7 ಇನ್ನಿಂಗ್ಸ್​​ನಲ್ಲಿ ಈ ಸ್ಟಾರ್​ ಬ್ಯಾಟ್​​ನಿಂದ ಬಂದ ಸ್ಕೋರ್ ಜಸ್ಟ್ 24 -ಭಾರೀ ಆಕ್ರೋಶ

author-image
Ganesh
Updated On
ವಿರಾಟ್​ ಕೊಹ್ಲಿ V/S ಕೆ.ಎಲ್‌ ರಾಹುಲ್ ಸಮರ; ಇವತ್ತಿನ RCB ಟಾರ್ಗೆಟ್ ಪ್ಲೇ ಆಫ್​ ಅಲ್ಲವೇ ಅಲ್ಲ!
Advertisment
  • ಬೌಲಿಂಗ್​ನಲ್ಲಿ ಓಕೆ ಓಕೆ.. ಬ್ಯಾಟಿಂಗ್​ನಲ್ಲಿ ಫೇಲ್
  • 5.75 ಕೋಟಿಗೆ ಖರೀದಿ ಆಗಿರುವ ಆಲ್​ರೌಂಡರ್
  • 7 ಪಂದ್ಯಗಳ ಒಟ್ಟು ಸ್ಕೋರ್ 24 ಆಗಿದೆ

ಚಿನ್ನಸ್ವಾಮಿಯಲ್ಲಿ ಸತತ ಮೂರು ಪಂದ್ಯ ಸೋಲ್ತಿದ್ದಂತೆಯೇ ಕೆಲವು ಆಟಗಾರರ ಮೇಲೆ ಭಾರೀ ಆಕ್ರೋಶ ವ್ಯಕ್ತವಾಗ್ತಿದೆ. ಅವರಲ್ಲಿ ಕೃನಾಲ್ ಪಾಂಡ್ಯ ಕೂಡ ಒಬ್ಬರು.

ಬೌಲಿಂಗ್​ನಲ್ಲಿ ಸೈ ಎನಿಸಿಕೊಂಡಿರುವ ಕೃನಾಲ್ ಬ್ಯಾಟ್​ನಿಂದ ಯಾವುದೇ ರನ್ ಬರುತ್ತಿಲ್ಲ. ಇದು ಆರ್​ಸಿಬಿಯ ತಲೆನೋವಿಗೆ ಕಾರಣವಾಗಿದೆ. 5.75 ಕೋಟಿಯ ಈ ಆಲ್​ರೌಂಡ್​​, ಆರ್​ಸಿಬಿ ಪರ ಒಟ್ಟು 7 ಪಂದ್ಯಗಳನ್ನು ಆಡಿದ್ದಾರೆ. 7 ಪಂದ್ಯಗಳಲ್ಲಿ ಅವರ ಒಟ್ಟು ಸ್ಕೋರ್​ 24 ಆಗಿದೆ. ಅತ್ಯಧಿಕ 18 ರನ್ಸ್​. ಎರಡು ಬೌಂಡರಿ ಬಿಟ್ಟರೆ, ಯಾವುದೇ ಬಿಗ್​ ಹಿಟ್​ ಇಲ್ಲ.

ಇದನ್ನೂ ಓದಿ: ಹ್ಯಾಟ್ರಿಕ್ ಸೋಲಿನ ಬೆನ್ನಲ್ಲೇ ಆರ್​ಸಿಬಿಗೆ ಮತ್ತೊಂದು ಆಘಾತ..!

publive-image

ಇನ್ನು, ಬೌಲಿಂಗ್​ನಲ್ಲಿ ಆರ್​ಸಿಬಿ ಪರ 120 ಬಾಲ್ ಮಾಡಿದ್ದಾರೆ. 9.60 ಎಕನಾಮಿಕ್ ರೇಟ್​​ನಲ್ಲಿ ಒಟ್ಟು 192 ರನ್​ ಬಿಟ್ಟುಕೊಟ್ಟಿದ್ದಾರೆ. ಜೊತೆಗೆ 8 ವಿಕೆಟ್ ಪಡೆದಿದ್ದಾರೆ. 45ಕ್ಕೆ 4 ವಿಕೆಟ್ ಪಡೆದು ಸಾಧನೆ ಮಾಡಿದ್ದಾರೆ. ಇನ್ನು, ನಿನ್ನೆಯ ಪಂದ್ಯದಲ್ಲಿ ಕೇವಲ 1 ರನ್​​ಗಳಿಸಿ ನಿರಾಸೆ ಮೂಡಿಸಿದ್ದಾರೆ. ಜೊತೆಗೆ ಬೌಲಿಂಗ್​ನಲ್ಲಿ ಒಂದು ಓವರ್ ಮಾಡಿ, 10 ರನ್​ ನೀಡಿ ದುಬಾರಿಯಾದರು.

ಬ್ಯಾಟ್​ನಿಂದ ಯಾವುದೇ ರನ್ ಬಾರದೇ ಇರೋದು ಆರ್​ಸಿಬಿ ಮ್ಯಾನೇಜ್ಮೆಂಟ್​ನ ತಲೆ ನೋವಿಗೆ ಕಾರಣವಾಗಿದೆ. ಪಾಂಡ್ಯ ಬದಲಿಗೆ, ಕನ್ನಡಿಗ ಮನೋಜ್ ಭಾಂಡಗೆ ಅವಕಾಶ ಮಾಡಿಕೊಡಬೇಕು ಅನ್ನೋದು ಹಲವರ ವಾದವಾಗಿದೆ.

ಇದನ್ನೂ ಓದಿ: ರಿಕ್ಕಿ ರೈ ಕೇಸ್​ನಲ್ಲಿ ನಾಲ್ವರ ವಿರುದ್ಧ FIR.. ಪ್ರಕಾಶ್ ರೈ ವ್ಯಕ್ತಪಡಿಸಿದ ಅನುಮಾನ ಏನು?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment