newsfirstkannada.com

ತುಂಬಾ ನೋವಿನಿಂದ ನಿರ್ಧಾರ ತೆಗೆದುಕೊಂಡಿದ್ದೇನೆ -ಬಿಎಸ್​ವೈ ವಿರುದ್ಧ ಬಂಡಾಯವೆದ್ದ ಈಶ್ವರಪ್ಪ

Share :

Published March 15, 2024 at 8:10pm

Update March 15, 2024 at 8:11pm

    ಶಿವಮೊಗ್ಗ ಲೋಕಸಭೆ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಫಿಕ್ಸ್

    ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಈಶ್ವರಪ್ಪ ಕಣಕ್ಕೆ

    ಸುಳ್ಳು ಹೇಳಿದ್ರೆ ನನ್ನ ಮಗ ಹಾಳಾಗಿ ಹೋಗಲಿ ಎಂದಿದ್ದೇಕೆ ಈಶ್ವರಪ್ಪ?

ಶಿವಮೊಗ್ಗ ಲೋಕಸಭೆ ಕ್ಷೇತ್ರದಿಂದ ಕೆ.ಎಸ್​.ಈಶ್ವರಪ್ಪ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯೋದು ಪಕ್ಕಾ ಆಗಿದೆ. ಇವತ್ತು ನಡೆದ ಸಮಾಜದ ಮುಖಂಡರ ಸಭೆಯಲ್ಲಿ ನಿರ್ಧಾರಕ್ಕೆ ಬರಲಾಗಿದ್ದು, ಈ ಮೂಲಕ ಮಲೆನಾಡಿನಲ್ಲಿ ತ್ರಿಕೋನ ಸ್ಪರ್ಧೆ ನಡೆಯಲಿದೆ.

ಸಭೆಯಲ್ಲಿ ಮಾತನಾಡಿರುವ ಈಶ್ವರಪ್ಪ.. ಕಾರ್ಯಕರ್ತರ‌ ಅಭಿಪ್ರಾಯದಂತೆ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡೇ ಮಾಡುತ್ತೇನೆ. ಇದು ಉದ್ವೇಗದ ತೀರ್ಮಾನ ಅಲ್ಲ. ಯೋಚಿಸಿ ತೆಗೆದುಕೊಂಡ ತೀರ್ಮಾನ ಇದಾಗಿದೆ. ಏಕೆಂದರೆ ಪಕ್ಷ ನನಗೆ ಸಂಸ್ಕಾರ ನೀಡಿದೆ. ರಾಜ್ಯದ ನೊಂದ ಕಾರ್ಯಕರ್ತರ ದನಿಗೆ ನಾನು ಧ್ವನಿಯಾಗಲಿದ್ದೇನೆ. ಮೋದಿಗಾಗಿ ಪಕ್ಷಕ್ಕಾಗಿ ನಾನು ಏನು ಬೇಕಾದರೂ ಅನುಭವಿಸಲು‌ ಸಿದ್ಧನಿದ್ಧೇನೆ ಎಂದು ಗುಡುಗಿದರು.

ಒಂದು ಗುಲಗಂಜಿಯಷ್ಟಾದರೂ ಹೆಚ್ಚಿದ್ದೇನೆ

ಒಂದು ಕುಟುಂಬದ ಕೈಯಲ್ಲಿ ಬಿಜೆಪಿ ಸಿಗಬಾರದು. ರಾಜ್ಯದ ಕಾರ್ಯಕರ್ತರಿಗೆ ನ್ಯಾಯ ಸಿಗಬೇಕು. ಅದಕ್ಕಾಗಿ ನೀವು ಒಂದೂವರೆ ತಿಂಗಳು ಸಮಯ ಕೊಡಬೇಕು. ಮೋದಿ‌ ಆಸೆಗೆ ತಕ್ಕಂತೆ ರಾಜ್ಯದಲ್ಲಿ ಬಿಜೆಪಿ ರಾಜ್ಯದಲ್ಲಿ ಗೆಲ್ಲಬೇಕು. ರಾಜ್ಯದಲ್ಲಿ ಟಿಕೆಟ್ ನೀಡುವವರೊಂದಿಗೆ ನನ್ನನ್ನು ಹೋಲಿಸಿ, ನಾನು ಅವರಿಗಿಂತ ಒಂದು ಗುಲಗಂಜಿಯಷ್ಟಾದರೂ ಹೆಚ್ಚಿದ್ದೇನೆ. ಎಲ್ಲಾ ಸಮಾಜದ ಮುಖಂಡರಿಂದ ನೂರಾರು ಕರೆಗಳು ಬರುತ್ತಿವೆ. ಅವರೆಲ್ಲರ ಕಳಕಳಿ ನನಗೆ ಅರ್ಥವಾಗುತ್ತದೆ ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: BREAKING: ಶಿವಮೊಗ್ಗದಲ್ಲಿ ಕೆ.ಎಸ್‌ ಈಶ್ವರಪ್ಪ ಸ್ಪರ್ಧೆ ಫಿಕ್ಸ್‌.. ಬಿಎಸ್‌ವೈ ಪುತ್ರನ ಸೋಲಿಸಲು ನಿರ್ಧಾರ

ವಂಶಪಾರಂಪರ್ಯದ ವಿರುದ್ದ ನಾನು ಮಾತನಾಡಲ್ಲ. ರಾಜ್ಯದಲ್ಲಿ ಇತ್ತೀಚೆಗೆ ಬಿಜೆಪಿಯಲ್ಲಿ ಕಾಂಗ್ರೆಸ್‌ನ ಕುಟುಂಬ ರಾಜಕಾರಣದ ಸಂಸ್ಕೃತಿ ಕಂಡುಬರುತ್ತಿದೆ. ಇದು ನೊಂದು ತೆಗೆದುಕೊಳ್ಳುತ್ತಿರುವ ನಿರ್ಧಾರ ಇದು. ಹಾವೇರಿಗೆ ಬೊಮ್ಮಾಯಿಗೆ, ಚಿಕ್ಕಮಗಳೂರಿಗೆ ಶೋಭಾಗೆ ಟಿಕೆಟ್ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ ಎನ್ನುವ ವಿಷಯ ತಿಳಿಯಿತು. ಬಿಎಸ್‌ವೈ ಮಕ್ಕಳಿಗೆ ಟಿಕೆಟ್ ನೀಡಿದ್ದಾರೆ. ನನಗಿಂತ ಹಿರಿಯರಿಗೆ ಟಿಕೆಟ್ ನೀಡಿದ್ದಾರೆ. ಈ ಹಿಂದೆ ಕಾಂತೇಶ್ ಬಿಎಸ್‌ವೈ ಬಳಿ ಹಾವೇರಿಗೆ ನಿಲ್ಲಲು ಒಪ್ಪಿಗೆ ನೀಡುವಂತೆ ಮನವಿ ಮಾಡಿದ್ದರು. ಆಗ ಬಿಎಸ್‌ವೈ ಟಿಕೆಟ್ ನೀಡುವ ಹಾಗೂ ಗೆಲ್ಲಿಸುವ ಜವಾಬ್ದಾರಿ ನನ್ನದು ಎಂದಿದ್ದರು.

ಆದರೆ, ಹಠ ಹಿಡಿದು ಬೊಮ್ಮಾಯಿ, ಶೋಭಾಗೆ ಟಿಕೆಟ್ ಕೊಡಿಸಿದ್ದಾರೆ. ಮಾತು ನೀಡಿದ ಕಾಂತೇಶ್‌ಗೆ ಏಕೆ ಮೋಸ ಮಾಡಿದ್ದೀರಿ? ಬೊಮ್ಮಾಯಿ ಟಿಕೆಟ್ ನೀಡುವ ಕುರಿತ ಸಭೆಯಲ್ಲಿ ಕುರುಬ ಸಮುದಾಯದ ಕಾಂತೇಶ್‌ಗೆ ಟಿಕೆಟ್ ನೀಡಿದರೆ ಅನುಕೂಲ ಎಂದು ಹೇಳಿದ್ದರು. ಕೇಂದ್ರ ಚುನಾವಣೆ ಆಯ್ಕೆ ಸಮಿತಿ ಸಭೆಯಲ್ಲಿ ಬೊಮ್ಮಾಯಿ ಹೆಸರು ಹೇಗೆ ಬಂತು ಎಂಬುದನ್ನು ಹೇಳಲು ಹೋಗುವುದಿಲ್ಲ.‌ ನಾನು ಸುಳ್ಳು ಹೇಳಿದ್ರೆ ನನ್ನ ಮಗ ಹಾಳಾಗಿ ಹೋಗಲಿ ಭಾವುಕರಾಗಿ ಹೇಳಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ತುಂಬಾ ನೋವಿನಿಂದ ನಿರ್ಧಾರ ತೆಗೆದುಕೊಂಡಿದ್ದೇನೆ -ಬಿಎಸ್​ವೈ ವಿರುದ್ಧ ಬಂಡಾಯವೆದ್ದ ಈಶ್ವರಪ್ಪ

https://newsfirstlive.com/wp-content/uploads/2024/03/ESHWARAPPA.jpg

Load More