/newsfirstlive-kannada/media/post_attachments/wp-content/uploads/2025/06/KRS_DAM_123.jpg)
ಮಂಡ್ಯ: ಉತ್ತಮವಾಗಿ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಜಲಾಶಯಗಳಿಗೆ ನೀರಿನ ಕಳೆ ಬಂದಿದೆ. ಇದರ ಜೊತೆಗೆ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ (Krishna Raja Sagara) ಜಲಾಶಯ ಐತಿಹಾಸಿಕ ದಾಖಲೆಗೆ ಸಿದ್ಧವಾಗಿದೆ. ಕೇವಲ ಒಂದೇ 1 ಅಡಿಯಷ್ಟು ನೀರು ತುಂಬಿದರೆ ಡ್ಯಾಂ ಭರ್ತಿ ಆಗಲಿದೆ.
ಕೆಆರ್‌ಎಸ್ ಡ್ಯಾಂ ಐತಿಹಾಸಿಕ ದಾಖಲೆಗೆ ಕೇವಲ ಒಂದೇ 1 ಅಡಿ ಮಾತ್ರ ಬಾಕಿ ಇದೆ. ಈಗಾಗಲೇ ಜಲಾಶಯ 123.25 ಅಡಿ ಭರ್ತಿಯಾಗಿದ್ದು ಇನ್ನು ಒಂದು ಅಡಿಯಷ್ಟು ನೀರು ತುಂಬಿದರೆ ಜಲಾಶಯ ಸಂಪೂರ್ಣವಾಗಿ 124.80 ಅಡಿ ಭರ್ತಿ ಆಗಲಿದೆ. ಡ್ಯಾಂ ನಿರ್ಮಾಣವಾಗಿ 93 ವರ್ಷಗಳು ಆಗಿವೆ. ಜೂನ್ನಲ್ಲೇ ಡ್ಯಾಂ ಭರ್ತಿಯಾಗುತ್ತಿದ್ದರಿಂದ 93 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಜೂನ್ನಲ್ಲಿ ಜಲಾಶಯ ಸಂಪೂರ್ಣವಾಗಿ ಭರ್ತಿ ಆಗುತ್ತಿದೆ.
ಇದನ್ನೂ ಓದಿ: RCB, ಕೊಹ್ಲಿನ ಕಂಡ್ರೆ ಅಂಬಟಿ ರಾಯುಡುಗೆ ಯಾಕೆ ಅಷ್ಟೊಂದು ಕೋಪ.. ಅಸಲಿ ಕಾರಣ ಇಲ್ಲಿದೆ!
ಇಂದು ಕೆಆರ್‌ಎಸ್ ಡ್ಯಾಂಗೆ 73,811 ಕ್ಯೂಸೆಕ್ ಒಳಹರಿವು ಇದ್ದು ಹೊರ ಹರಿವು 38,983 ಕ್ಯೂಸೆಕ್ ಇದೆ. 47.452 ಟಿಎಂಸಿ ನೀರು ಕೆಆರ್‌ಎಸ್‌ನಲ್ಲಿ ಸಂಗ್ರಹವಾಗಿದೆ. 49.452 ಟಿಎಂಸಿ ಕೆಆರ್‌ಎಸ್ ಗರಿಷ್ಠ ಸಾಮರ್ಥ್ಯವಾಗಿದೆ. ಜಲಾಶಯಕ್ಕೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು ಇನ್ನು ಎರಡು ಟಿಎಂಸಿ ನೀರು ತುಂಬಿದರೆ ಕೆಆರ್‌ಎಸ್ ಸಂಪೂರ್ಣವಾಗಿ ಭರ್ತಿ ಆಗಲಿದೆ. ಇಂದು ಮಧ್ಯಾಹ್ನದ ವೇಳೆಗೆ ಕೆಆರ್‌ಎಸ್ ಜಲಾಶಯ ಸಂಪೂರ್ಣ ಭರ್ತಿಯಾಗಲಿದೆ.
ಇನ್ನಷ್ಟು ನೀರು ಮಾತ್ರ ಬಾಕಿ ಇದ್ದು ಇವತ್ತು ಮಧ್ಯಾಹ್ನ ತುಂಬುವ ಸಾಧ್ಯತೆ ಪಕ್ಕಾ ಇದೆ. ಈ ಮೂಲಕ ಇದೇ ಮೊದಲ ಬಾರಿಗೆ ಕೆಆರ್‌ಎಸ್ ಜಲಾಶಯ ಜೂನ್ ತಿಂಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಭರ್ತಿಯಾದಂತೆ ಆಗುತ್ತದೆ. ಜೂನ್ನಲ್ಲೇ ಭರ್ತಿಯಾದರೆ ಹೊಸ ದಾಖಲೆ ಕೆಆರ್‌ಎಸ್ ಬರೆಯಲಿದೆ. 93 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಈ ತಿಂಗಳಲ್ಲಿ ಡ್ಯಾಂ ಭರ್ತಿಯಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ