/newsfirstlive-kannada/media/post_attachments/wp-content/uploads/2024/07/KRS-Dam-4.jpg)
ಮಂಡ್ಯ: ಮುಂಗಾರು ಮಳೆ ಉತ್ತಮವಾಗಿ ಆಗುತ್ತಿರುವ ಕಾರಣ ರಾಜ್ಯದ ಜಲಾಶಯಗಳಿಗೆ ನೀರಿನ ಕಳೆ ಬಂದಿದೆ. ಇದರ ಜೊತೆಗೆ ಶ್ರೀರಂಗಪಟ್ಟಣ ತಾಲೂಕಿನ ಕೆಆರ್​ಎಸ್​ (Krishna Raja Sagara) ಜಲಾಶಯದ ಒಳ ಹರಿವು ಮತ್ತಷ್ಟು ಹೆಚ್ಚಳವಾಗಿರುವುದು ಅನ್ನದಾತರಿಗೆ ಸಂತಸದ ಸಂಗತಿ ಆಗಿದೆ.
ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಹಿನ್ನೆಲೆಯಲ್ಲಿ ಕೆಆರ್​ಎಸ್​ ಅಣೆಕಟ್ಟೆಯ ನೀರಿನ ಮಟ್ಟ ಏರಿಕೆಯಾಗಿದೆ. ಕೆಆರ್‌ಎಸ್ ಅಣೆಕಟ್ಟೆ ಭರ್ತಿಗೆ ಇನ್ನು ಕೇವಲ ನಾಲ್ಕೇ 4 ಅಡಿ ನೀರು ಮಾತ್ರ ಬಾಕಿ ಇದೆ. 13 ಸಾವಿರಕ್ಕೂ ಅಧಿಕ ಕ್ಯೂಸೆಕ್ ನೀರು ಜಲಾಶಯದತ್ತ ಹರಿದು ಬರುತ್ತಿರುವುದು ಒಳ್ಳೆಯ ವಿಷಯವಾಗಿದೆ.
ಜಲಾಶಯಕ್ಕೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು 124 ಅಡಿ ಇರುವ ಕೆಆರ್​ಎಸ್ ಜಲಾಶಯ ಈಗಾಗಲೇ 120 ಅಡಿಯಷ್ಟು ಭರ್ತಿಯಾಗಿದೆ. ಭರ್ತಿಯಾಗಲು ಇನ್ನು ನಾಲ್ಕು ಅಡಿ ಮಾತ್ರ ಬಾಕಿ ಇದ್ದು ಈ ವಾರದಲ್ಲಿ ತುಂಬುವ ಸಾಧ್ಯತೆ ಇದೆ. ಈ ಮೂಲಕ ಇದೇ ಮೊದಲ ಬಾರಿಗೆ ಕೆಆರ್​ಎಸ್ ಜಲಾಶಯ ಜೂನ್ ತಿಂಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಭರ್ತಿಯಾದಂತೆ ಆಗುತ್ತದೆ. ಜೂನ್​ನಲ್ಲೇ ಭರ್ತಿಯಾದರೆ ಹೊಸ ದಾಖಲೆ ಕೆಆರ್​ಎಸ್ ಬರೆಯಲಿದೆ.
ಇದನ್ನೂ ಓದಿ: ಪ್ರಸಿದ್ಧ ಪುಣ್ಯಕ್ಷೇತ್ರ ಮುರುಡೇಶ್ವರ ದೇವಾಲಯದಲ್ಲಿ ವಸ್ತ್ರ ಸಂಹಿತೆ ಜಾರಿ!
/newsfirstlive-kannada/media/post_attachments/wp-content/uploads/2024/07/KRS_DAM-3.jpg)
124.80 ಅಡಿಯ ಕೆಆರ್‌ಎಸ್ ಡ್ಯಾಂ ಈಗ 120.20 ಅಡಿಯಷ್ಟು ನೀರು ತುಂಬಿದೆ. 49.452 ಟಿಎಂಸಿ ಸಾಂದ್ರತೆಯ ಕನ್ನಂಬಾಡಿ ಕಟ್ಟೆಯಲ್ಲಿ 43.298 ಟಿಎಂಸಿ ನೀರು ಸಂಗ್ರಹವಾಗಿದೆ. ಜಲಾಶಯದಿಂದ 1,965 ಕ್ಯೂಸೆಕ್ ನೀರು ಹೊರ ಹರಿವು ಇದೆ.
ಇಂದಿನ ಜಲಾಶಯದ ನೀರಿನ ಮಟ್ಟ ಹೇಗಿದೆ?
- ಗರಿಷ್ಠ ಮಟ್ಟ- 124.80 ಅಡಿ
- ಇಂದಿನ ಮಟ್ಟ- 120.20 ಅಡಿ
- ಒಳಹರಿವು- 13,856 ಕ್ಯೂಸೆಕ್
- ಹೊರಹರಿವು- 1,965 ಕ್ಯೂಸೆಕ್
- ಗರಿಷ್ಠ ಸಾಮರ್ಥ್ಯ- 49.452 ಟಿಎಂಸಿ
- ಇಂದಿನ ಸಾಮರ್ಥ್ಯ- 43.298 ಟಿಎಂಸಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us