ರೈತರಿಗೆ ಖುಷಿ ಸುದ್ದಿ! ಒಂದೇ ದಿನಕ್ಕೆ 5 ಸಾವಿರ ಕ್ಯೂಸೆಕ್ ಒಳ ಹರಿವು ಹೆಚ್ಚಳ! ಇಂದು KRS ಡ್ಯಾಂನ ನೀರಿನ ಮಟ್ಟ ಎಷ್ಟಿದೆ?

author-image
AS Harshith
Updated On
Kaveri Water: ಇಂದು ಕಾವೇರಿ ನೀರು ನಿರ್ವಹಣಾ ಸಮಿತಿ ಸಭೆ.. ಆತಂಕದಲ್ಲಿ ಮಂಡ್ಯ ರೈತರು
Advertisment
  • ಮಳೆ ಕೊಂಚ ಕಡಿಮೆಯಾದರೂ ಒಳ ಹರಿವಿನಲ್ಲಿ ಮತ್ತಷ್ಟು ಏರಿಕೆ
  • ಮೂರೇ ದಿನದಲ್ಲಿ ಕೆಆರ್​ಎಸ್​ ಡ್ಯಾಂನ 5 ಅಡಿ ಭರ್ತಿಯಾಗಿದೆ
  • ಇಂದು ಸಂಗ್ರಹ ಇರುವ ನೀರು, ಹೊರ ಹರಿವು ಎಷ್ಟಿದೆ? ಇಲ್ಲಿದೆ ಮಾಹಿತಿ

ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಕೊಂಚ ಕಡಿಮೆಯಾಗಿದೆ. ಹೀಗಿದ್ದರೂ KRS ಡ್ಯಾಂನ ಒಳ ಹರಿವಿನಲ್ಲಿ ಮತ್ತಷ್ಟು ಏರಿಕೆ ಕಂಡಿದೆ. ಅಚ್ಚರಿ ಸಂಗತಿ ಎಂದರೆ ಮೂರೇ ದಿನದಲ್ಲಿ ಡ್ಯಾಂ 5 ಅಡಿ ಭರ್ತಿಯಾಗಿದೆ.

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೃಷ್ಣರಾಜ ಸಾಗರದ ಡ್ಯಾಂಗೆ ಒಳಹರಿವು ಹೆಚ್ಚಾಗಿರೋದು ರೈತರ ಸಂತಸಕ್ಕೆ ಕಾರಣವಾಗಿದೆ. ಒಳ ಹರಿವು ಮತ್ತಷ್ಟು ಹೆಚ್ಚಾದ್ರೆ ನಾಲ್ಕು ದಿನದಲ್ಲೇ ನೀರಿನ ಮಟ್ಟ 100 ಅಡಿ ಗಡಿ ತಲುಪುವ ಸಾಧ್ಯತೆಯಿದೆ.

ಇದನ್ನೂ ಓದಿ: ಅತಿ ವೇಗವಾಗಿ ಕಲ್ಲು ಗಣಿಗಾರಿಕೆಗೆ ಸ್ಫೋಟಕಗಳನ್ನು ಸಾಗಿಸುತ್ತಿದ್ದ ವಾಹನ ಡಿಕ್ಕಿ.. ಬೈಕ್​ ಸವಾರ ಸಾವು

ಸದ್ಯ 18,644 ಕ್ಯೂಸೆಕ್ ಗೆ ಒಳ ಹರಿವು ಏರಿಕೆಯಾಗಿದೆ. ಅಂದರೆ 92.80 ಅಡಿಗೆ ನೀರಿನ ಮಟ್ಟ ಏರಿಕೆಯಾಗಿದೆ. ಕಾವೇರಿಯನ್ನೇ ನಂಬಿರುವ ರೈತರಿಗೆ ಈ ಸಂಗತಿ ದುಪ್ಪಟ್ಟು ಖುಷಿ ನೀಡಿದೆ.

ಇದನ್ನೂ ಓದಿ: ಅಯ್ಯೋ.. ತಾಂತ್ರಿಕ ದೋಷ, ಬಾಹ್ಯಾಕಾಶದಲ್ಲಿ ಸಿಲುಕಿದ ಸುನಿತಾ ವಿಲಿಯಮ್ಸ್; ಮುಂದೇನು ಕತೆ?

ಬುಧವಾರದಂದು ಅಣೆಕಟ್ಟಿನಲ್ಲಿ 87.90 ಅಡಿ ನೀರು ಸಂಗ್ರಹವಾಗಿತ್ತು. ಆದರೀಗ ಒಳ ಹರಿವು ಮತ್ತಷ್ಟು ಹೆಚ್ಚಾದ್ರೆ ನಾಲ್ಕು ದಿನದಲ್ಲೇ ನೀರಿನ ಮಟ್ಟ 100 ಅಡಿ ಗಡಿ ತಲುಪುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಒಂದೇ ದಿನಕ್ಕೆ 5 ಸಾವಿರ ಕ್ಯೂಸೆಕ್ ಒಳ ಹರಿವು ಹೆಚ್ಚಳವಾಗಿದ್ದು, ನಿನ್ನೆ 13,437 ಕ್ಯೂಸೆಕ್ ನೀರು ಹರಿದು ಬಂದಿತ್ತು. ಇಂದು 18,644 ಕ್ಯೂಸೆಕ್ ಗೆ ಏರಿಕೆ ಕಂಡಿದೆ.

ಇಂದಿನ KRS ನೀರಿನ ಮಟ್ಟ

  • ಗರಿಷ್ಠ ಮಟ್ಟ - 124.80 ಅಡಿ.
  • ಇಂದಿನ ಮಟ್ಟ - 92.80 ಅಡಿ.
  • ಗರಿಷ್ಠ ಸಂಗ್ರಹ ಸಾಮರ್ಥ್ಯ - 49.452 ಟಿಎಂಸಿ
  • ಇಂದು ಸಂಗ್ರಹ ಇರುವ ನೀರು - 17.676 ಟಿಎಂಸಿ
  • ಒಳ ಹರಿವು - 18,644 ಕ್ಯೂಸೆಕ್
  • ಹೊರ ಹರಿವು - 496 ಕ್ಯೂಸೆಕ್

ನಿನ್ನೆ KRS ನೀರಿನ ಪ್ರಮಾಣ ಎಷ್ಟಿತ್ತು?

  • ಗರಿಷ್ಠ ಮಟ್ಟ -124.80 ಅಡಿ
  • ಇಂದಿನ ಮಟ್ಟ – 90.30 ಅಡಿ
  • ಗರಿಷ್ಠ ಸಾಮರ್ಥ್ಯ – 49.452 ಟಿಎಂಸಿ
  • ಇಂದಿನ ಸಾಮರ್ಥ್ಯ – 16.118 ಟಿಎಂಸಿ
  • ಒಳ ಹರಿವು – 13,437 ಕ್ಯೂಸೆಕ್
  • ಹೊರ ಹರಿವು – 478 ಕ್ಯೂಸೆಕ್
Advertisment