ಒಂದೇ ದಿನದಲ್ಲಿ ಭರ್ಜರಿಯಾಗಿ KRS ಡ್ಯಾಂ ನೀರಿನಲ್ಲಿ ಹೆಚ್ಚಳ.. ಕಾವೇರಿಗೆ ಹೊಸ ಕಳೆ

author-image
Ganesh
Updated On
Kaveri Water: ಇಂದು ಕಾವೇರಿ ನೀರು ನಿರ್ವಹಣಾ ಸಮಿತಿ ಸಭೆ.. ಆತಂಕದಲ್ಲಿ ಮಂಡ್ಯ ರೈತರು
Advertisment
  • ಕೆಆರ್‌ಎಸ್ ಡ್ಯಾಂ ಒಳಹರಿವಿನ ಪ್ರಮಾಣ ಹೆಚ್ಚಳ
  • ಇಂದು ಕೆಆರ್‌ಎಸ್‌ಗೆ 3,856 ಕ್ಯೂಸೆಕ್ ನೀರು ಒಳಹರಿವು
  • ಒಳಹರಿವು ಹೆಚ್ಚಳ ಹಿನ್ನೆಲೆ ನೀರಿನ ಮಟ್ಟದಲ್ಲೂ ಹೆಚ್ಚಳ

ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯ ಆರ್ಭಟ ಜೋರಾಗಿದ್ದು, ಕೆಆರ್‌ಎಸ್ ಡ್ಯಾಂ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬಂದಿದೆ. ನಿರಂತರ ಮಳೆ ಹಿನ್ನೆಲೆಯಲ್ಲಿ ಒಳ ಹರಿವಿನಲ್ಲಿ ಹೆಚ್ಚಳವಾಗಿದೆ.

ಒಂದೇ ದಿನದಲ್ಲಿ 1,615 ಕ್ಯೂಸೆಕ್ ಒಳಹರಿವು ಹೆಚ್ಚಳವಾಗಿದ್ದು, ನಿನ್ನೆ ಕೆಆರ್‌ಎಸ್ ಡ್ಯಾಂಗೆ 2,241 ಕ್ಯೂಸೆಕ್ ಒಳಹರಿವು ಬಂದಿತ್ತು. ಇಂದು ಕೆಆರ್‌ಎಸ್‌ಗೆ 3,856 ಕ್ಯೂಸೆಕ್ ನೀರು ಒಳಹರಿವು ಬಂದಿದೆ. ಒಳಹರಿವು ಹೆಚ್ಚಳ ಹಿನ್ನೆಲೆ ನೀರಿನ ಮಟ್ಟದಲ್ಲೂ ಹೆಚ್ಚಳವಾಗಿದೆ.
124.80 ಅಡಿ ಗರಿಷ್ಠ ಮಟ್ಟದ ಕೆಆರ್‌ಎಸ್‌ ಡ್ಯಾಂ 88.40 ಅಡಿ ಭರ್ತಿಯಾಗಿದೆ. 49.452 ಟಿಎಂಸಿ ಗರಿಷ್ಠ ಸಾಂದ್ರತೆ ಡ್ಯಾಂ‌ನಲ್ಲಿ 15.007 ಟಿಎಂಸಿ ನೀರು ಸಂಗ್ರಹವಾಗಿದ್ದು, ಡ್ಯಾಂನ ಹೊರ ಹರಿವು 472 ಕ್ಯೂಸೆಕ್ ಆಗಿದೆ.

ಇಂದಿನ ಕೆಆರ್‌ಎಸ್ ನೀರಿನ ಮಟ್ಟ

  • ಗರಿಷ್ಠ ಮಟ್ಟ 124.80 ಅಡಿ
  • ಇಂದಿನ ಮಟ್ಟ 88.40 ಅಡಿ
  • ಗರಿಷ್ಠ ಸಾಂದ್ರತೆ 49.452 ಟಿಎಂಸಿ
  • ಇಂದಿನ ಸಾಂದ್ರತೆ 15.007 ಟಿಎಂಸಿ
  • ಒಳ ಹರಿವು 3,856 ಕ್ಯೂಸೆಕ್
  • ಹೊರ ಹರಿವು 472 ಕ್ಯೂಸೆಕ್

ಇದನ್ನೂ ಓದಿ:ಈ ವಿಶ್ವಕಪ್​​ನಲ್ಲಿ ಇಂಗ್ಲೆಂಡ್​ ಜೊತೆಯಿದೆ ​​ಅದೃಷ್ಟದ ದೇವತೆ.. ‘ನಮ್ಗೆ ತಿರುಮಂತ್ರ ಗೊತ್ತು’ ಎಂದ ರೋಹಿತ್ ಪಡೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment