ಗುಡ್​​ನ್ಯೂಸ್.. ಕೆಆರ್​​ಎಸ್​ ಡ್ಯಾಂ ತುಂಬಲು ಕೆಲವೇ ಅಡಿಗಳು ಮಾತ್ರ ಬಾಕಿ..

author-image
Bheemappa
Updated On
ಮುಂದುವರೆದ ವರುಣಾರ್ಭಟ.. KRS​ಗೆ ಬಂತು ನೀರೇ ನೀರು.. ಇಂದು ಡ್ಯಾಂನ ನೀರಿನ ಮಟ್ಟ ಎಷ್ಟಿದೆ ಗೊತ್ತಾ?
Advertisment
  • ಒಂದೇ ದಿನದಲ್ಲಿ ಭಾರೀ ಪ್ರಮಾಣದಲ್ಲಿ ಹರಿದು ಬಂದಿರುವ ಮಳೆ ನೀರು
  • ನಿರಂತರ ಮಳೆಯಿಂದ ಕೆಆರ್‌ಎಸ್ ಒಳಹರಿವಿನ ಪ್ರಮಾಣ ಹೆಚ್ಚಳ
  • ವರುಣಾರ್ಭಟದಿಂದ ಇಂದು ಕೆಆರ್​ಎಸ್​ ಒಳ ಹರಿವಿನ ಮಟ್ಟ ಎಷ್ಟು?

ಮಂಡ್ಯ: ರಾಜ್ಯದ ಹಲವು ಪ್ರದೇಶಗಳಲ್ಲಿ ವರುಣಾರ್ಭಟ ಜೋರಾಗಿದ್ದು ಇತ್ತ ಕಾವೇರಿ ಜಲಾನಯನ ಪ್ರದೇಶದಲ್ಲೂ ಧಾರಾಕಾರ ಮಳೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಾವೇರಿ ಒಡಲು ತುಂಬಲು ಇನ್ನೇನು ಕೆವಲ 11 ಟಿಎಂಸಿ ಮಾತ್ರ ಬಾಕಿ ಉಳಿದಿದೆ.

ಇದನ್ನೂ ಓದಿ: ಹಿಟ್ ಅಂಡ್​ ರನ್​​ಗೆ ASI ಬಲಿ.. ಅಪಘಾತದ ಹೊಡೆತಕ್ಕೆ ಅಧಿಕಾರಿಯ ತಲೆ ನಜ್ಜುಗುಜ್ಜು..

ಕಾವೇರಿ ಜಲಾನಯನ ಪ್ರದೇಶದಲ್ಲಿ ನಿರಂತರ ಮಳೆಯಿಂದ ಕೆಆರ್‌ಎಸ್ (ಕೃಷ್ಣ ರಾಜ ಸಾಗರ) ಜಲಾಶಯದ ಒಳಹರಿವಿನ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಭರ್ತಿಯಾಗಲು ಕೆಲವು ಟಿಎಂಸಿ ನೀರು ಮಾತ್ರ ಬೇಕಾಗಿದೆ. ಜಲಾಶಯದ ಸುತ್ತಮುತ್ತ ಇನ್ನಷ್ಟು ಮಳೆಯಾದರೆ ಅತೀ ಶೀಘ್ರದಲ್ಲೇ ಕೆಆರ್​ಎಸ್​ ಡ್ಯಾಂ ತುಂಬುವುದರಲ್ಲಿ ಯಾವುದೇ ಅನುಮಾನ ಬೇಡ. ಇಂದು ಕೆಆರ್‌ಎಸ್​​ನ ಒಳಹರಿವಿನ ಮಟ್ಟ 44,617 ಕ್ಯೂಸೆಕ್ ಇದೆ. 116.60 ಅಡಿ ನೀರಿನ ಮಟ್ಟ ತಲುಪಿದೆ. ಕೆಆರ್‌ಎಸ್ ಅಣೆಕಟ್ಟೆಯ ಗರಿಷ್ಠ ಮಟ್ಟ 124.80 ಅಡಿ ಆಗಿದೆ.

ಇದನ್ನೂ ಓದಿ: ಭಾರೀ ಮಳೆ-ಗಾಳಿ.. ಅಪಾಯದ ಮಟ್ಟ ಮೀರಿದ ಕಾವೇರಿ.. ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ

publive-image

ಕನ್ನಂಬಾಡಿ ಕಟ್ಟೆ ಭರ್ತಿಗೆ ಕೇವಲ 8 ಅಡಿಗಳು ಮಾತ್ರ ಬಾಕಿ ಇವೆ. ಕೆಆರ್‌ಎಸ್‌ನಲ್ಲಿ 38.900 ಟಿಎಂಸಿ ನೀರು ಸಂಗ್ರಹವಾಗಿದೆ. ಇನ್ನೂ‌ ಭರ್ತಿಗೆ ಬೇಕಿರೋದು ಕೇವಲ 11 ಟಿಎಂಸಿ ನೀರು ಮಾತ್ರ. ಇಂದು ಕೆಆರ್‌ಎಸ್​ನ ಹೊರ ಹರಿವು 2,566 ಕ್ಯೂಸೆಕ್ ಇದೆ.

ಇಂದಿನ ಕೆಆರ್‌ಎಸ್ ನೀರಿನ ಮಟ್ಟ

  • ಗರಿಷ್ಠ ಮಟ್ಟ- 124.80 ಅಡಿ
  • ಇಂದಿನ ಮಟ್ಟ- 116.60 ಅಡಿ
  • ಗರಿಷ್ಠ ಸಾಮರ್ಥ್ಯ- 49.452 ಟಿಎಂಸಿ
  • ಇಂದಿನ ಸಾಮರ್ಥ್ಯ- 38.900 ಟಿಎಂಸಿ
  • ಒಳ ಹರಿವು- 44,617 ಕ್ಯೂಸೆಕ್
  • ಹೊರ ಹರಿವು- 2,566 ಕ್ಯೂಸೆಕ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment