/newsfirstlive-kannada/media/post_attachments/wp-content/uploads/2025/04/KRUNAL-2.jpg)
ರಾಯಲ್ ಚಾಲೆಂಜರ್ಸ್ ಬೆಂಗಳೂರು ಬೌಲರ್ಗಳು ಬೊಂಬಾಟ್ ಬೌಲಿಂಗ್ ಮಾಡಿದ್ರೆ, ಬ್ಯಾಟರ್ಗಳು ಜವಾಬ್ದಾರಿಯುತ ಆಟವಾಡಿದರು. ಅದ್ರಲ್ಲೂ ಕಿಂಗ್ ಕೊಹ್ಲಿ, ಕೃನಾಲ್ ಜುಗಲ್ಬಂದಿಗೆ ಡೆಲ್ಲಿ ಮುಖಭಂಗ ಅನುಭವಿಸಿತು. ಆ ಮೂಲಕ ಚಿನ್ನಸ್ವಾಮಿಯ ಸೇಡು ತೀರಿಸಿಕೊಂಡ ಆರ್ಸಿಬಿ, ಅಂಕಪಟ್ಟಿಯಲ್ಲೂ ಅಗ್ರಸ್ಥಾನಕ್ಕೇರಿದೆ.
163 ರನ್ಗಳ ಟಾರ್ಗೆಟ್ ಬೆನ್ನಟ್ಟಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಚೇಸಿಂಗ್ ಸುಲಭವಾಗಿರಲಿಲ್ಲ. ಫಿಲ್ ಸಾಲ್ಟ್ ಬದಲಿಯಾಗಿ ವಿರಾಟ್ ಜೊತೆಗೆ ಆರಂಭಿಕರಾಗಿ ಕಣಕ್ಕಿಳಿದ ಜೇಕಬ್ ಬೆಥಲ್, 1 ಬೌಂಡರಿ, 1 ಸಿಕ್ಸರ್ ಒಳಗೊಂಡ 12 ರನ್ ಸಿಡಿಸಿ ಅಪಾಯಕಾರಿಯಾಗುವ ಮುನ್ಸೂಚನೆ ನೀಡಿದರು. ಈ ವೇಳೆ ಜೇಕಬ್ ಬೆಥಲ್ಗೆ ಆಕ್ಷರ್ ಬ್ರೇಕ್ ಹಾಕಿದರು.
ಈ ಬೆನ್ನಲ್ಲೇ ಬಂದ ದೇವದತ್ ಪಡಿಕ್ಕಲ್, ಶೂನ್ಯಕ್ಕೆ ಪೆವಿಲಿಯನ್ ಸೇರಿದ್ರೆ. ರಜತ್ ಪಟಿದಾರ್ 6 ರನ್ ಗಳಿಸಿದ್ದಾಗ ಇಲ್ಲದ ರನ್ ಕದಿಯಲು ಯತ್ನಿಸಿ ಕರಣ್ ರನೌಟ್ ಬಲೆಗೆ ಬಿದ್ರು. 26 ರನ್ಗೆ ಪ್ರಮುಖ 3 ವಿಕೆಟ್ ಕಳೆದುಕೊಂಡಿದ್ದ ಆರ್ಸಿಬಿ ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ವಿರಾಟ್ ಕೊಹ್ಲಿ ಜೊತೆಯಾದ ಕೃನಾಲ್ ಪಾಂಡ್ಯ ತಂಡಕ್ಕೆ ಆಸರೆಯಾದ್ರು.
ಇದನ್ನೂ ಓದಿ: ಕೊಹ್ಲಿಗೂ ಅಲ್ಲ, ಕೃನಾಲ್ಗೂ ಅಲ್ಲ.. ಗೆಲುವಿನ ಕ್ರೆಡಿಟ್ ಯಾರಿಗೆ ಕೊಟ್ರು ರಜತ್ ಪಾಟೀದಾರ್..?
ಆರಂಭದಲ್ಲಿ ಸ್ಲೋ ಆ್ಯಂಡ್ ಸ್ಟಡಿ ಇನ್ನಿಂಗ್ಸ್ ಕಟ್ಟಿದ ಕೃನಾಲ್, ಸೆಟಲ್ಡ್ ಆದ್ಮೇಲೆ ಡೆಲ್ಲಿ ಬೌಲರ್ಗಳ ಮೇಲೆ ದಂಡಯಾತ್ರೆ ನಡೆಸಿದ್ರು. 47 ಎಸೆತಗಳಲ್ಲಿ 5 ಬೌಂಡರಿ, 4 ಸಿಕ್ಸರ್ ಒಳಗೊಂಡು 73 ರನ್ ಗಳಿಸಿದರು. ಅತ್ತ ಜವಾಬ್ದಾರಿಯುತ ಬ್ಯಾಟಿಂಗ್ ಮಾಡಿದ ವಿರಾಟ್ ಕೊಹ್ಲಿ, 45 ಎಸೆತಗಳಲ್ಲಿ 50 ರನ್ ಪೂರ್ಣಗೊಳಿಸಿದರು. ಇದರೊಂದಿಗೆ ಈ ಟೂರ್ನಿಯಲ್ಲಿ 6ನೇ ಅರ್ಧಶತಕ ಗಳಿಸಿದರು.
ಕೃನಾಲ್ ಪಾಂಡ್ಯ ಜೊತೆ 119 ರನ್ಗಳ ಜೊತೆಯಾಟವಾಡಿದ ಕೊಹ್ಲಿ, ಗೆಲುವಿನ ಅಂಚಿನಲ್ಲಿ ವಿಕೆಟ್ ಒಪ್ಪಿಸಿ ಹೊರ ನಡೆದರು. ಈ ಬಳಿಕ ಬಂದ ಟಿಮ್ ಡೇವಿಡ್, 5 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್ ಒಳಗೊಂಡ 19 ರನ್ ಚಚ್ಚಿದರು. ಇದರೊಂದಿಗೆ 18.3 ಓವರ್ಗಳಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆಲುವಿನ ದಡ ಸೇರಿತು. ಈ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.
ಇದನ್ನೂ ಓದಿ: ಕೊಹ್ಲಿ, ರಾಹುಲ್ ಮಧ್ಯೆ ಮಾತಿನ ಚಕಮಕಿ -ಕ್ರೀಸ್ನಲ್ಲಿ ಇಬ್ಬರ ಮಧ್ಯೆ ಆಗಿದ್ದೇನು..? VIDEO
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ