W W Wd 1 4 W 0! ಕೊನೆಯ ಓವರ್​ನ ರೋಚಕತೆ ಹೇಗಿತ್ತು? ಕೃನಾಲ್ ಬಗ್ಗೆ ಪಾಟೀದಾರ್​ ಏನಂದ್ರು..?

author-image
Ganesh
Updated On
W W Wd 1 4 W 0! ಕೊನೆಯ ಓವರ್​ನ ರೋಚಕತೆ ಹೇಗಿತ್ತು? ಕೃನಾಲ್ ಬಗ್ಗೆ ಪಾಟೀದಾರ್​ ಏನಂದ್ರು..?
Advertisment
  • ಮುಂಬೈ ಇಂಡಿಯನ್ಸ್ ವಿರುದ್ಧ ಆರ್​ಸಿಬಿಗೆ ರೋಚಕ ಗೆಲುವು
  • 19 ರನ್​ಗಳ ಡಿಪೆಂಡ್ ಮಾಡಿಕೊಂಡ ಕೃನಾಲ್ ಪಾಂಡ್ಯ
  • ಕೃನಾಲ್ ಪಾಂಡ್ಯ ಬೌಲಿಂಗ್ ಚತುರತೆ ಬಗ್ಗೆ ಏನಂದ್ರು..?

ಐಪಿಎಲ್​​ನಲ್ಲಿ ನಿನ್ನೆ ನಡೆದ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಪಂದ್ಯ ಕೊನೆಯವರೆಗೂ ರೋಚಕವಾಗಿತ್ತು. ಜಿದ್ದಾಜಿದ್ದಿನ ಹೋರಾಟದಲ್ಲಿ ಕೊನೆಗೂ ಆರ್​ಸಿಬಿ ಗೆದ್ದು ಬೀಗಿದೆ.

ಹೇಗಿತ್ತು ಕೊನೆಯ ಓವರ್​..?

19ನೇ ಓವರ್ ಅಂತ್ಯಕ್ಕೆ ಮುಂಬೈ ಇಂಡಿಯನ್ಸ್ 6 ವಿಕೆಟ್ ಕಳೆದುಕೊಂಡು 203 ರನ್​ಗಳಿಸಿತ್ತು. ಹಾರ್ದಿಕ್ ಪಡೆ ಗೆಲುವು ಸಾಧಿಸಲು ಕೊನೆಯ 6 ಬಾಲ್​ನಲ್ಲಿ 19 ರನ್​ಗಳು ಬೇಕಾಗಿತ್ತು. ​ಕ್ಯಾಪ್ಟನ್ ರಜತ್ ಪಾಟೀದಾರ್ ಕೃನಾಲ್ ಪಾಂಡ್ಯಗೆ ಬೌಲಿಂಗ್ ಮಾಡಲು ಬಾಲ್​ ಕೈಗೆ ನೀಡಿದರು. 20ನೇ ಓವರ್​ನ ಮೊದಲ ಎಸೆತದಲ್ಲೇ ಸ್ಯಾಂಟರ್​ ವಿಕೆಟ್​ ವಿಕೆಟ್ ಉರುಳಿಸಿದರು. ಸಿಕ್ಸರ್ ಬಾರಿಸಲು ಪ್ರಯತ್ನಿಸಿ ಟಿಮ್ ಡೆವಿಡ್​ಗೆ ಕ್ಯಾಚ್​ ಒಪ್ಪಿಸಿದರು.

ಇದನ್ನೂ ಓದಿ: ಕೊನೆ ಬಾಲ್​ವರೆಗೆ ರಣರೋಚಕ ಐಪಿಎಲ್ ಮ್ಯಾಚ್.. ಮುಂಬೈ ವಿರುದ್ಧ RCB ಜಯಭೇರಿ

publive-image

ಎರಡನೇ ಬಾಲ್​​ನಲ್ಲಿ ದೀಪಕ್ ಚಹಾರ್​ ವಿಕೆಟ್ ಪಡೆದರು. ಅವರು ಕೂಡ ಸಿಕ್ಸರ್ ಬಾರಿಸಲು ಪ್ರಯತ್ನಿಸಿ, ಡಿಮ್ ಡೆವಿಡ್​ಗೆ ಕ್ಯಾಚ್ ಕೊಟ್ಟರು. ನಂತರ ಕ್ರೀಸ್​ಗೆ ಬಂದ ಬೋಲ್ಟ್​ಗೆ ಮೂರನೇ ಎಸೆತ ಹಾಕಿದರು. ಅದು ವೈಡ್​ ಆಯಿತು ನಂತರ ಒಂದು ರನ್ ಗಳಿಸಿದರು. ನಾಲ್ಕನೇ ಎಸೆತದಲ್ಲಿ ನಮನ್ ಧೀರ್ ಬೌಂಡರಿ ಬಾರಿಸಿದರು. ಆಗ ಮುಂಬೈ ಇಂಡಿಯನ್ಸ್​ ಮ್ಯಾಚ್ ಟೈ ಮಾಡಿಕೊಳ್ಳುವ ಅವಕಾಶ ಇತ್ತು. ಉಳಿದ ಎರಡು ಬಾಲ್​ಗಳಲ್ಲಿ ಎರಡು ಸಿಕ್ಸರ್​ಗಳ ಅಗತ್ಯ ಇತ್ತು. ಆದರೆ ಅದಕ್ಕೆ ಕೃನಾಲ್ ಪಾಂಡ್ಯ ಅವಕಾಶ ಮಾಡಿಕೊಡಲಿಲ್ಲ. ಐದನೇ ಬಾಲ್​ನಲ್ಲಿ ನಮನ್ ಅವರನ್ನು ಪೆವಿಲಿಯನ್​ಗೆ ಕಳುಹಿಸಿದರು. ಆ ಮೂಲಕ ಆರ್​ಸಿಬಿ ಗೆಲುವನ್ನು ಖಚಿತ ಮಾಡಿದರು. ಕೊನೆಯ ಒಂದು ಬಾಲ್ ಎದುರಿಸಲು ಜಸ್​ಪ್ರಿತಾ ಬುಮ್ರಾ ಬಂದಿದ್ದರು. ಆದರೆ ಬುಮ್ರಾ ಬ್ಯಾಟ್​ನಿಂದ ಯಾವುದೇ ರನ್ ಬರಲಿಲ್ಲ.

ಇದನ್ನೂ ಓದಿ: ಅವರೇ ನಮ್ಮ ಹೀರೋ.. ಗೆಲುವಿನ ಕ್ರೆಡಿಟ್ ಯಾರಿಗೆ ಕೊಟ್ರು ರಜತ್ ಪಾಟೀದಾರ್..?

publive-image

19 ರನ್​ಗಳನ್ನು ಡಿಪೆಂಡ್ ಮಾಡಿಕೊಂಡ ಕೃನಾಲ್ ಪಾಂಡ್ಯ ಅವರನ್ನು ಕ್ಯಾಪ್ಟನ್ ರಜತ್ ಪಂದ್ಯ ಮುಗಿದ ಬಳಿಕ ಮುನಸಾರೆ ಹೊಗಳಿದರು. ನಮ್ಮ ಬೌಲರ್​ಗಳ ಧೈರ್ಯ ಶ್ಲಾಘನೀಯ. ನಿಜಕ್ಕೂ ಅದ್ಭುತ ಪಂದ್ಯವಾಗಿತ್ತು. ಬೌಲರ್‌ಗಳು ತೋರಿಸಿದ ಧೈರ್ಯ ಅದ್ಭುತವಾಗಿತ್ತು. ಗೆಲುವಿನ ಶ್ರೇಯಸ್ಸು ಬೌಲರ್​​ಗಳಿಗೆ ಸಲ್ಲುತ್ತದೆ. ಕೃನಾಲ್ ಬೌಲಿಂಗ್ ಶೈಲಿ ಅದ್ಭುತವಾಗಿತ್ತು. ಕೊನೆಯ ಓವರ್​ ಅಷ್ಟು ಸುಲಭವಾಗಿರಲಿಲ್ಲ. ಬೌಲಿಂಗ್ ಮಾಡಿದ ರೀತಿ ಮತ್ತು ತೋರಿಸಿದ ಧೈರ್ಯ ಅದ್ಭುತ. ಕೊನೆಯ ಓವರ್ ಯಾರಿಗೆ ನೀಡಬೇಕು ಅನ್ನೊದ್ರ ಬಗ್ಗೆ ಚರ್ಚೆ ಆಗಿತ್ತು. ಬಳಿಕ ಕೃನಾಲ್​ಗೆ ಬಾಲಿಂಗ್ ನೀಡುವ ಬಗ್ಗೆ ನಿರ್ಧಾರ ಮಾಡಿದ್ವಿ ಎಂದಿದ್ದಾರೆ.

ಇದನ್ನೂ ಓದಿ: ಮಧ್ಯಾಹ್ನ ದ್ವಿತೀಯ PUC ಫಲಿತಾಂಶ.. ಆನ್​ಲೈನ್​ನಲ್ಲಿ ರಿಸಲ್ಟ್ ನೋಡೋದು ಹೆಂಗೆ..?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment