/newsfirstlive-kannada/media/post_attachments/wp-content/uploads/2024/07/KRS-1-1.jpg)
ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಮುಂದುವರೆದಿದೆ. ಕೆಆರ್‌ಎಸ್ ಡ್ಯಾಂಗೆ 8,787 ಕ್ಯೂಸೆಕ್ ಒಳಹರಿವು ಬರುತ್ತಿದೆ. ಪರಿಣಾಮ 96.50 ಅಡಿಗೆ ಡ್ಯಾಂನ ನೀರಿನ ಮಟ್ಟ ಏರಿಕೆ ಕಂಡಿದೆ.
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಡ್ಯಾಂನಲ್ಲಿ ನಿನ್ನೆ ಒಳಹರಿವಿನ ಪ್ರಮಾಣ 9,369 ಕ್ಯೂಸೆಕ್ ಇತ್ತು. ಇಂದು 8,787 ಕ್ಯೂಸೆಕ್ ಗೆ ಒಳಹರವು ಇಳಿಕೆಯಾಗಿದೆ. ಕುಡಿಯುವ ನೀರಿಗಾಗಿ ಡ್ಯಾನಿಂದ 526 ಕ್ಯೂಸೆಕ್ ಹೊರಕ್ಕೆ ಹರಿಸಲಾಗುತ್ತಿದೆ.
ಇನ್ನು 124.80 ಗರಿಷ್ಠ ಮಟ್ಟದ ಡ್ಯಾಂನಲ್ಲಿ ಸದ್ಯ 96.50 ಅಡಿ ನೀರು ಸಂಗ್ರಹವಾಗಿದೆ. 49.452 ಟಿಎಂಸಿ ಗರಿಷ್ಠ ಸಾಮರ್ಥ್ಯದ ಡ್ಯಾಂನಲ್ಲಿ ಸದ್ಯ 20.191 ಟಿಎಂಸಿ ನೀರು ಸಂಗ್ರಹವಾಘಿದೆ.
ಇದನ್ನೂ ಓದಿ: ಬಾವನಿಂದಲೇ ಬಾಮೈದನ ಕೊಲೆ.. ಮಗನ ಸಾವಿನಿಂದ ಖಿನ್ನತೆಗೆ ಜಾರಿ ಆತ್ಮಹತ್ಯೆ ಮಾಡಿಕೊಂಡ ತಾಯಿ!
ಇಂದಿನ ಕೆಆರ್‌ಎಸ್ ನೀರಿನ ಮಟ್ಟ
- ಗರಿಷ್ಠ ಮಟ್ಟ - 124.80 ಅಡಿ.
- ಇಂದಿನ ಮಟ್ಟ - 96.50 ಅಡಿ.
- ಗರಿಷ್ಠ ಸಾಮರ್ಥ್ಯ - 49.452 ಟಿಎಂಸಿ
- ಇಂದಿನ ಸಾಮರ್ಥ್ಯ- 20.191 ಟಿಎಂಸಿ
- ಒಳ ಹರಿವು - 8,787 ಕ್ಯೂಸೆಕ್
- ಹೊರ ಹರಿವು - 526 ಕ್ಯೂಸೆಕ್
ನಿನ್ನೆ ನೀರಿನ ಮಟ್ಟ ಎಷ್ಟಿತ್ತು?
- ಗರಿಷ್ಠ ಮಟ್ಟ – 124.80 ಅಡಿ.
- ಇಂದಿನ ಮಟ್ಟ – 95.50 ಅಡಿ.
- ಗರಿಷ್ಠ ಸಾಮರ್ಥ್ಯ – 49.452 ಟಿಎಂಸಿ
- ಇಂದಿನ ಸಾಮರ್ಥ್ಯ – 19.487 ಟಿಎಂಸಿ
- ಒಳ ಹರಿವು – 9,369 ಕ್ಯೂಸೆಕ್
- ಹೊರ ಹರಿವು – 518 ಕ್ಯೂಸೆಕ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ