ಕೆಎಸ್​ಸಿಎ 9 ನಿರ್ಲಕ್ಷ್ಯಗಳು.. ಇದೇ ಕಾಲ್ತುಳಿತಕ್ಕೆ ಕಾರಣವಾಯ್ತಾ..?

author-image
Ganesh
KSCAಗೆ ಸಂಕಷ್ಟದ ಮೇಲೆ ಸಂಕಷ್ಟ.. ಬಿಬಿಎಂಪಿಯಿಂದಲೂ ಶಾಕಿಂಗ್ ನಿರ್ಧಾರ..!
Advertisment
  • ತರಾತುರಿ ಕಾರ್ಯಕ್ರಮ ಆಯೋಜನೆ.. ಆಯ್ತಾ ಅಚಾತುರ್ಯ?
  • ಪೂರ್ವ ಸಿದ್ಧತೆ ಇಲ್ಲದ ಕಾರಣ ನಡೆದೋಯ್ತಾ ಮಹಾ ದುರಂತ?
  • ಕಾರ್ಯಕ್ರಮ ಆಯೋಜನೆ ಮಾಡಿ ಕೆಎಸ್​ಸಿಎಯಿಂದ ನಿರ್ಲಕ್ಷ್ಯ

ಬೆಂಗಳೂರು: ಆರ್​ಸಿಬಿ ವಿಕ್ಟರಿ ಸೆಲೆಬ್ರೇಷನ್ ಕಾರ್ಯಕ್ರಮಕ್ಕೆ ಬಂದು 11 ಅಭಿಮಾನಿಗಳು ಜೀವ ಕಳೆದುಕೊಂಡಿದ್ದಾರೆ. ಘೋರ ದುರಂತಕ್ಕೆ ತರಾತುರಿಯಲ್ಲಿ ಕಾರ್ಯಕ್ರಮ ಆಯೋಜಿಸಿದ್ದೇ ಪ್ರಮುಖ ಕಾರಣ ಎನ್ನಲಾಗುತ್ತಿದೆ. ಯಾವುದೇ ಪೂರ್ವ ಸಿದ್ಧತೆ ಇಲ್ಲದ ಕಾರಣ ಮಹಾ ದುರಂತ ನಡೆದಿದೆ.

ಅನಾಹುತಕ್ಕೆ ಸರ್ಕಾರ, ಕೆಎಸ್​ಸಿಎ (The Karnataka State Cricket Association) ಹಾಗೂ ಆರ್​ಸಿಬಿ ಮ್ಯಾನೇಜ್ಮೆಂಟ್ ಹೊಣೆ ಎಂಬ ಆರೋಪಗಳು ಕೇಳಿಬಂದಿವೆ.

KSCA ಮಾಡಿದ ನಿರ್ಲಕ್ಷ್ಯಗಳೇನು?

ನಿರ್ಲಕ್ಷ್ಯ 01: ಅತ್ಯಂತ ಧಾವಂತದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿದ್ದು
ನಿರ್ಲಕ್ಷ್ಯ 02: ಪೂರ್ವ ನಿಯೋಜನೆ ಇಲ್ಲದ ಕಾರಣ ಅಚಾತುರ್ಯ ನಡೀತು
ನಿರ್ಲಕ್ಷ್ಯ 03: RCB ವೆಬ್​ ಮಾಹಿತಿಗೂ ಕೆಎಸ್​ಸಿಎ ಮಾಹಿತಿ ನಡುವೆ ಗೊಂದಲ
ನಿರ್ಲಕ್ಷ್ಯ 04 : ಆರ್​ಸಿಬಿ ವೆಬ್​​ಸೈಟ್​ನಲ್ಲಿ ಉಚಿತ ಟಿಕೆಟ್ ನೀಡುವುದಾಗಿ ಹೇಳಿಕೆ
ನಿರ್ಲಕ್ಷ್ಯ 05: 2 ಗೇಟ್ ಮಾತ್ರ ಓಪನ್, ಅದೇ ಗೇಟ್​ನತ್ತ ನುಗ್ಗಿ ಬಂದ ಫ್ಯಾನ್ಸ್
ನಿರ್ಲಕ್ಷ್ಯ 06: ಕೆಎಸ್​ಸಿಎ ಗೇಟ್​ ನಂ 9-10ರಲ್ಲಿ ಟಿಕೆಟ್ ನೀಡುವುದಾಗಿ ಹೇಳಿಕೆ
ನಿರ್ಲಕ್ಷ್ಯ 07: ಇದರಿಂದ ಅಭಿಮಾನಿಗಳಲ್ಲಿ ಟಿಕೆಟ್​ಗಾಗಿ ಗೊಂದಲ ನಿರ್ಮಾಣ
ನಿರ್ಲಕ್ಷ್ಯ 08: 2 ಲಕ್ಷ ಜನರನ್ನ ಕೇವಲ 3 ಗೇಟ್​ನಲ್ಲೇ ಬಿಟ್ಟಿದ್ದು ಅಚಾತುರ್ಯ
ನಿರ್ಲಕ್ಷ್ಯ 09: ಎಮರ್ಜೆನ್ಸಿ ಎಕ್ಸಿಟ್ ಇಲ್ಲ, ಆ್ಯಂಬುಲೆನ್ಸ್ ವ್ಯವಸ್ಥೆ ಕೂಡ ಇರಲಿಲ್ಲ

ಇದನ್ನೂ ಓದಿ: ‘ಸರಿಗಮಪ’ ಗ್ರ್ಯಾಂಡ್ ಫಿನಾಲೆಯಲ್ಲಿ 6 ಸ್ಪರ್ಧಿಗಳು.. ಯಾರಿಗೆ ಸಿಗಲಿದೆ ವಿನ್ನರ್ ಪಟ್ಟ..?

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment