/newsfirstlive-kannada/media/post_attachments/wp-content/uploads/2025/04/Krunal_Pandya_1.jpg)
ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡದ ಜೊತೆ ಪಂಜಾಬ್​ ಕಿಂಗ್ಸ್​ ನೆಲಕಚ್ಚುವ ಎಲ್ಲ ಸೂಚನೆಗಳು ಸದ್ಯಕ್ಕೆ ಕಾಣುತ್ತಿವೆ. ಪಂದ್ಯದ ಸಮಯದಲ್ಲಿ ಆರ್​ಸಿಬಿ ಆಲ್​ರೌಂಡರ್​ ಕೃನಾಲ್ ಪಾಂಡ್ಯ ಅತ್ಯದ್ಭುತವಾದ ಕ್ಯಾಚ್ ಹಿಡಿದು ಸಂಭ್ರಮಿಸಿದ್ದಾರೆ.
ಮುಲ್ಲನ್ಪುರ್​​ನ ಮಹಾರಾಜ ಯಾದವೀಂದ್ರ ಸಿಂಗ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಆರ್​ಸಿಬಿ ನಾಯಕ ರಜತ್ ಪಾಟಿದಾರ್, ಎದುರಾಳಿ ಪಂಜಾಬ್ ಅನ್ನು ಬ್ಯಾಟಿಂಗ್​ಗೆ ಆಹ್ವಾನ ಮಾಡಿದರು. ಈ ವೇಳೆ ಕ್ರೀಸ್​ಗೆ ಆಗಮಿಸಿದ ಓಪನರ್ಸ್​ ಪ್ರಿಯಾಂಶ್ ಆರ್ಯ ಹಾಗೂ ಪ್ರಭಸಿಮ್ರನ್ ಸಿಂಗ್ ಉತ್ತಮ ಆರಂಭ ಪಡೆದರು. ಆದರೆ 22 ರನ್​ ಗಳಿಸಿ ಆಡುವಾಗ ಆರ್ಯ ವಿಕೆಟ್​ ಒಪ್ಪಿಸಿದರು.
/newsfirstlive-kannada/media/post_attachments/wp-content/uploads/2025/04/Krunal_Pandya.jpg)
ಇದರಿಂದ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​​ಗೆ ಬಂದ ಕ್ಯಾಪ್ಟನ್​ ಶ್ರೇಯಸ್ ಅಯ್ಯರ್ ಅವರು ಆರ್​ಸಿಬಿ ಬೌಲರ್​ಗಳ ಮೇಲೆ ಮುಗಿ ಬೀಳಲು ಮುಂದಾಗುತ್ತಿದ್ದರು. 6 ರನ್​ ಗಳಿಸಿದ್ದ ಶ್ರೇಯಸ್ ಅಯ್ಯರ್, ರೊಮಾರಿಯೋ ಶೆಫರ್ಡ್ ಓವರ್​ನಲ್ಲಿ ಬಿಗ್​ ಶಾಟ್​ ಮಾಡಿ, ಸಿಕ್ಸರ್​ ಬಾರಿಸಲು ಹೋಗಿದ್ದರಿಂದ ಬಾಲ್ ಆಕಾಶದೆತ್ತರಕ್ಕೆ ಹೋಗಿತ್ತು.
ಈ ವೇಳೆ ಬೌಂಡರಿ ಲೈನ್​ ಬಳಿ ಫೀಲ್ಡಿಂಗ್ ಮಾಡುತ್ತಿದ್ದ ಕೃನಾಲ್ ಪಾಂಡ್ಯ ವೇಗವಾಗಿ ಓಡೋಡಿ ಬಂದು ಸೂಪರ್ ಆಗಿ ಕ್ಯಾಚ್ ಹಿಡಿದು ಡೈವ್ ಹೊಡೆದಿದ್ದಾರೆ. ಶ್ರೇಯಸ್ ಅಯ್ಯರ್ ಹೊಡೆದ ಬಾಲ್​ ಅನ್ನು ಕ್ಯಾಚ್​ ಹಿಡಿದಿದ್ದೇ ಹಿಡಿದಿದ್ದು ಕೃನಾಲ್ ಪಾಂಡ್ಯ, ಚೆಂಡನ್ನು ಮೇಲಕ್ಕೆ ಎಸೆದು ಸಂಭ್ರಮಿಸಿದ್ದಾರೆ. ಪಂಜಾಬ್ ಪರ ಬಿಗ್​ ಬ್ಯಾಟರ್​ನನ್ನು ಔಟ್ ಮಾಡಿರುವುದು ಆರ್​​ಸಿಬಿಗೆ ವರದಾನ ಆಗಿದೆ. ಈ ಪಂದ್ಯದಲ್ಲಿ ಕೃನಾಲ್ ಪಾಂಡ್ಯ, ಪಂಜಾಬ್​ನ ಮುಖ್ಯವಾದ ಎರಡು ವಿಕೆಟ್​ಗಳನ್ನ ಉರುಳಿಸಿದ್ದಾರೆ.
KP doing KP things. 🤌
— Royal Challengers Bengaluru (@RCBTweets)
KP doing KP things. 🤌
pic.twitter.com/FpynUWpVxJ— Royal Challengers Bengaluru (@RCBTweets) April 20, 2025
">April 20, 2025
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us