newsfirstkannada.com

ನನ್ನ ಎದೆ ಬಗೆದರೆ ಒಂದ್ಕಡೆ ಮೋದಿ, ಇನ್ನೊಂದು ಕಡೆ ರಾಮ- ಕೆ.ಎಸ್​.ಈಶ್ವರಪ್ಪ

Share :

Published March 15, 2024 at 8:40pm

Update March 15, 2024 at 8:51pm

    ಶಿವಮೊಗ್ಗ ಲೋಕಸಭೆ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಈಶ್ವರಪ್ಪ ಕಣಕ್ಕೆ

    ‘ಪ್ರಾಣ ಹೋದ್ರೂ ನಾನು ಮೋದಿ ವಿರುದ್ಧ ಇರಲು ಸಾಧ್ಯವಿಲ್ಲ’

    ರಾಜ್ಯದಲ್ಲಿ ಇತ್ತೀಚಿಗೆ ಬಿಜೆಪಿಯಲ್ಲಿ ಕಾಂಗ್ರೆಸ್ ಸಂಸ್ಕೃತಿ ಬಂದಿದೆ

ಶಿವಮೊಗ್ಗ ಲೋಕಸಭೆ ಕ್ಷೇತ್ರದಿಂದ ಕೆ.ಎಸ್​.ಈಶ್ವರಪ್ಪ ಬಿಜೆಪಿಯ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯೋದಾಗಿ ಘೋಷಣೆ ಮಾಡಿದ್ದಾರೆ. ಬೆಂಬಲಿಗರ ಅಭಿಪ್ರಾಯ ಸಂಗ್ರಹಣಾ ಸಭೆಯಲ್ಲಿ ಮಾತನಾಡಿರುವ ಈಶ್ವರಪ್ಪ, ನನ್ನ ಪ್ರಾಣ ಹೋದರೂ ಮೋದಿ ವಿರುದ್ಧ ಹೋಗಲ್ಲ. ನನ್ನ ಹೃದಯ ಬಗೆದರೆ, ಒಂದು ಕಡೆ ಮೋದಿ ಇನ್ನೊಂದು ಕಡೆ ರಾಮ ಎಂದಿದ್ದಾರೆ.

ಇದನ್ನೂ ಓದಿಶಿವಮೊಗ್ಗದಲ್ಲಿ ಕೆ.ಎಸ್‌ ಈಶ್ವರಪ್ಪ ಸ್ಪರ್ಧೆ ಫಿಕ್ಸ್‌.. ಬಿಎಸ್‌ವೈ ಪುತ್ರನ ಸೋಲಿಸಲು ನಿರ್ಧಾರ

ನನ್ನ ಜೀವನದಲ್ಲಿ ಈ ರೀತಿಯ ಒಂದು ದಿನ ಬರುತ್ತದೆ ಎಂದು ಅಂದುಕೊಂಡಿರಲಿಲ್ಲ. ನರೇಂದ್ರ ಮೋದಿ ಹೇಳುತ್ತಿದ್ದದ್ದು ನನಗೆ ಈಗಲೂ ನೆನಪಿದೆ. ಕಾಂಗ್ರೆಸ್ ಪಕ್ಷದಲ್ಲಿ ಕುಟುಂಬ ರಾಜಕಾರಣ ಇದೆ. ಇದರ ವಿರುದ್ಧ ದೇಶದ ಜನ ಏಳಬೇಕು ಎಂದಿದ್ದರು. ಮೋದಿ ಅವರ ಮಾತು ಕೇಳಬೇಕೋ? ಬೇಡ್ವೋ ಎಂದು ನೀವು ತೀರ್ಮಾನ ಮಾಡಿ. ಪ್ರಾಣ ಹೋದ್ರೂ ನಾನು ಮೋದಿ ಅವರ ವಿರುದ್ಧ ಇರಲು ಸಾಧ್ಯವಿಲ್ಲ. ನೀವೆಲ್ಲರೂ ಕೂಡ ನನ್ನ ಸ್ನೇಹಿತರು. ಮೋದಿ ವಿರುದ್ಧ ಇರಬೇಕೋ ಬೇಡ್ವೋ, ನೀವು ನಿರ್ಧಾರ ಮಾಡಿ. ವಿಶ್ವದ ಬಹುತೇಕ ಎಲ್ಲಾ ರಾಷ್ಟ್ರಗಳು ಮೋದಿ ಆಡಳಿತ ಮೆಚ್ಚಿವೆ. ರಾಜ್ಯದಲ್ಲಿ ಇತ್ತೀಚಿಗೆ ಬಿಜೆಪಿಯಲ್ಲಿ ಕಾಂಗ್ರೆಸ್ ಸಂಸ್ಕೃತಿ ಬಂದಿದ್ಯಾ ಎಂದು ನೊಂದು ಹೇಳುತ್ತಿದ್ದೇನೆ. ವಂಶಪಾರಂಪರ್ಯ ಸಂಸ್ಕೃತಿ ಕಂಡುಬರುತ್ತಿದೆ ಎಂದು ಬಿಎಸ್​ ಯಡಿಯೂರಪ್ಪ ವಿರುದ್ಧ ಕಿಡಿಕಾರಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನನ್ನ ಎದೆ ಬಗೆದರೆ ಒಂದ್ಕಡೆ ಮೋದಿ, ಇನ್ನೊಂದು ಕಡೆ ರಾಮ- ಕೆ.ಎಸ್​.ಈಶ್ವರಪ್ಪ

https://newsfirstlive.com/wp-content/uploads/2024/03/BSY-1.jpg

Load More