Advertisment

KRS ಡ್ಯಾಮ್​​ನಲ್ಲಿ ಒಂದೇ ದಿನ ಭರ್ಜರಿ ಒಳಹರಿವು.. ನಿರೀಕ್ಷೆಗೂ ಮೀರಿ ಭರ್ತಿ ಆಗ್ತಿದೆ ಡ್ಯಾಮ್..!

author-image
Ganesh
Updated On
ಮುಂದುವರೆದ ವರುಣಾರ್ಭಟ.. KRS​ಗೆ ಬಂತು ನೀರೇ ನೀರು.. ಇಂದು ಡ್ಯಾಂನ ನೀರಿನ ಮಟ್ಟ ಎಷ್ಟಿದೆ ಗೊತ್ತಾ?
Advertisment
  • ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯ ಅಬ್ಬರ ಜೋರು
  • ಕೆಆರ್‌ಎಸ್ ಡ್ಯಾಂ‌ಗೆ 10 ಸಾವಿರ ಕ್ಯೂಸೆಕ್ ಒಳಹರಿವು ಹೆಚ್ಚಳ
  • ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಡ್ಯಾಂ

ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯ ಅಬ್ಬರ ಜೋರಾಗಿದೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ಕೆಆರ್​​ಎಸ್ ಡ್ಯಾಂ‌ಮ್​​ನಲ್ಲಿ 10 ಸಾವಿರ ಕ್ಯೂಸೆಕ್ ಒಳಹರಿವು ಹೆಚ್ಚಳವಾಗಿದೆ. ಈ ಮೂಲಕ ಒಂದೇ ದಿನ ಡ್ಯಾಮ್​​ನಲ್ಲಿ 2 ಅಡಿ ನೀರು ಏರಿಕೆಯಾಗಿದೆ.

Advertisment

ಕಳೆದ ಮೂರು ದಿನಗಳಿಂದ ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದೆ. ಮಳೆಯ ಅಬ್ಬರದಿಂದ ಕೆಆರ್‌ಎಸ್‌ ಒಳಹರಿವು ಹೆಚ್ಚಳವಾಗಿದೆ. ಇಂದು ಕೆಆರ್‌ಎಸ್‌ಗೆ 13,437 ಕ್ಯೂಸೆಕ್ ಒಳಹರಿವು ಇದೆ. ಇದು ವರ್ಷದಲ್ಲಿ ಅತ್ಯಧಿಕ ಪ್ರಮಾಣದ ಒಳಹರಿವು ಆಗಿದೆ.

ಇದನ್ನೂ ಒದಿ: ಹಾವೇರಿಯಲ್ಲಿ ಭೀಕರ ಅಪಘಾತ 13 ಸಾವು.. ಮತ್ತಷ್ಟು ಸಾವು ನೋವಿನ ಆತಂಕ.. ಮೃತರ ಗುರುತು ಪತ್ತೆ..

ನಿನ್ನೆ 3,856 ಕ್ಯೂಸೆಕ್‌ ಒಳಹರಿವು ಇತ್ತು. 24 ಗಂಟೆಯ ಅವಧಿಯಲ್ಲಿ 10 ಸಾವಿರ ಕ್ಯೂಸೆಕ್ ಒಳಹರಿವು ಹೆಚ್ಚಳವಾಗಿದೆ. ಅಲ್ಲದೇ ಒಂದೇ ದಿನದಲ್ಲಿ 1 ಟಿಎಂಸಿಗೂ ಅಧಿಕ ನೀರು ಹರಿದು ಬಂದಿದೆ. 49.452 ಟಿಎಂಸಿ ಗರಿಷ್ಠ ಸಾಮಾರ್ಥ್ಯದ ಕೆಆರ್‌ಎಸ್‌ನಲ್ಲಿ 16.118 ಟಿಎಂಸಿ ಸಂಗ್ರಹವಾಗಿದೆ.

Advertisment

ನೀರಿನ ಪ್ರಮಾಣ ಎಷ್ಟಿದೆ..?

  • ಗರಿಷ್ಠ ಮಟ್ಟ -124.80 ಅಡಿ
  • ಇಂದಿನ ಮಟ್ಟ - 90.30 ಅಡಿ
  • ಗರಿಷ್ಠ ಸಾಮರ್ಥ್ಯ - 49.452 ಟಿಎಂಸಿ
  • ಇಂದಿನ ಸಾಮರ್ಥ್ಯ - 16.118 ಟಿಎಂಸಿ
  • ಒಳ ಹರಿವು - 13,437 ಕ್ಯೂಸೆಕ್
  • ಹೊರ ಹರಿವು - 478 ಕ್ಯೂಸೆಕ್

ಇದನ್ನೂ ಓದಿ:ಹಾವೇರಿಯಲ್ಲಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ.. ದೇವರ ದರ್ಶನಕ್ಕೆ ತೆರಳಿದ್ದ 13 ಭಕ್ತರು ದಾರುಣ ಸಾವು

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment