/newsfirstlive-kannada/media/post_attachments/wp-content/uploads/2025/06/KRS.jpg)
ರಾಜ್ಯದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಜಲಾಶಯಗಳಿಗೆ ಕಳೆ ಬಂದಿದೆ. ಅದರಂತೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೆಆರ್ಎಸ್ (Krishna Raja Sagara) ಡ್ಯಾಂನ ಒಳ ಹರಿವಿನಲ್ಲಿ ಮತ್ತಷ್ಟು ಹೆಚ್ಚಳವಾಗಿದೆ.
ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆ ಹಿನ್ನೆಲೆಯಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. 29,368 ಕ್ಯೂಸೆಕ್ಗೆ ಒಳ ಹರಿವು ಏರಿಕೆ ಆಗಿದೆ. ಸದ್ಯ ಕನ್ನಂಬಾಡಿ ಕಟ್ಟೆ 113 ಅಡಿಗೆ ಭರ್ತಿ ಆಗಿದೆ. 124.80 ಅಡಿ ಗರಿಷ್ಠ ಮಟ್ಟವನ್ನು ಕೆಆರ್ಎಸ್ ಹೊಂದಿದೆ.
ಡ್ಯಾಂ ಭರ್ತಿಯತ್ತ ಸಾಗುತ್ತಿರೋದ್ರಿಂದ ರೈತರಲ್ಲಿ ಮೊಗದಲ್ಲಿ ಸಂತಸ ಮೂಡಿದೆ. ಇನ್ನು, ಸಂಪೂರ್ಣ ಭರ್ತಿಗೆ ಕೇವಲ 11 ಅಡಿ ಮಾತ್ರ ಬಾಕಿಯಿದೆ. ಸದ್ಯ ಡ್ಯಾಂನಲ್ಲಿ 35.118 ಟಿಎಂಸಿ ನೀರು ಸಂಗ್ರಹವಾಗಿದೆ.
ಇದನ್ನೂ ಓದಿ: ರಾಜ್ಯದಲ್ಲಿ ಮುಂದುವರಿದ ಮಳೆರಾಯನ ಆರ್ಭಟ.. ನದಿ ಪಾತ್ರದ ಜನರಿಗೆ ಎಚ್ಚರ ಎಚ್ಚರ..
KRS ಡ್ಯಾಂನ ನೀರಿನ ಮಟ್ಟ
- ಗರಿಷ್ಠ ಮಟ್ಟ : 124.80 ಅಡಿ
- ಇಂದಿನ ಮಟ್ಟ : 113.25 ಅಡಿ
- ಒಳ ಹರಿವು : 29,368 ಕ್ಯೂಸೆಕ್
- ಹೊರ ಹರಿವು : 1024 ಕ್ಯೂಸೆಕ್
- ಗರಿಷ್ಠ ನೀರು ಸಂಗ್ರಹ ಸಾಮರ್ಥ್ಯ : 49.452 ಟಿಎಂಸಿ
- ಇಂದಿನ ಸಂಗ್ರಹ ಸಾಮರ್ಥ್ಯ ಟಿಎಂಸಿ: 35.118 ಟಿಎಂಸಿ
ಇದನ್ನೂ ಓದಿ: ನಮ್ಮ ಮೆಟ್ರೋ ನಿಲ್ದಾಣದಲ್ಲಿ ಅಮುಲ್ ಮಳಿಗೆ.. ಕನ್ನಡಿಗರಿಂದ ಭಾರೀ ವಿರೋಧ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ