newsfirstkannada.com

BREAKING: ಶಿವಮೊಗ್ಗದಲ್ಲಿ ಕೆ.ಎಸ್‌ ಈಶ್ವರಪ್ಪ ಸ್ಪರ್ಧೆ ಫಿಕ್ಸ್‌.. ಬಿಎಸ್‌ವೈ ಪುತ್ರನ ಸೋಲಿಸಲು ನಿರ್ಧಾರ

Share :

Published March 15, 2024 at 7:55pm

Update March 15, 2024 at 8:04pm

    ಶಿವಮೊಗ್ಗದಲ್ಲಿ ಯಡಿಯೂರಪ್ಪ ವಿರುದ್ಧ ಈಶ್ವರಪ್ಪ ಸಮರ ಖಚಿತ

    ಬಿ.ವೈ ರಾಘವೇಂದ್ರ ವಿರುದ್ಧ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಸ್ಪರ್ಧೆ

    ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಲು ತೀರ್ಮಾನ

ಶಿವಮೊಗ್ಗ: ಲೋಕಸಭಾ ಚುನಾವಣೆಯಲ್ಲಿ ಮಾಜಿ ಸಿಎಂ ಬಿ.ಎಸ್‌ ಯಡಿಯೂರಪ್ಪ ಪುತ್ರ ಬಿ.ವೈ ರಾಘವೇಂದ್ರ ವಿರುದ್ಧ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಸ್ಪರ್ಧಿಸುವುದು ಖಚಿತ ಎನ್ನಲಾಗಿದೆ. ಶಿವಮೊಗ್ಗದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಲು ಕೆ.ಎಸ್ ಈಶ್ವರಪ್ಪ ತೀರ್ಮಾನಿಸಿದ್ದಾರೆ.

ಶಿವಮೊಗ್ಗದಲ್ಲಿ ಅಭಿಪ್ರಾಯ ಸಂಗ್ರಹ ಸಭೆ ನಡೆಸಿದ ಈಶ್ವರಪ್ಪ ಅವರು ಈ ಮಹತ್ವದ ಘೋಷಣೆ ಮಾಡಿದ್ದಾರೆ. ನನ್ನ ಪ್ರಾಣ ಹೋದರೂ ನಾನು ಮೋದಿ ವಿರುದ್ಧ ಹೋಗಲ್ಲ. ನನ್ನ ಹೃದಯ ಬಗೆದರೆ, ಒಂದು ಕಡೆ ಮೋದಿ ಇನ್ನೊಂದು ಕಡೆ ರಾಮ ಇದ್ದಾರೆ. ಯಡಿಯೂರಪ್ಪ ಎದೆ ಬಗೆದರೆ ಒಂದು ಕಡೆ ಇಬ್ಬರು ಮಕ್ಕಳು ಇನ್ನೊಂದು ಕಡೆ ಶೋಭಾ ಕರಂದ್ಲಾಜೆ ಇದ್ದಾರೆ ಎಂದು ನಾನೂ ಹೇಳುತ್ತಿಲ್ಲ ಕಾರ್ಯಕರ್ತರು ಹೇಳುತ್ತಿದ್ದಾರೆ.

ಒಂದು ಕುಟುಂಬದ ಕೈಯಲ್ಲಿ ಬಿಜೆಪಿ ಸಿಗಬಾರದು. ರಾಜ್ಯದ ಕಾರ್ಯಕರ್ತರಿಗೆ ನ್ಯಾಯ ಸಿಗಬೇಕು. ಅದಕ್ಕಾಗಿ ನೀವು ಒಂದೂವರೆ ತಿಂಗಳು ಸಮಯ ಕೊಡಬೇಕು. ಮೋದಿ‌ ಆಸೆಗೆ ತಕ್ಕಂತೆ ರಾಜ್ಯದಲ್ಲಿ ಬಿಜೆಪಿ ರಾಜ್ಯದಲ್ಲಿ ಗೆಲ್ಲಬೇಕು. ರಾಜ್ಯದಲ್ಲಿ ಟಿಕೆಟ್ ನೀಡುವವರೊಂದಿಗೆ ನನ್ನನ್ನು ಹೋಲಿಸಿ ನಾನು ಅವರಿಗಿಂತ ಒಂದು ಗುಲಗಂಜಿಯಷ್ಟಾದರೂ ಹೆಚ್ಚಿದ್ದೇನೆ. ಎಲ್ಲಾ ಸಮಾಜದವರ ನೂರಾರು ಕರೆಗಳು ಬರುತ್ತಿವೆ. ಅವರೆಲ್ಲರ ಕಳಕಳಿ ನನಗೆ ಅರ್ಥವಾಗುತ್ತದೆ ಎಂದು ಕೆ.ಎಸ್ ಈಶ್ವರಪ್ಪ ತಮ್ಮ ಚುನಾವಣಾ ಯುದ್ಧ ಘೋಷಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BREAKING: ಶಿವಮೊಗ್ಗದಲ್ಲಿ ಕೆ.ಎಸ್‌ ಈಶ್ವರಪ್ಪ ಸ್ಪರ್ಧೆ ಫಿಕ್ಸ್‌.. ಬಿಎಸ್‌ವೈ ಪುತ್ರನ ಸೋಲಿಸಲು ನಿರ್ಧಾರ

https://newsfirstlive.com/wp-content/uploads/2024/03/BSY_Eshwarappa.jpg

Load More