/newsfirstlive-kannada/media/post_attachments/wp-content/uploads/2023/07/krs-1.jpg)
ಮಂಡ್ಯ: ರಾಜ್ಯದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ರೈತರ ಮೊಗದಲ್ಲಿ ಸಂತಸವಿತ್ತು. ಆದರೀಗ ಮಳೆ ಕೊಂಚ ಕಡಿಮೆಯಾಗಿದೆ. ಅದರಲ್ಲೂ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ತಗ್ಗಿದೆ. ಪರಿಣಾಮ ಕೃಷ್ಣ ರಾಜಸಾಗರ ಅಣೆಕಟ್ಟಿಗೆ ಬರುವ ಒಳ ಹರಿವಿನ ಪ್ರಮಾಣ ಇಳಿಕೆಯಾಗಿದೆ.
ನಿನ್ನೆ 3405 ಕ್ಯೂಸೆಕ್ ಇದ್ದ ಒಳಹರಿವು, ಇಂದು 2893 ಕ್ಯೂಸೆಕ್ ಗೆ ಇಳಿಕೆಯಾಗಿದೆ. ಇದಲ್ಲದೆ, ಡ್ಯಾಂನಿಂದ ಕುಡಿಯುವ ನೀರಿಗಾಗಿ 537 ಕ್ಯೂಸೆಕ್ ನೀರು ಹೊರಕ್ಕೆ ಹರಿಸಲಾಗುತ್ತದೆ.
124.80 ಗರಿಷ್ಠ ಮಟ್ಟದ ಡ್ಯಾಂನಲ್ಲಿ ಸದ್ಯ 83.20 ಅಡಿ ನೀರು ಸಂಗ್ರಹವಾಗಿದೆ. 49.452 ಟಿಎಂಸಿ ಸಾಮರ್ಥ್ಯದ ಡ್ಯಾಂನಲ್ಲಿ ಸದ್ಯ 12.269 ಟಿಎಂಸಿ ನೀರು ಮಾತ್ರ ಇದೆ.
ಇದನ್ನೂ ಓದಿ:ಮಳೆಗೆ ನೀರು ತರಲು ಹೋದ ಮಹಿಳೆಗೆ ಮೃತ್ಯಕೂಪವಾದ ಮರ.. ಇದೆಂಥಾ ದುರಾದೃಷ್ಟ
ಇಂದಿನ ಕೆಆರ್‌ಎಸ್ ನೀರಿನ ಮಟ್ಟ
ಗರಿಷ್ಠ ಮಟ್ಟ - 124.80 ಅಡಿ.
ಇಂದಿನ ಮಟ್ಟ - 83.20 ಅಡಿ.
ಗರಿಷ್ಠ ಸಾಂದ್ರತೆ - 49.452 ಟಿಎಂಸಿ
ಇಂದಿನ ಸಾಂದ್ರತೆ - 12.269 ಟಿಎಂಸಿ
ಒಳ ಹರಿವು - 2,893 ಕ್ಯೂಸೆಕ್
ಹೊರ ಹರಿವು - 537 ಕ್ಯೂಸೆಕ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ