newsfirstkannada.com

VIDEO: ಹಳ್ಳಿ ಸೊಗಡಿನಲ್ಲಿ ಹಸುವಿನ ಮೂಗು ದಾರ ಹಿಡಿದ ಸಿಎಂ ಸಿದ್ದರಾಮಯ್ಯ; ಸಖತ್ ಸ್ಟೈಲ್ ಹೇಗಿದೆ ನೋಡಿ

Share :

Published September 6, 2023 at 2:58pm

  ಶಾಲಾ ಮಕ್ಕಳ ಜೊತೆ ಹಾಲಿನ ಗ್ಲಾಸ್ ಹಿಡಿದು ನಿಂತ ಸಿಎಂ ಸಿದ್ದರಾಮಯ್ಯ

  ಕ್ಷೀರಭಾಗ್ಯ ಯೋಜನೆ ದಶಮಾನೋತ್ಸವದಲ್ಲಿ ಮಕ್ಕಳಿಗೆ ಹಾಲು ವಿತರಣೆ

  ಹಸುವಿನ ಕೊರಳಿಗೆ ಹಾಕಿದ್ದ ಹೂವಿನ ಹಾರ ಸರಿ ಮಾಡಿದ ಸಿದ್ದರಾಮಯ್ಯ

ತುಮಕೂರು: ಶಾಲಾ ಮಕ್ಕಳಿಗೆ ಹಾಲು ವಿತರಣೆ ಮಾಡುವ ಮೂಲಕ ಸಿಎಂ ಸಿದ್ದರಾಮಯ್ಯ ಅವರು ಕ್ಷೀರಭಾಗ್ಯ ಯೋಜನೆಯ ದಶಮಾನೋತ್ಸವವನ್ನು ಆಚರಣೆ ಮಾಡಿದರು. ಇದೇ ವೇಳೆ ಸಿದ್ದರಾಮಯ್ಯ ಅವರು ಹಳ್ಳಿ ಸೊಗಡಿನಲ್ಲೇ ಹಸುವನ್ನು ಹಿಡಿದಿದ್ದು ವಿಶೇಷ ಎನಿಸಿತು.

ಮಧುಗಿರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಪಾಲ್ಗೊಂಡಿದ್ದರು. ಇದೇ ವೇಳೆ ತಾಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು. ಬಳಿಕ ಕಾರ್ಯಕ್ರಮದಲ್ಲಿ ಹಸುವಿಗೆ ಆಹಾರ ತಿನಿಸಲೆಂದು ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಡಾ.ಜಿ.ಪರಮೇಶ್ವರ್​ ಮುಂದಾದರು.

ಹಸು ಆಹಾರ ತಿನ್ನುವಾಗ ಸಿಎಂ ಸಿದ್ದರಾಮಯ್ಯ ಹೂವಿನ ಹಾರ ಹಾಕಿದರು. ಆದ್ರೆ ಹೂವಿನ ಹಾರ ಅರ್ಧ ಅದರ ಕತ್ತಲ್ಲಿ ಬಿದ್ದರೇ, ಉಳಿದಾರ್ಧ ಆಹಾರ ಇರೋ ಬುಟ್ಟಿಯಲ್ಲಿ ಬಿದ್ದಿತ್ತು. ಹೀಗಾಗಿ ಸಿಎಂ ಸಿದ್ದರಾಮಯ್ಯ ಅವರು ಥೇಟ್​ ಹಳ್ಳಿ ಸೊಗಡಿನಲ್ಲೇ ಹಸುವಿನ ಮೂಗುದಾರ ಹಿಡಿದು ಕತ್ತು ಮೇಲೆತ್ತಿ ಹೂವಿನ ಹಾರ ಸರಿ ಮಾಡಿದರು. ಸದ್ಯ ಈ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಸಿಎಂ ಸಿದ್ದರಾಮಯ್ಯ ಹಸುವನ್ನು ಹ್ಯಾಂಡಲ್ ಮಾಡೋ ಸ್ಟೈಲ್ ವಿಶೇಷವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಹಳ್ಳಿ ಸೊಗಡಿನಲ್ಲಿ ಹಸುವಿನ ಮೂಗು ದಾರ ಹಿಡಿದ ಸಿಎಂ ಸಿದ್ದರಾಮಯ್ಯ; ಸಖತ್ ಸ್ಟೈಲ್ ಹೇಗಿದೆ ನೋಡಿ

https://newsfirstlive.com/wp-content/uploads/2023/09/CM_SIDDARAMAIAH-3.jpg

Load More