/newsfirstlive-kannada/media/post_attachments/wp-content/uploads/2024/10/RCB_VIRAT.jpg)
2025ರ ಇಂಡಿಯನ್ ಪ್ರೀಮಿಯರ್ ಲೀಗ್ಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೊಸ ಕ್ಯಾಪ್ಟನ್ ಹುಡುಕಾಟದಲ್ಲಿದೆ. ಆರ್ಸಿಬಿ ತಂಡವನ್ನು ವಿರಾಟ್ ಕೊಹ್ಲಿ ಮುನ್ನಡೆಸಬಹುದು. ಇಲ್ಲದೆ ಹೋದಲ್ಲಿ ಕೊಹ್ಲಿ ಆಪ್ತ ರಜತ್ ಪಾಟಿದಾರ್ಗೆ ಆರ್ಸಿಬಿ ತಂಡದ ಕ್ಯಾಪ್ಟನ್ಸಿ ನೀಡಬಹುದು ಅನ್ನೋ ಮಾತುಗಳು ಕೇಳಿ ಬಂದಿವೆ. ಇದರ ಮಧ್ಯೆ ಆರ್ಸಿಬಿ ಕ್ಯಾಪ್ಟನ್ಸಿ ರೇಸ್ನಲ್ಲಿ ಮತ್ತೊಬ್ಬರ ಹೆಸರು ಕೇಳಿ ಬಂದಿದೆ.
ಕ್ಯಾಪ್ಟನ್ಸಿ ರೇಸ್ನಲ್ಲಿ ಕೃನಾಲ್ ಹೆಸ್ರು
ಸದ್ಯ ನಡೆಯುತ್ತಿರೋ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಆಲ್ರೌಂಡರ್ ಕೃನಾಲ್ ಪಾಂಡ್ಯ ನಾಯಕತ್ವದಲ್ಲಿ ಬರೋಡಾ ಇತಿಹಾಸ ಸೃಷ್ಟಿಸಿದೆ. ಸಿಕ್ಕಿಂ ವಿರುದ್ಧದ ಪಂದ್ಯದಲ್ಲಿ ಬರೋಡ ಬರೋಬ್ಬರಿ 349 ರನ್ ಗಳಿಸಿದ್ದು, ಇದು ಟಿ20 ಕ್ರಿಕೆಟ್ ಇತಿಹಾಸದಲ್ಲೇ ಗರಿಷ್ಠ ಸ್ಕೋರ್ ಆಗಿದೆ. ಇದಕ್ಕೆ ಕಾರಣ ಕೃನಾಲ್ ಪಾಂಡ್ಯ ಆಯ್ಕೆ ಮಾಡಿರೋ ತಂಡ. ಇವರು ಹಲವು ವರ್ಷಗಳಿಂದ ಬರೋಡಾ ತಂಡವನ್ನು ಮುನ್ನಡೆಸುತ್ತಿರೋ ಕಾರಣ ಆರ್ಸಿಬಿ ಕ್ಯಾಪ್ಟನ್ ಆಗಬಹುದು ಎಂದು ಹೇಳಲಾಗುತ್ತಿದೆ.
ಬರೋಡಾ ಸಾಧನೆ
ಇಂದೋರ್ನಲ್ಲಿ ಸಿಕ್ಕಿಂ ವಿರುದ್ಧ ನಡೆದ ಲೀಗ್ ಹಂತದ ಕೊನೆಯ ಟಿ20 ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಬರೋಡಾ ಪವರ್ ಪ್ಲೇನಲ್ಲೇ ಮೊದಲ ವಿಕೆಟ್ ನಷ್ಟಕ್ಕೆ 92 ರನ್ ಕಲೆ ಹಾಕಿತ್ತು. ಈ ಮೂಲಕ ಅದ್ಭುತ ಆರಂಭ ಪಡೆಯಿತು. ಬರೋಡಾ ಪರ ಬ್ಯಾಟ್ ಬೀಸಿದ ಶಾಶ್ವತ್ ರಾವತ್ ಕೇವಲ 16 ಎಸೆತಗಳಲ್ಲಿ 43 ರನ್ ಬಾರಿಸಿದ್ರೆ, ಅಭಿಮನ್ಯು ಸಿಂಗ್ ರಜಪೂತ್ 17 ಎಸೆತಗಳಲ್ಲಿ 53 ರನ್ ಚಚ್ಚಿದ್ರು. ರಾವತ್ 4 ಬೌಂಡರಿ ಹಾಗೂ 4 ಸಿಕ್ಸರ್ ಸಿಡಿಸಿದ್ರೆ, ಅಭಿಮನ್ಯು 4 ಬೌಂಡರಿ ಹಾಗೂ 5 ಸಿಕ್ಸರ್ ಬಾರಿಸಿದ್ರು. ಇದಾದ ನಂತರ ಮೂರನೇ ಕ್ರಮಾಂಕದಲ್ಲಿ ಕ್ರೀಸ್ಗೆ ಬಂದ ಭಾನು ಪನಿಯಾ ಅಬ್ಬರಿಸಿದ್ರು. ಇನ್ನಿಂಗ್ಸ್ ಉದ್ಧಕ್ಕೂ ಬೆಂಡೆತ್ತಿದ ಇವರು ಕೇವಲ 51 ಎಸೆತಗಳಲ್ಲಿ 4 ಫೋರ್ ಮತ್ತು 15 ಸಿಕ್ಸರ್ ಜತೆಗೆ ಅಜೇಯ 134 ರನ್ ಗಳಿಸಿದ್ರು.
ಬಿರುಸಿನ ಅರ್ಧಶತಕ
ಶಿವಾಲಿಕ್ ಶರ್ಮಾ ಮತ್ತು ವಿಷ್ಣು ಸೋಲಂಕಿ ಕೂಡ ಬಿರುಸಿನ ಬ್ಯಾಟಿಂಗ್ ಮಾಡಿದ್ರು. ತಾನು ಆಡಿದ 17 ಎಸೆತಗಳಲ್ಲಿ ಶಿವಾಲಿಕ್ 3 ಬೌಂಡರಿ ಹಾಗೂ 6 ಸಿಕ್ಸರ್ ನೆರವಿನಿಂದ 55 ರನ್ ಗಳಿಸಿದರು. ಮತ್ತೊಂದೆಡೆ ವಿಷ್ಣು ಕೇವಲ 16 ಎಸೆತಗಳಲ್ಲಿ 2 ಬೌಂಡರಿ ಮತ್ತು 6 ಸಿಕ್ಸರ್ ಸಹಾಯದಿಂದ 50 ರನ್ ಚಚ್ಚಿದ್ರು. ಬರೋಡ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 349 ರನ್ ಕಲೆ ಹಾಕಿತು. ಈ ಬೃಹತ್ ರನ್‌ಗಳ ಗುರಿ ಬೆನ್ನಟ್ಟಿದ ಸಿಕ್ಕಿಂ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು ಕೇವಲ 87 ರನ್ ಗಳಿಸಿತು. ಬರೋಡಾ ಬರೋಬ್ಬರಿ 37 ಸಿಕ್ಸರ್ಗಳ ಸಿಡಿಸಿ ಸಾಧನೆ ಮಾಡಿದೆ.
ಯಾರು ಈ ಕೃನಾಲ್ ಪಾಂಡ್ಯ?
ಆರ್ಸಿಬಿ ತಂಡ ಇತ್ತೀಚೆಗೆ ಕೃನಾಲ್ ಪಾಂಡ್ಯ ಅವರನ್ನು ಬರೋಬ್ಬರಿ 5.75 ಕೋಟಿ ನೀಡಿ ಖರೀದಿ ಮಾಡಿತ್ತು. ಇವರು ಐಪಿಎಲ್ನಲ್ಲಿ ಈ ಹಿಂದೆ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡವನ್ನು ಪ್ರತಿನಿಧಿಸಿದ್ದಾರೆ. ಕೃನಾಲ್ ಪಾಂಡ್ಯ ಬ್ಯಾಟಿಂಗ್ ಆಲ್ರೌಂಡರ್ ಆಗಿದ್ದು, ಉತ್ತಮವಾಗಿ ಬೌಲಿಂಗ್ ಮಾಡಬಲ್ಲರು. ಇವರು ರಣಜಿ ಕ್ರಿಕೆಟ್ನಲ್ಲಿ ಬರೋಡಾ ತಂಡವನ್ನು ಮುನ್ನಡೆಸುತ್ತಿದ್ದು, ಎಷ್ಟೋ ಪಂದ್ಯಗಳನ್ನು ಏಕಾಂಗಿಯಾಗಿ ಗೆಲ್ಲಿಸಿದ್ದಾರೆ.
ಇದನ್ನೂ ಓದಿ:ಆರ್ಸಿಬಿ ಸೇರಿದ ಬೆನ್ನಲ್ಲೇ ಈ ಆಟಗಾರನಿಗೆ ಖುಲಾಯಿಸಿದ ಅದೃಷ್ಟ; ಫ್ಯಾನ್ಸ್ಗೆ ಭರ್ಜರಿ ಗುಡ್ನ್ಯೂಸ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ