newsfirstkannada.com

ಬಿಜೆಪಿಯಲ್ಲಿ ಬಂಡಾಯ; BSY ಮಗನ ವಿರುದ್ಧವೇ ಚುನಾವಣೆಗೆ ನಿಲ್ಲುವುದಾಗಿ KS ಈಶ್ವರಪ್ಪ ಘೋಷಣೆ

Share :

Published March 14, 2024 at 5:25pm

Update March 14, 2024 at 5:53pm

    ಪುತ್ರನಿಗೆ ಟಿಕೆಟ್ ಸಿಗದಿದ್ದಕ್ಕೆ ಯಡಿಯೂರಪ್ಪ ವಿರುದ್ಧ ಈಶ್ವರಪ್ಪ ಆಕ್ರೋಶ!

    ಶಿವಮೊಗ್ಗದಲ್ಲಿ ಬಿಎಸ್​ವೈ ಪುತ್ರ ವಿರುದ್ಧ ಚುನಾವಣೆ ನಿಲ್ಲುವುದಾಗಿ ಘೋಷಣೆ

    ಜನರ ಒತ್ತಾಯದ ಮೇರೆಗೆ ಶಿವಮೊಗ್ಗದಿಂದಲೇ ನಿಲ್ಲುತ್ತೇನೆ ಎಂದ ಈಶ್ವರಪ್ಪ

ಶಿವಮೊಗ್ಗ: ತನ್ನ ಪುತ್ರನಿಗೆ ಟಿಕೆಟ್ ಸಿಗದಿದ್ದಕ್ಕೆ ಮಾಜಿ ಸಿಎಂ ಬಿ.ಎಸ್​​ ಯಡಿಯೂರಪ್ಪ ವಿರುದ್ಧ ಬಿಜೆಪಿ ಹಿರಿಯ ನಾಯಕ ಕೆ ಎಸ್ ಈಶ್ವರಪ್ಪ ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೇ ಜನರ ಒತ್ತಾಯದ ಮೇರೆಗೆ ಶಿವಮೊಗ್ಗದಲ್ಲಿ ಬಿಎಸ್​ವೈ ಪುತ್ರ ಬಿವೈ ರಾಘವೇಂದ್ರ ವಿರುದ್ಧ ಲೋಕಸಭಾ ಚುನಾವಣೆ ನಿಲ್ಲುವುದಾಗಿ ಈಶ್ವರಪ್ಪ ಘೋಷಣೆ ಮಾಡಿದ್ದಾರೆ.

ಹಾವೇರಿ ಲೋಕಸಭಾ ಕ್ಷೇತ್ರದಿಂದ ನನ್ನ ಮಗ ಕೆ.ಇ ಕಾಂತೇಶ್​ಗೆ ಟಿಕೆಟ್​ ಕೇಳಿದ್ದೆ. ನಾನು ಎಂದಿಗೂ ಒಂದು ಜಾತಿಗೆ ಸೀಮಿತನಾಗಲಿಲ್ಲ. ಹಿಂದುತ್ವ ಸಿದ್ಧಾಂತವನ್ನು ಪ್ರತಿಪಾದಿಸಿಕೊಂಡು ಬಂದವನು ನಾನು. ಈಗ ನನ್ನ ಮಗನಿಗೆ ಟಿಕೆಟ್​​ ನೀಡಿಲ್ಲ. ಇದು ನನಗೆ ಮಾಡಿದ ಅನ್ಯಾಯ ಎಂದರು ಈಶ್ವರಪ್ಪ.

ಕಾರ್ಯಕರ್ತರ ಆಸೆ ಮೇರೆಗೆ ಚುನಾವಣೆಗೆ ನಿಲ್ಲುತ್ತೇನೆ ಎಂದ ಈಶ್ವರಪ್ಪ

ನನ್ನ ಮಗನಿಗೆ ಟಿಕೆಟ್​ ಕೊಡಿಸಿ ಎಂದು ಯಡಿಯೂರಪ್ಪಗೆ ಕೇಳಿದ್ದೆ. ಅದಕ್ಕೆ ಟಿಕೆಟ್​ ಕೊಡಿಸೋದು ಮಾತ್ರವಲ್ಲ ಗೆಲ್ಲಿಸಿಕೊಂಡು ಬರುತ್ತೇನೆ ಎಂದು ಮಾತು ಕೊಟ್ಟಿದ್ದರು. ಶೋಭಾ ಕರಂದ್ಲಾಜೆ ಪರ ಬ್ಯಾಟ್​ ಮಾಡಿದ ಯಡಿಯೂರಪ್ಪ ನನ್ನ ಮಗನಿಗೆ ಮಾತ್ರ ಟಿಕೆಟ್​​​ ತಪ್ಪಿಸಿದ್ದಾರೆ. ನನಗೆ ಮಾತು ಕೊಟ್ಟು ಮೋಸ ಮಾಡಿದ್ದಾರೆ. ನಾನು ಎಂಎಲ್​​ಎ, ಎಂಪಿ, ಎಂಎಲ್​ಸಿ ಆಗಲು ಚುನಾವಣೆಗೆ ನಿಲ್ಲುತ್ತಿಲ್ಲ. ಕಾರ್ಯಕರ್ತರ ಆಸೆ ಮೇರೆಗೆ ಶಿವಮೊಗ್ಗದಿಂದಲೇ ಲೋಕಸಭಾ ಚುನಾವಣೆಗೆ ನಿಲ್ಲುತ್ತೇನೆ ಎಂದರು.

​​ಬಿ.ಎಸ್ ಯಡಿಯೂರಪ್ಪ ಮಾಡಿದ ಕೆಲವು ತಪ್ಪುಗಳನ್ನು ನಾನು ಹಲವಾರು ಬಾರಿ ಬಹಿರಂಗವಾಗಿ ಹೇಳಿದ್ದೇನೆ. ನಮಗೆ ಮತ್ತೊಬ್ಬ ಬಿಎಸ್ ಯಡಿಯೂರಪ್ಪ ಸಿಗುವುದಿಲ್ಲ. ಇದು ನನಗೆ ನೋವು ತಂದಿದೆ. ನಾನು ಯಾವಾಗಲೂ ಪಕ್ಷಕ್ಕೆ ನಿಷ್ಠನಾಗಿದ್ದೆ. ಇಂದು ಮಗನಿಗೆ ಟಿಕೆಟ್ ಸಿಗದಿದ್ದದ್ದು ನನಗೆ ಅನ್ಯಾಯವಾಗಿದೆ ಎಂದು ಭಾವಿಸುತ್ತೇನೆ. ಈ ವಿಷಯದ ಬಗ್ಗೆ ಬೆಂಬಲಿಗರನ್ನು ಕರೆಸಿ ಚರ್ಚಿಸುತ್ತೇನೆ ಎಂದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಿಜೆಪಿಯಲ್ಲಿ ಬಂಡಾಯ; BSY ಮಗನ ವಿರುದ್ಧವೇ ಚುನಾವಣೆಗೆ ನಿಲ್ಲುವುದಾಗಿ KS ಈಶ್ವರಪ್ಪ ಘೋಷಣೆ

https://newsfirstlive.com/wp-content/uploads/2024/03/BSY_Eshwarappa.jpg

Load More