newsfirstkannada.com

ಯಡಿಯೂರಪ್ಪ ಕೊಟ್ಟ ಮಾತು ಉಳಿಸಿಕೊಳ್ಳಲಿಲ್ಲ, ತಾಯಿಯ ಕುತ್ತಿಗೆ ಹಿಸುಕುತ್ತಿದ್ದಾರೆ -ಈಶ್ವರಪ್ಪ ವಾಗ್ದಾಳಿ

Share :

Published March 14, 2024 at 9:13am

    ಹಿಂದೂತ್ವದ ಬಗ್ಗೆ ಮಾತನಾಡಿರೋರ ಮೂಲೆ ಗುಂಪು ಮಾಡಲಾಗಿದೆ

    ಮಾರ್ಚ್​ 15 ರಂದು ಸಭೆ, ನಂತರ ಮುಂದಿನ ತೀರ್ಮಾನ ಎಂದ ಈಶ್ವರಪ್ಪ

    ಬಿಎಸ್​ವೈ ಹಠಕ್ಕೆ ಬಿದ್ದು ಬೊಮ್ಮಾಯಿ, ಶೋಭಾಗೆ ಟಿಕೆಟ್ ಕೊಡಲಾಗಿದೆ

ಹಾವೇರಿ ಕ್ಷೇತ್ರದ ಟಿಕೆಟ್ ಪುತ್ರನ ಕೈ ತಪ್ಪಿದ ಹಿನ್ನೆಲೆಯಲ್ಲಿ  ಮಾಜಿ ಸಚಿವ ಈಶ್ವರಪ್ಪ ಅಸಮಾಧಾನ ಹೊರಹಾಕಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಮಾತನಾಡಿರುವ ಈಶ್ವರಪ್ಪ, ನಾನು ಯಡಿಯೂರಪ್ಪ ಮನೆಗೆ ಹೋದಾಗ ಕಾಂತೇಶ್​ಗೆ ಹಾವೇರಿ ಕ್ಷೇತ್ರದಿಂದ ಟಿಕೆಟ್ ಕೊಡಿಸುವ ಭರವಸೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಕಾಂತೇಶ್ ಆ ಭಾಗದಲ್ಲಿ ಓಡಾಡಿದ್ದ, ಜನರ ವಿಶ್ವಾಸಗಳಿಸಿದ್ದ. ಆದರೆ ಯಡಿಯೂರಪ್ಪ ತಮ್ಮ ಮಾತನ್ನು ಉಳಿಸಿಕೊಳ್ಳಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಕೇವಲ ಕಾಂತೇಶ್​ಗೆ ಮಾತ್ರವಲ್ಲ ಪ್ರತಾಪ್ ಸಿಂಹ, ಸದಾನಂದ ಗೌಡ, ಸಿ.ಟಿ.ರವಿ ಸೇರಿದಂತೆ ಅನೇಕರಿಗೆ ಅನ್ಯಾಯವಾಗಿದೆ. ನನ್ನ ಬೆಂಬಲಿಗರು ಶಿವಮೊಗ್ಗ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವಂತೆ ಒತ್ತಾಯಿಸುತ್ತಿದ್ದಾರೆ. ಈ ಬಗ್ಗೆ ನಾನು ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ. ಇದು ನನ್ನ ಭವಿಷ್ಯ, ರಾಜ್ಯದ ಭವಿಷ್ಯ, ಪಕ್ಷದ ಭವಿಷ್ಯ. ಮಾರ್ಚ್​ 15 ರಂದು ಸಭೆ ನಡೆಸ್ತೇನೆ, ನಂತರ ಮುಂದಿನ ನಿರ್ಧಾರ ತೆಗೆದುಕೊಳ್ತೇನೆ ಎಂದಿದ್ದಾರೆ.

ಇದು ನನ್ನ ಭವಿಷ್ಯ
ಪಕ್ಷದ ಹಿರಿಯರೇ ಹೇಳುತ್ತಿದ್ದಾರೆ. ಪ್ರತಾಪ್ ಸಿಂಹ, ಸಿಟಿ ರವಿ, ನಳೀನ್ ಕುಮಾರ್ ಕಟೀಲ್, ನಿಮ್ಮಂಥ ನಿಷ್ಠಾವಂತರನ್ನೇ ಪಕ್ಕಕ್ಕೆ ಸರಿಸುತ್ತಿದ್ದಾರೆ. ಅವರು ತಾಯಿಯ ತುತ್ತಿಗೆಯನ್ನೇ ಹಿಸುಕುತ್ತಿದ್ದಾರೆ. ತಮ್ಮ ವೈಯಕ್ತಿಕ ಸಾಧನೆಗಾಗಿ ನೀವು ಏನು ಸ್ಟ್ಯಾಂಡ್ ತೆಗೆದುಕೊಳ್ಳಬೇಕು? ತಾಯಿಯನ್ನೇ ಅವರ ಕೈಯಿಂದ ಹಿಸುಕುತ್ತಿದ್ದಾರೆ ಎಂಬ ಪ್ರಶ್ನೆ ಎದ್ದಿದೆ. ಅನೇಕ ಬೆಂಬಲಿಗರು ಈ ಮಾತನ್ನು ಹೇಳುತ್ತಿದ್ದಾರೆ-ಈಶ್ವರಪ್ಪ

ಮಾರ್ಚ್ 15 ರಂದು ನಾನು ಸಭೆ ಕರೆದಿದ್ದೇನೆ. ಆ ಸಭೆಯ ಅಭಿಪ್ರಾಯ ಆಧರಿಸಿ ಮುಂದುವರಿಯುತ್ತೇನೆ. ಯಡಿಯೂರಪ್ಪ ಹಠಕ್ಕೆ ಬಿದ್ದು ಶೋಭಾ ಕರಂದ್ಲಾಜೆ ಹಾಗೂ ಬಸವರಾಜ್ ಬೊಮ್ಮಾಯಿ ಅವರಿಗೆ ಟಿಕೆಟ್ ಕೊಡಿಸಿದ್ದಾರೆ. ನನ್ನ ಮಗನಿಗೆ ಟಿಕೇಟ್ ಕೊಡಿಸಲು ಆಗಲಿಲ್ಲವೇ? ತಾಯಿ‌ ಸ್ಥಾನದಲ್ಲಿರೋರು ಪಕ್ಷದ ಕತ್ತು ಹಿಸುಕುತ್ತಿದ್ದಾರೆ. ತಾಯಿ ಸ್ಥಾನದಲ್ಲಿರುವ ಪಕ್ಷವನ್ನು ಉಳಿಸುವಂತೆ ಕಾರ್ಯಕರ್ತರು ನನಗೆ ಒತ್ತಾಯಿಸುತ್ತಿದ್ದಾರೆ. ಹಿಂದುತ್ವದ ವಿಚಾರದಲ್ಲಿ ಮಾತನಾಡುತ್ತಿದ್ದವರನ್ನು ಮೂಲೆಗುಂಪು ಮಾಡಲಾಗಿದೆ ಎಂದು ವಾಗ್ದಾಳಿ ನಡೆಸಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಯಡಿಯೂರಪ್ಪ ಕೊಟ್ಟ ಮಾತು ಉಳಿಸಿಕೊಳ್ಳಲಿಲ್ಲ, ತಾಯಿಯ ಕುತ್ತಿಗೆ ಹಿಸುಕುತ್ತಿದ್ದಾರೆ -ಈಶ್ವರಪ್ಪ ವಾಗ್ದಾಳಿ

https://newsfirstlive.com/wp-content/uploads/2024/03/KS-ESWARPPA.jpg

Load More