ ಮುಂದುವರಿದಿದೆ. ಮತ್ತೊಂದೆಡೆ ಈ ಬಾರಿ ಮಳೆಯ ಅಭಾವದಿಂದಾಗಿ ಡ್ಯಾಂನ ನೀರಿನ ಮಟ್ಟ ದಿನೇ ದಿನೇ ಕುಸಿಯುತ್ತಿದೆ.

ಕೆಆರ್​ಎಸ್​ ಡ್ಯಾಂನ ನೀರಿನ ಮಟ್ಟ 104 ಅಡಿಗೆ ಕುಸಿತ ಕಂಡಿದ್ದು, ಒಂದೇ ದಿನಕ್ಕೆ ನೀರಿನ ಪ್ರಮಾಣ ಒಂದು ಅಡಿಯಷ್ಟು ಕೆಳಸ್ಥರದಲ್ಲಿ ಕಂಡಿದೆ. ಹೀಗಾಗಿ ಕಾವೇರಿ ಕೊಳ್ಳದ ರೈತರಲ್ಲಿ ಆತಂಕ ಹೆಚ್ಚಾಗಿದೆ. ಮತ್ತೊಂದೆಡೆ ರೈತರ ಆಕ್ರೋಶದ ಕೂಗಿಗೆ ರಾಜ್ಯ ಸರ್ಕಾರ ಕ್ಯಾರೆ ಎನ್ನದೆ ಸುಮ್ಮನಾಗಿದೆ.

ನಿನ್ನೆ 12,631 ಕ್ಯೂಸೆಕ್ ನೀರನ್ನ ತಮಿಳುನಾಡಿಗೆ ಬಿಡಲಾಗುತ್ತಿತ್ತು. ಇಂದು 10,841 ಕ್ಯೂಸೆಕ್ ನೀರು ಬಿಡುಗಡೆ ಮಾಡಿದೆ. ನಿನ್ನೆಗಿಂತ 2 ಸಾವಿರ ಕ್ಯೂಸೆಕ್ ಕಡಿಮೆ ಮಾಡಿದೆ. ಆದರೆ ನಾಲೆಗಳಿಗೆ ಸೇರಿ ಡ್ಯಾಂನಿಂದ ಒಟ್ಟಾರೆ 13,457 ಕ್ಯೂಸೆಕ್ ನೀರು ಹೊರಹರಿಸಲಾಗಿದೆ.

KRS ಡ್ಯಾಂಗೆ 5269 ಕ್ಯೂಸೆಕ್ ನೀರು ಮಾತ್ರ ಹರಿದು ಬರುತ್ತಿದೆ . 124.80 ಅಡಿ ಗರಿಷ್ಠ ಮಟ್ಟದ ಡ್ಯಾಂನಲ್ಲಿ 104.90 ಅಡಿ ನೀರು ಸಂಗ್ರಹವಾಗಿದೆ. 49.542 ಟಿಎಂಸಿ ಸಾಮರ್ಥ್ಯದ ಡ್ಯಾಂನಲ್ಲಿ ಕೇವಲ 26.899 ಟಿಎಂಸಿ ನೀರು ಮಾತ್ರ ಶೇಖರಣೆಯಾಗಿದೆ.

ಕೆಆರ್‌ಎಸ್ ಡ್ಯಾಂ ನ ಇಂದಿನ ನೀರಿನ ಮಟ್ಟ

ಗರಿಷ್ಠ ಮಟ್ಟ – 124.80 ಅಡಿಗಳು
ಇಂದಿನ ಮಟ್ಟ – 104.90 ಅಡಿಗಳು
ಗರಿಷ್ಠ ಸಾಮರ್ಥ್ಯ – 49.452 ಟಿಎಂಸಿ
ಇಂದು ಸಂಗ್ರಹ ಇರುವ ನೀರು – 26.899 ಟಿಎಂಸಿ
ಒಳ ಹರಿವು – 5269 ಕ್ಯೂಸೆಕ್
ಹೊರ ಹರಿವು – 13457 ಕ್ಯೂಸೆಕ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

KRS ಡ್ಯಾಂ ನೀರಿನ ಪ್ರಮಾಣ ಕುಸಿತ.. ರೈತರ ಪ್ರತಿಭಟನೆಯ ನಡುವೆಯೂ ಇಂದು ತಮಿಳುನಾಡಿಗೆ 10,841 ಕ್ಯೂಸೆಕ್ ನೀರು ಬಿಡುಗಡೆ

https://newsfirstlive.com/wp-content/uploads/2023/07/KRS.jpg

Load More