Advertisment

KRS ಒಳಹರಿವು ಭಾರೀ ಹೆಚ್ಚಳ.. ಅಪಾಯದ ಮಟ್ಟ ಮೀರಿದ ಕಾವೇರಿಯಲ್ಲಿ ಕೊಚ್ಚಿ ಹೋದ ಯುವಕ

author-image
Bheemappa
Updated On
KRS ಒಳಹರಿವು ಭಾರೀ ಹೆಚ್ಚಳ.. ಅಪಾಯದ ಮಟ್ಟ ಮೀರಿದ ಕಾವೇರಿಯಲ್ಲಿ ಕೊಚ್ಚಿ ಹೋದ ಯುವಕ
Advertisment
  • ಯುವಕ ಕೊಚ್ಚಿಕೊಂಡ ಹೋಗುತ್ತಿರುವ ದೃಶ್ಯ ಮೊಬೈಲ್​​ನಲ್ಲಿ ಸೆರೆ
  • KRS​ ಡ್ಯಾಂನಿಂದ 15 ಸಾವಿರ ಕ್ಯೂಸೆಕ್​ಗೂ ಅಧಿಕ ನೀರು ರಿಲೀಸ್
  • ಘಟನೆ ನಡೆದ ಸ್ಥಳದಿಂದ 4 ಕಿ. ಮೀ ದೂರದಲ್ಲಿ ಮೃತದೇಹ ಪತ್ತೆ

ದೋ ಅಂತಾ ಅಬ್ಬರಿಸುತ್ತಿರೋ ಮಳೆರಾಯ ಅವಾಂತರ ಅಟಾಟೋಪ ಕಮ್ಮಿ ಏನು ಆಗಿಲ್ಲ. ಸಾಕಷ್ಟು ಅವಾಂತರಗಳನ್ನೇ ಎಬ್ಬಿಸಿದ್ದಾನೆ. ಹಲವೆಡೆ ಮಳೆಯಿಂದಾಗಿ ಅನಾಹುತ ಸೃಷ್ಟಿಯಾಗಿದೆ. ಎಲ್ಲೆಲ್ಲಿ ಏನ್​ ಏನ್​ ಆಗಿದೆ ಅನ್ನೋ ಮಾಹಿತಿ​ ಇಲ್ಲಿದೆ.

Advertisment

ರೈತರಿಂದಲೇ ನಿರ್ಮಾಣಗೊಂಡ ಚಿಕ್ಕ ಬ್ಯಾರೇಜ್ ಮುಳುಗಡೆ

ಮಹಾರಾಷ್ಟ್ರದಲ್ಲಿ ಮಳೆಯ ಆರ್ಭಟಕ್ಕೆ ಬಾಗಲಕೋಟೆ‌ ಜಿಲ್ಲೆಯ ಕೃಷ್ಣ ನದಿಗೆ ಅಪಾರ ಪ್ರಮಾಣದ‌ ನೀರು ಹರಿದು ಬರುತ್ತಿದೆ. 60 ಸಾವಿರ ಕ್ಯೂಸೆಕ್​ಗೂ ಅಧಿಕ ಪ್ರಮಾಣದ ‌ನೀರು ಹರಿದು ಬರ್ತಿರೋದ್ರಿಂದ ಜಮಖಂಡಿ ತಾಲೂಕಿನ ಚಿಕ್ಕಪಡಸಲಗಿಯ ರೈತರಿಂದಲೇ ನಿರ್ಮಾಣಗೊಂಡ ಶ್ರಮಬಿಂದು‌ಸಾಗರದ ಚಿಕ್ಕ ಬ್ಯಾರೇಜ್ ಮುಳುಗಡೆಯಾಗಿದೆ. ಇಲ್ಲಿಂದಲೇ ಹರಿದು ಹೋಗೋ ಕೃಷ್ಣೇ ನೀರು ಆಲಮಟ್ಟಿ ಜಲಾಶಯಕ್ಕೆ ಸೇರುತ್ತೆ. ಸದ್ಯ ಅಲಮಟ್ಟಿಯಲ್ಲಿ 97 ಟಿಎಂಸಿಗಿಂತಲೂ ಅಧಿಕ ನೀರು ಸಂಗ್ರಹವಾಗಿದ್ದು, ನಾರಾಯಣಪುರ ಜಲಾಶಯಕ್ಕೆ ನೀರನ್ನ ಹೊರಬಿಡಲಾಗುತ್ತಿದೆ.

ಇದನ್ನೂ ಓದಿ:₹1 ಪಡೆಯದೇ ವಿನೋದ್ ದೋಂಡಾಲೆ ಜೊತೆ ಸಿನಿಮಾ ಮಾಡ್ತಿದ್ದೆ.. ಕಣ್ಣೀರು ಹಾಕಿ ಸತೀಶ್​ ನೀನಾಸಂ ಹೇಳಿದ್ದೇನು?

publive-image

ಸೇತುವೆ ಮೇಲೆ ಭಾರಿ ವಾಹನಗಳ ಸಂಚಾರಕ್ಕೆ ಬ್ರೇಕ್

ಜಾಂಬೋಟಿ ಬಳಿಯ ಕುಸಮಳಿ ಗ್ರಾಮದ ಬಳಿಯ ಸೇತುವೆ ಮೇಲೆ ಭಾರಿ ವಾಹನಗಳ ಸಂಚಾರಕ್ಕೆ ಬೆಳಗಾವಿ ಜಿಲ್ಲಾಡಳಿತ ಬ್ರೇಕ್ ಹಾಕಿದೆ. ಜಾಂಬೋಟಿ ಗ್ರಾಮದ ವ್ಯಾಪ್ತಿಯಲ್ಲಿ ಭಾರಿ ವಾಹನಗಳು ಸಾಲುಗಟ್ಟಿ ನಿಂತಿವೆ. ಚೋರ್ಲಾಗೆ ಹೋಗುವವರನ್ನ ಪೀರನವಾಡಿ ಕ್ರಾಸ್​ನಿಂದ ಖಾನಾಪುರ ಮಾರ್ಗವಾಗಿ ಹೋಗುವಂತೆ ಸೂಚಿಸಲಾಗಿದೆ.

Advertisment

ಕಾವೇರಿ ನದಿಯಲ್ಲಿ ಕೊಚ್ಚಿ ಹೋದ ಅಪರಿಚಿತ ಯುವಕ

ಉಕ್ಕಿ ಹರಿಯುತ್ತಿರುವ ಕಾವೇರಿ ನದಿಯಲ್ಲಿ ಅಪರಿಚಿತ ಯುವಕನೊಬ್ಬ ಕೊಚ್ಕೊಂಡು ಹೋದ ಘಟನೆ ಮಂಡ್ಯ ಜಿಲ್ಲೆ ಮಳವಳ್ಳಿಯ ಮುತ್ತತ್ತಿ ಬಳಿ ನಡೆದಿದೆ. ನದಿಯಲ್ಲಿ ಸ್ನಾನ ಮಾಡುವ ವೇಳೆ ಕೊಚ್ಚಿ ಹೋಗಿರುವ ಶಂಕೆ ವ್ಯಕ್ತವಾಗಿದ್ದು, ಮೊಬೈಲ್​ನಲ್ಲಿ ಸೆರೆ ಹಿಡಿಯಲಾಗಿರುವ ದೃಶ್ಯಾವಳಿಗಳು ನ್ಯೂಸ್​ಫಸ್ಟ್​ಗೆ ಲಭ್ಯವಾಗಿದೆ.

ಕೃಷ್ಣರಾಜ ಅಣೆಕಟ್ಟಿನ ಒಳ ಹರಿವಿನಲ್ಲಿ ಮತ್ತಷ್ಟು ಹೆಚ್ಚಳ

ಕೃಷ್ಣರಾಜ ಅಣೆಕಟ್ಟಿನಲ್ಲಿ ಸುಮಾರು 60 ಸಾವಿರದ 224 ಕ್ಯೂಸೆಕ್​ ನಷ್ಟು ನೀರು ಒಳ ಹರಿವಿದ್ದು, ಒಟ್ಟು 121.40 ಅಡಿ ಭರ್ತಿಯಾಗಿದೆ. ಕೆಆರ್​ಎಸ್​ ಡ್ಯಾಂನಿಂದ 15 ಸಾವಿರ ಕ್ಯೂಸೆಕ್​ಗೂ ಅಧಿಕ ನೀರು ನದಿಗೆ ಬಿಡುಗಡೆ ಮಾಡಲಾಗಿದೆ. ಇಂದೂ ಸಹ ಇದೇ ರೀತಿ ಒಳ ಹರಿವು ಬಂದ್ರೆ.. ಹಂತ ಹಂತವಾಗಿ ಹೊರ ಹರಿವಿನಲ್ಲೂ ಹೆಚ್ಚಳ ಮಾಡಲು ನಿರ್ಧರಿಸಲಾಗಿದೆ.

ಅರಬ್ಬಿ ಸಮುದ್ರದ ಪೂರ್ವ ಭಾಗದಲ್ಲಿ ವಾಯುಭಾರ ಕುಸಿತ

ಕರಾವಳಿ ಜಿಲ್ಲೆ ಉಡುಪಿಗೆ ವರುಣಾಘಾತದ ಬೆನ್ನಿಗೆ ಐಎಂಡಿ ಮತ್ತೊಂದು ಕಟ್ಟೆಚ್ಚರ ರವಾನಿಸಿದೆ. ಅರಬ್ಬಿ ಸಮುದ್ರದ ಪೂರ್ವ ಭಾಗದಲ್ಲಿ ವಾಯುಭಾರ ಕುಸಿತವಾಗಿದೆ. ಸಮುದ್ರದಲ್ಲಿ 50 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸಲಿದ್ದು, ಸಮುದ್ರಕೊರೆತ ಕಾಣಿಸಿಕೊಂಡಿದೆ. ಗುಜ್ಜರಬೆಟ್ಟು ವ್ಯಾಪ್ತಿಯಲ್ಲಿ ಭೂಭಾಗ ತೆಂಗಿನ ಮರಗಳು, ಕಲ್ಲಿನ ತಡೆಗೋಡೆ ಸಮುದ್ರ ಪಾಲಾಗಿದೆ.

Advertisment

ಇದನ್ನೂ ಓದಿ: ಮುಂಬೈ ಇಂಡಿಯನ್ಸ್​​ಗೆ​ ಬಿಗ್ ಶಾಕ್.. ರೋಹಿತ್, ಸೂರ್ಯ ಬೇರೆ ಟೀಮ್​ಗೆ ಹೋಗೋದು ಕನ್​ಫರ್ಮ್​?

publive-image

ನದಿ ದಾಟುವಾಗ ನೀರು ಪಾಲಾಗಿದ್ದ ಆನಂದ್​ ಮೃತದೇಹ ಪತ್ತೆ

ನಾಡ್ಪಾಲು ಗ್ರಾಮದ ಚೇರೋಳಿಯಲ್ಲಿ ನದಿ ದಾಟುತ್ತಿದ್ದ ವೇಳೆ ಕಳೆದ ಬುಧವಾರ ನೀರು ಪಾಲಾಗಿದ್ದ ಆನಂದ್​ ಮೃತದೇಹ ಪತ್ತೆಯಾಗಿದೆ. ಘಟನೆ ನಡೆದ ಸ್ಥಳದಿಂದ 4 ಕಿಲೋ ಮೀಟರ್ ದೂರದಲ್ಲಿ ಮೃತದೇಹ ಪತ್ತೆಯಾಗಿದ್ದು, ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದಲ್ಲಿ ಇನ್ನೂ ಐದು ದಿನ ಮುಂದುವರೆಯಲಿದೆ ಮಳೆ!

ಕರಾವಳಿ, ಉತ್ತರ ಒಳನಾಡು, ಮಲೆನಾಡು, ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮುಂದಿನ 5 ದಿನ ಭಾರೀ ಮಳೆಯಾಗುವ ಎಚ್ಚರಿಕೆಯನ್ನ ಹವಮಾನ ಇಲಾಖೆ ಸೂಚಿಸಿದೆ. ಕರಾವಳಿ ಭಾಗದಲ್ಲಿ ರೆಡ್ ಅಲರ್ಟ್ ಮುಂದುವರೆಸಲಾಗಿದೆ. ಬೆಳಗಾವಿ ಆರೆಂಜ್, ಬೀದರ್, ಯಾದಗಿರಿ, ಕಲ್ಬುರ್ಗಿಗೆ ಯಲ್ಲೋ ಅಲರ್ಟ್ ಘೋಷಿಸಲಾಗಿದೆ. ಇವತ್ತು ಶಿರೂರು ಗುಡ್ಡ ಕುಸಿತದ ಜಾಗಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಲಿದ್ದಾರೆ. ಮಳೆರಾಯ ಇನ್ನೂ ಅದೇನ್​ ಏನ್​ ಆವಾಂತರ ಮಾಡೋದಕ್ಕೆ ಕಾದಿದ್ದಾನೋ ಅನ್ನೋ ಭಯದಲ್ಲಿ ಜನರಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment