Advertisment

KRS ಡ್ಯಾಂನಿಂದ ಭಾರೀ ಪ್ರಮಾಣದಲ್ಲಿ ನೀರು ರಿಲೀಸ್.. ಅಪಾಯ ಮಟ್ಟ ಮೀರಿ ಹರಿಯುತ್ತಿರೋ ಕಾವೇರಿ ನದಿ​

author-image
Bheemappa
Updated On
KRS ಡ್ಯಾಂನಿಂದ ಭಾರೀ ಪ್ರಮಾಣದಲ್ಲಿ ನೀರು ರಿಲೀಸ್.. ಅಪಾಯ ಮಟ್ಟ ಮೀರಿ ಹರಿಯುತ್ತಿರೋ ಕಾವೇರಿ ನದಿ​
Advertisment
  • ಕಬ್ಬು, ತೆಂಗು, ಭತ್ತ, ಅಡಿಕೆ ಸೇರಿದಂತೆ ಹಲವು ಬೆಳೆ ಮುಳುಗಡೆ
  • ಪ್ರವಾಸಿ ತಾಣಗಳು, ಧಾರ್ಮಿಕ ಕ್ಷೇತ್ರಗಳಿಗೂ ತಟ್ಟಿದ ಜಲ ಕಂಟಕ
  • ನದಿ ಪಕ್ಕದ ಮನೆಗಳಿಗೂ ನೀರು ನುಗ್ಗುವ ಭೀತಿ, ಜನರಲ್ಲಿ ಆತಂಕ

ಮಂಡ್ಯ: ಕಾವೇರಿ ಜಲಾನಯನ ಪ್ರದೇಶದ ಸುತ್ತಮುತ್ತ ಮಳೆ ಹಿನ್ನೆಲೆಯಲ್ಲಿ ಕೆಆರ್​ಎಸ್​ (ಕೃಷ್ಣ ರಾಜ ಸಾಗರ) ಡ್ಯಾಂನಿಂದ 90 ಸಾವಿರ ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲಾಗಿದೆ. ಇದರಿಂದ ನದಿ ಪಾತ್ರದ ಜಮೀನುಗಳಲ್ಲಿ ಬೆಳೆಯಲಾಗಿದ್ದ ಕಬ್ಬು, ತೆಂಗು, ಭತ್ತ, ಅಡಿಕೆ ಸೇರಿದಂತೆ ಹಲವು ಬೆಳೆಗಳು ಮುಳುಗಡೆಯಾಗಿವೆ.

Advertisment

ಇದನ್ನೂ ಓದಿ:ಮಳೆಗೆ ಗುಡ್ಡ ಕುಸಿಯೋ ಭೀತಿ, ನ್ಯೂಸ್​ಫಸ್ಟ್​​ ವರದಿಗೆ ಎಚ್ಚೆತ್ತ ಜಿಲ್ಲಾಡಳಿತ.. ಈ ಜಿಲ್ಲೆಗಳ ಶಾಲೆಗಳಿಗೆ ರಜೆ

ಕ್ಷಣ ಕ್ಷಣಕ್ಕೂ ಕೆಆರ್​ಎಸ್​ ಡ್ಯಾಂ ಒಳಹರಿವು ಹೆಚ್ಚಳವಾಗುತ್ತಿದೆ. ಜಲಾಶಯದಿಂದ ನೀರು ರಿಲೀಸ್ ಮಾಡಿದ್ದರಿಂದ ನದಿ ಪಾತ್ರದ ಜನರಲ್ಲಿ ಆತಂಕ ಹೆಚ್ಚಾಗಿದೆ. ಧಾರ್ಮಿಕ ಕ್ಷೇತ್ರ, ಪ್ರವಾಸಿ ತಾಣಗಳಿಗೂ ಜಲ ಕಂಟಕ ತಟ್ಟಿದೆ. ನಿಮಿಷಾಂಬ ದೇವಾಲಯ, ರಂಗನಾಥ ಸ್ವಾಮಿ, ಪಶ್ಚಿಮ ವಾಹಿನಿಯ ಸ್ನಾನಘಟ್ಟಗಳು ಮುಳುಗಡೆಯಾಗಿವೆ. ನದಿ ಪಕ್ಕದ ಮನೆಗಳಿಗೂ ನೀರು ನುಗ್ಗುವ ಭೀತಿ ಇದ್ದು ನದಿ ನೀರು ಮತ್ತಷ್ಟು ಹೆಚ್ಚಾದರೆ ಅಪಾಯ ಪಕ್ಕಾ ಎನ್ನಲಾಗುತ್ತಿದೆ. ಹೀಗಾಗಿ ನದಿ ಪಾತ್ರದ ಜನರು ಆತಂಕದಲ್ಲೇ ದಿನ ಕಳೆಯುತ್ತಿದ್ದಾರೆ.

ಇದನ್ನೂ ಓದಿ: ದರ್ಶನ್​ ಪತ್ನಿ ವಿಜಯಲಕ್ಷ್ಮಿ ‘ನವಚಂಡಿಕಾ ಯಾಗ’ ಹೇಗೆ ನಡೆಸ್ತಾರೆ.. ಇದರ ಮಹತ್ವದ ಬಗ್ಗೆ ಗೂರೂಜಿ ಹೇಳುವುದೇನು?

Advertisment

publive-image

ಇಂದಿನ ಕೆಆರ್‌ಎಸ್ ನೀರಿನ ಮಟ್ಟ

ಗರಿಷ್ಠ ಮಟ್ಟ- 124.80 ಅಡಿ
ಇಂದಿನ ಮಟ್ಟ- 124.35 ಅಡಿ
ಗರಿಷ್ಠ ಸಾಂದ್ರತೆ- 49.452 ಟಿಎಂಸಿ
ಇಂದಿನ ಸಾಂದ್ರತೆ- 48.824 ಟಿಎಂಸಿ
ಒಳ ಹರಿವು- 90,000 ಕ್ಯೂಸೆಕ್
ಹೊರ ಹರಿವು- 80,000 ಕ್ಯೂಸೆಕ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment