/newsfirstlive-kannada/media/post_attachments/wp-content/uploads/2025/04/RCB-1-1.jpg)
ಹೋಮ್ಗ್ರೌಂಡ್ ಅಂದ್ರೆ ಹೋಮ್ ಟೀಮ್ಗೆ ಅಡ್ವಾಂಟೇಜ್. ಹೊರಗಡೆ ಸೈಲೆಂಟ್ ಆಗಿರೋ ಆಟಗಾರರು ಕೂಡ ತವರಿನಲ್ಲಿ ದರ್ಬಾರ್ ನಡೆಸ್ತಾರೆ. ಗೇಮ್ ಚೇಂಜರ್ಗಳಾಗಿ ಬದಲಾಗಿ ಬಿಡ್ತಾರೆ. ನಮ್ಮ ಆರ್ಸಿಬಿಯ ಕೃನಾಲ್ ಪಾಂಡ್ಯ ಹಾಗಲ್ಲ. ಹೋಮ್ನಲ್ಲಿ ಸೈಲೆಂಟ್, ತವರಿನಾಚೆ ಫುಲ್ ವೈಲೆಂಟ್.
ಪಾಂಡ್ಯ ಫುಲ್ ಸೈಲೆಂಟ್..!
ಬೆಂಗಳೂರಿನ ಚಿನ್ನಸ್ವಾಮಿ ಮೈದಾನ ಆರ್ಸಿಬಿಯ ಹೋಮ್ ಗ್ರೌಂಡ್. ಎಲ್ಲಾ ತಂಡಗಳಿಗೂ ಹೋಮ್ ಅಡ್ವಾಂಟೇಜ್ ಬಹುಪಾಲು ವರ್ಕ್ ಆಗುತ್ತೆ. ಗೆಲುವಿಗೆ ಸಾಥ್ ಕೂಡ ನೀಡುತ್ತೆ. ಇನ್ಫ್ಯಾಕ್ಟ್ ತವರಿನಲ್ಲಿ ಹೋಮ್ ಟೀಮ್ ಪ್ಲೇಯರ್ಸ್ ವಿಜೃಂಭಿಸ್ತಾರೆ. ಈ ವಿಚಾರದಲ್ಲಿ ಆರ್ಸಿಬಿ ಟೀಮ್ ಹಾಗೂ ಕೃನಾಲ್ ಪಾಂಡ್ಯ ಕಥೆ ಉಲ್ಟಾ. ತವರಿನಲ್ಲಿ ಆರ್ಸಿಬಿ ಸತತ ಸೋಲು ಕಾಣ್ತಿದ್ರೆ, ಕೃನಾಲ್ ಫ್ಲಾಪ್ ಆಗ್ತಿದ್ದಾರೆ.
ಇದನ್ನೂ ಓದಿ: ಹೊಸ ತಿರುವು ಪಡೆದುಕೊಂಡ ರಿಕ್ಕಿ ರೈ ಕೇಸ್.. ದಾಳಿಗೆ ಸಂಬಂಧಿಸಿ ಓರ್ವ ವಶಕ್ಕೆ.. ಯಾರು ಆತ..?
ಚಿನ್ನಸ್ವಾಮಿ ಮೈದಾನದಲ್ಲಿ ಆರ್ಸಿಬಿ ಈ ಸೀಸನ್ನಲ್ಲಿ ಮೂರು ಮ್ಯಾಚ್ ಆಡಿದೆ. ಈ ಮೂರೂ ಪಂದ್ಯಗಳಲ್ಲಿ ಸೋತಿದೆ. ಈ ಪಂದ್ಯಗಳಲ್ಲಿ ಕೃನಾಲ್ ಪಾಂಡ್ಯ ಅಟ್ಟರ್ ಫ್ಲಾಫ್ ಆಗಿದ್ದಾರೆ. ಗುಜರಾತ್ ಟೈಟನ್ಸ್, ಡೆಲ್ಲಿ ಕ್ಯಾಪಿಟಲ್ಸ್, ಪಂಜಾಬ್ ಕಿಂಗ್ಸ್ ಎದುರು ದಾರಾಳವಾಗಿ ರನ್ ನೀಡಿದ್ದಾರೆ. ಒಂದು ಲೆಕ್ಕಾಚಾರದಲ್ಲಿ ಆರ್ಸಿಬಿ ಸೋಲಿಗೆ ಕಾರಣನೂ ಆಗಿದ್ದಾರೆ.
ಚಿನ್ನಸ್ವಾಮಿ ಮೈದಾನದಲ್ಲಿ ಕೃನಾಲ್
ಚಿನ್ನಸ್ವಾಮಿ ಮೈದಾನದಲ್ಲಿ ಆಡಿದ 3 ಪಂದ್ಯಗಳಿಂದ 6 ಓವರ್ ಬೌಲಿಂಗ್ ಮಾಡಿರೋ ಕೃನಾಲ್ ಪಾಂಡ್ಯ ಒಂದೇ ಒಂದು ವಿಕೆಟ್ ಬೇಟೆಯಾಡುವಲ್ಲಿ ವಿಫಲರಾಗಿದ್ದಾರೆ. ವಿಕೆಟ್ ಲೆಸ್ ಆಗಿರೋ ಕೃನಾಲ್ 63 ರನ್ ನೀಡಿದ್ದಾರೆ. 10.50ರ ಏಕಾನಮಿಯಲ್ಲಿ ರನ್ ಬಿಟ್ಟುಕೊಟ್ಟಿದ್ದಾರೆ.
ತವರಿನ ಆಚೆ ಪಾಂಡ್ಯ ಪವರ್
ಪಂಜಾಬ್ ಕಿಂಗ್ಸ್ ಎದುರು ಆರ್ಸಿಬಿ ಭರ್ಜರಿ ಗೆಲುವು ಸಾಧಿಸಿದೆ. ಈ ಗೆಲುವಿನ ಆಲ್ರೌಂಡರ್ ಕೃನಾಲ್ ಪಾಂಡ್ಯ ಪಾತ್ರ ಮಹತ್ವದ್ದು. ಪಂಜಾಬ್ ಕಿಂಗ್ಸ್ ಪರ ಘರ್ಜಿಸ್ತಿದ್ದ ಆರಂಭಿಕರಿಗೆ ಪಂಚ್ ನೀಡಿದ್ದೆ ಕೃನಾಲ್ ಪಾಂಡ್ಯ. ಸ್ಪೋಟಕ ಬ್ಯಾಟಿಂಗ್ ನಡೆಸ್ತಿದ್ದ ಪ್ರಿಯಾಂಶ್ ಆರ್ಯ, ಪ್ರಬ್ ಸಿಮ್ರಾನ್ ಸಿಂಗ್ ಅಪಾಯಕಾರಿಯಾಗೋ ಮುನ್ಸೂಚನೆ ನೀಡಿದ್ರು. ಆಗ ಬೌಲಿಂಗ್ಗೆ ಬಂದ ಕೃನಾಲ್ ಪಾಂಡ್ಯ ಸರಿಯಾದ ಪಂಚ್ ಕೊಟ್ರು.
ಇದನ್ನೂ ಓದಿ: ಆರ್ಸಿಬಿ ಟಾರ್ಗೆಟ್ ಪ್ಲೇ-ಆಫ್.. ಮುಂದಿನ ಪಂದ್ಯ ಬೆಂಗಳೂರಲ್ಲಿ, ಯಾವಾಗ ನಡೆಯುತ್ತೆ..?
ಪಂಜಾಬ್ ವಿರುದ್ಧ ಪಂದ್ಯ ಮಾತ್ರವಲ್ಲ, ಚಿನ್ನಸ್ವಾಮಿಯಲ್ಲಿ ಸಕ್ಸಸ್ ಕಾಣದ ಈ ಬರೋಡ ಸ್ಟಾರ್, ಮನೆ ಅಂಗಳದ ಹೊರಗೆ ಆಡಿದ ಎಲ್ಲಾ ಪಂದ್ಯಗಳಲ್ಲಿ ಸಾಲಿಡ್ ಪರ್ಫಾಮೆನ್ಸ್ ನೀಡ್ತಿದ್ದಾರೆ. ಈಡನ್ ಗಾರ್ಡನ್ಸ್ನಲ್ಲಿ ಕೊಲ್ಕತ್ತಾ ಎದುರು ಆಡಿದ್ದ ಮೊದಲ ಪಂದ್ಯದಲ್ಲೇ ಕೃನಾಲ್ 3 ವಿಕೆಟ್ ಬೇಟೆಯಾಡಿ ಮ್ಯಾಚ್ ವಿನ್ನರ್ ಆಗಿ ಮೆರೆದಾಡಿದ್ರು.
ಆ ಬಳಿಕ ಚೆನ್ನೈನಲ್ಲಿ ಸಿಎಸ್ಕೆ ಎದುರು ಡಿಸೆಂಟ್ ಆಟವನ್ನಾಡಿದ್ದರು. ವಾಂಖೆಡೆಯಲ್ಲಿ ದುಬಾರಿಯಾದ್ರೂ ಪ್ರಮುಖ 4 ವಿಕೆಟ್ ಬೇಟೆಯಾಡಿ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ರು. ಜೈಪುರದಲ್ಲಿ ರಾಜಸ್ಥಾನ್ ಎದುರು ಎಕಾಮಿಕಲ್ ಸ್ಪೆಲ್ ಹಾಕಿ ಮಿಂಚಿದ್ರು.
ತವರಿನಾಚೆ ಕೃನಾಲ್ ಪ್ರದರ್ಶನ
ತವರಿನಾಚೆ ಹೊರಗೆ 5 ಪಂದ್ಯಗಳನ್ನಾಡಿರುವ ಕೃನಾಲ್, 18 ಓವರ್ ಬೌಲಿಂಗ್ ಮಾಡಿ 10 ವಿಕೆಟ್ ಬೇಟೆಯಾಡಿದ್ದಾರೆ. 8.55ರ ಏಕಾನಮಿಯಲ್ಲಿ 154 ರನ್ ನೀಡಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್