/newsfirstlive-kannada/media/post_attachments/wp-content/uploads/2025/03/GEETA-PRIYA-2.jpg)
ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಅನ್ನೋ ಮಾತು ಎಷ್ಟು ಜನಪ್ರಿಯವೋ, ಅಷ್ಟೇ ವಾಸ್ತವ. ಯಾಕಂದ್ರೆ ಇಲ್ಲೊಬ್ಬರು ಮಹಿಳಾ ಸಾಧಕಿ, ಶಿಕ್ಷಿತರಾಗಿ, ಬೆಂಗಳೂರಿನ ಅತಿ ದೊಡ್ಡ ಶಿಕ್ಷಣ ಸಂಸ್ಥೆಯ ಸಾರಥಿ ಯಾಗಿದ್ದಾರೆ. ಲಕ್ಷಾಂತರ ವಿದ್ಯಾರ್ಥಿಗಳ ಜೀವನಕ್ಕೆ ಅಡಿಪಾಯ ಹಾಕಿಕೊಟ್ಟು, ಹಠದೊಂದಿಗೆ ಸವಾಲುಗಳನ್ನ ಎದುರಿಸಿ ಶಿಕ್ಷಣ ತಜ್ಞೆಯಾಗಿದ್ದಾರೆ. ಅವರು ಮತ್ತ್ಯಾರೂ ಅಲ್ಲ, ಕೃಪಾನಿಧಿ ಗ್ರೂಫ್ ಆಫ್ ಇನ್ಸ್‌ಟಿಟ್ಯೂಷನ್ಸ್‌ನ ಕೋ ಫೌಂಡರ್ ಮತ್ತು ವೈಸ್ ಚೇರ್‌ಪರ್ಸನ್ ಗೀತಾ ಪ್ರಿಯ. ಇವರ ಅಪಾರ ಸೇವೆಯನ್ನು ಗುರುತಿಸಿರುವ ನಿಮ್ಮ ನ್ಯೂಸ್ಫಸ್ಟ್ ಮಹಿಳಾ ಮಾಣಿಕ್ಯ ಪ್ರಶಸ್ತಿ ನೀಡಿ ಗೌರವಿಸಿದೆ.
ಇದನ್ನೂ ಓದಿ: UPSC ಅಲ್ಲಿ ಕರ್ನಾಟಕದಿಂದ ನಂಬರ್-1 ಶ್ರೇಣಿ, ಈಗ ಮಂಡ್ಯದ ಸಿಇಓ.. ನ್ಯೂಸ್ ಫಸ್ಟ್ ಮಹಿಳಾ ಮಾಣಿಕ್ಯ ನಂದಿನಿ ಕೆ.ಆರ್!
ಗೀತಾ ಪ್ರಿಯ ಸೇವಾ ಬದುಕು ಹೇಗಿದೆ..?
ಗೀತಾ ಪ್ರಿಯ ಹಾಗೂ ಅವರ ಪತಿ ಡಾ.ಸುರೇಶ್ ನಾಗಪಾಲ್, 1985ರಲ್ಲಿ ಕೃಪಾನಿಧಿ ಶಿಕ್ಷಣ ಸಂಸ್ಥೆಯನ್ನ ಆರಂಭ ಮಾಡಿದಾಗ ಇದ್ದಿದ್ದು ಕೇವಲ 27 ವಿದ್ಯಾರ್ಥಿಗಳು. ಒಂದು ಹಾಲ್ ಮಾತ್ರ ಇತ್ತು. ಪಾಠ ಮಾಡೋಕೆ, ಇತರ ಕೆಲಸ ನೋಡ್ಕೊಳ್ಳೋಕೆ ಇದ್ದಿದ್ದು ಗೀತಾ ಪ್ರಿಯ ದಂಪತಿ ಹಾಗೂ ಓರ್ವ ಟ್ರಸ್ಟಿ.
ಇದನ್ನೂ ಓದಿ: ಇವರು ‘ಕರ್ನಾಟಕದ ಪ್ಯಾಡ್ ವುಮನ್’; ಭಾರತಿ ಗುಡ್ಲಾನೂರ್ಗೆ ನ್ಯೂಸ್‌ಫಸ್ಟ್‌ನ ‘ಮಹಿಳಾ ಮಾಣಿಕ್ಯ’ ಗೌರವ
ಎಲ್ಲಾ ಕೆಲಸಗಳನ್ನೂ ತಾವೇ ಮಾಡೋ ಅನಿವಾರ್ಯತೆ ಬೇರೆ. ಪಾಠ ಮಾಡೋದು, ಅಡ್ಮಿನಿಸ್ಟ್ರೇಷನ್ ನೋಡ್ಕೊಳ್ಳೋದು, ಹಾಸ್ಟೆಲ್‌ನಲ್ಲಿರೋ ವಿದ್ಯಾರ್ಥಿಗಳ ಬೇಕು ಬೇಡ ತಿಳ್ಕೊಳ್ಳೋದು, ಹಾಸ್ಟೆಲ್ ಕ್ಯಾಂಟೀನ್‌ಗೆ ತರಕಾರಿ ತರೋದು. ಹೀಗೆ ಗೀತಾ ಪ್ರಿಯ ಅವ್ರು ತಮ್ಮ ಬೆವರ ಹನಿ ಸುರಿಸಿ ಕಟ್ಟಿದ ಈ ಶಿಕ್ಷಣ ಸಂಸ್ಥೆಯೇ ಕೃಪಾನಿಧಿ ಗ್ರೂಫ್ ಆಫ್ ಇನ್ಸ್‌ಟಿಟ್ಯೂಷನ್ಸ್.
ಇದನ್ನೂ ಓದಿ: ಮಾಯಾ ಬಾಲಚಂದ್ರ ಸಾಧನೆ ಯಾವುದೇ ಕ್ಷೇತ್ರಕ್ಕೂ ಮೀಸಲಾಗಿಲ್ಲ.. ಮಾದರಿ ಮಹಿಳೆಗೆ ‘ಮಹಿಳಾ ಮಾಣಿಕ್ಯ’ ಗೌರವ
ಈ ಸಂಸ್ಥೆಯ ಅಡಿಯಲ್ಲಿ ಇವತ್ತು ಬ್ಯುಸಿನೆಸ್ ಸ್ಕೂಲ್ ಫಾರ್ಮಸಿ ಕಾಲೇಜ್, ಫಿಸಿಯೋಥೆರಪಿ ಕಾಲೇಜ್, ನರ್ಸಿಂಗ್ ಕಾಲೇಜ್, ಡಿಗ್ರಿ ಕಾಲೇಜ್, ಪಿಯು ಕಾಲೇಜ್, ರೆಸಿಡೆನ್ಶಿಯಲ್ ಪಿಯು ಕಾಲೇಜ್ ಇದೆ. ಜೊತೆಗೆ ಇಂಟರ್‌ನ್ಯಾಷನಲ್ ಸ್ಕೂಲ್ ಕೂಡ ಇದೆ.
ಸುಮಾರು 35ಕ್ಕೂ ಹೆಚ್ಚು ದೇಶಗಳ 8000ಕ್ಕೂ ಅಧಿಕ ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡ್ತಿದ್ದಾರೆ. 1 ಲಕ್ಷಕ್ಕೂ ಹೆಚ್ಚು ಹಳೇ ವಿದ್ಯಾರ್ಥಿಗಳನ್ನ ಈ ಶಿಕ್ಷಣ ಸಂಸ್ಥೆ ಹೊಂದಿದೆ. ಗಟ್ಟಿಯಾಗಿ ನಿಂತು ಎದುರಿಸಿದ್ರೆ, ಯಾವ ಸವಾಲು ಕಷ್ಟವಲ್ಲ ಅನ್ನೋ ಗೀತಾ ಪ್ರಿಯ ಅವರು ನ್ಯೂಸ್‌ಫಸ್ಟ್‌ನ ಮಹಿಳಾ ಮಾಣಿಕ್ಯ. ನ್ಯೂಸ್ಫಸ್ಟ್ ವಾಹಿನಿಯ ಮಹಿಳಾ ಮಾಣಿಕ್ಯ ಕಾರ್ಯಕ್ರಮವು ಇಂದು ಸಂಜೆ 5 ಗಂಟೆಗೆ ಪ್ರಸಾರವಾಗಲಿದೆ. ತಪ್ಪದೇ ವೀಕ್ಷಿಸಿ.
ಇದನ್ನೂ ಓದಿ: ಮಹಾಭಾರತದ 18 ಪರ್ವ.. ವಿಶ್ವಕ್ಕೆ ತೊಗಲು ಗೊಂಬೆಯಾಟ ಪರಿಚಯಿಸಿದ ಭೀಮವ್ವ ಶಿಳ್ಳೆಕ್ಯಾತರ ಯಶೋಗಾಥೆ ಇಲ್ಲಿದೆ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ