newsfirstkannada.com

ಬಾರೋ ಬಾರೋ ಮಳೆರಾಯ.. ಹೆಚ್ಚುತ್ತಿದೆ KRS ಡ್ಯಾಂನ ನೀರಿನ ಮಟ್ಟ! ಇಂದು ಎಷ್ಟಿದೆ?

Share :

Published June 10, 2024 at 9:04am

    ಕೆಆರ್​​ಎಸ್​ ಡ್ಯಾಂನ ಇಂದಿನ ನೀರಿನ ಮಟ್ಟ ಎಷ್ಟಿದೆ?

    ಮಳೆಯಿಂದಾಗಿ ಹೆಚ್ಚುತ್ತಿದೆ ಕೆಆರ್​ಎಸ್​​ ಡ್ಯಾಂನ ಒಳ ಹರಿವು

    ಇಂದು ಹೊರ ಹರಿವಿನ ಪ್ರಮಾಣ ಎಷ್ಟಿದೆ? ಇಲ್ಲಿದೆ ಮಾಹಿತಿ

ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಸುರಿಯುತ್ತಿದ್ದು, ಇದರಿಂದ ರೈತರಿಗೆ ಇನ್ನಿಲ್ಲದ ಸಂತೋಷವಾಗಿದೆ. ಮಳೆಯಿಂದಾಗಿ ಕೃಷ್ಣರಾಜ ಸಾಗರ ಜಲಾಶಯದ ನೀರು ತುಂಬುತ್ತಿದ್ದು, ಸಾಂದ್ರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ಕಾವೇರಿ ನೀರನ್ನು ನಂಬಿ ಅದೆಷ್ಟೋ ಜೀವಜಲಗಳು ಬದುಕುತ್ತಿವೆ. ರೈತರಂತೂ ಇದೇ ನೀರಿನಿಂದ ಕೃಷಿ, ದೈನಂದಿನ ಬಳಕೆ ಮಾಡುತ್ತಿದ್ದಾರೆ. ಕಳೆದ ವರ್ಷ ಕಾವೇರಿ ನೀರಿನ ಅಭಾವ ಉಂಟಾಗಿತ್ತು. ಆದರೆ ಈ ವರ್ಷ ಮಳೆಯ ಆರ್ಭಟ ನೋಡಿದರೆ ನೀರಿನ ಕೊರತೆ ಮಾಸುವ ಲಕ್ಷಣ ಕಾಣುತ್ತಿದೆ.

ಮಳೆಯಿಂದಾಗಿ ಕೆಆರ್​ಎಸ್​ ಡ್ಯಾಂನ ಒಳಹರಿವು ಹೆಚ್ಚಾಗುತ್ತಿದೆ. ಮಾಹಿತಿಯಂತೆ, 1,455 ಕ್ಯೂಸೆಕ್ ಒಳಹರಿವು ಬರುತ್ತಿದೆ. 448 ಕ್ಯೂಸೆಕ್ ನೀರು ಹೊರ ಹರಿಯುತ್ತಿದೆ. ಅಂದಹಾಗೆಯೇ ಕೆಆರ್​ಎಸ್​ ಡ್ಯಾಂನ ಇಂದಿನ ನೀರಿನ ಮಟ್ಟ ನೋಡುವುದಾದರೆ..

ಇಂದಿನ ಕೆಆರ್‌ಎಸ್ ನೀರಿನ ಮಟ್ಟ

ಗರಿಷ್ಠ ಮಟ್ಟ – 124.80 ಅಡಿ.
ಇಂದಿನ ಮಟ್ಟ – 85.20 ಅಡಿ.
ಗರಿಷ್ಠ ಸಾಂದ್ರತೆ – 49.452 ಟಿಎಂಸಿ
ಇಂದಿನ ಸಾಂದ್ರತೆ – 13.272 ಟಿಎಂಸಿ
ಒಳ ಹರಿವು – 1,455 ಕ್ಯೂಸೆಕ್
ಹೊರ ಹರಿವು – 448 ಕ್ಯೂಸೆಕ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಾರೋ ಬಾರೋ ಮಳೆರಾಯ.. ಹೆಚ್ಚುತ್ತಿದೆ KRS ಡ್ಯಾಂನ ನೀರಿನ ಮಟ್ಟ! ಇಂದು ಎಷ್ಟಿದೆ?

https://newsfirstlive.com/wp-content/uploads/2024/06/KRS.jpg

Load More