/newsfirstlive-kannada/media/post_attachments/wp-content/uploads/2024/12/JOB_ASSISTANT.jpg)
ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಪ್ರಚಾರ ಸಂಘ ಹಲವು ಉದ್ಯೋಗಗಳನ್ನು ನೇಮಕ ಮಾಡುತ್ತಿದೆ. ಸಂಘದಲ್ಲಿ ಖಾಲಿ ಇರುವಂತ ಸೂಪರ್ವೈಸರ್, ಬ್ಲಾಕ್ ಮ್ಯಾನೇಜರ್, ಜಿಲ್ಲಾ ವ್ಯವಸ್ಥಾಪಕ, ಕಚೇರಿ ಸಹಾಯಕ ಸೇರಿದಂತೆ ವಿವಿಧ ಉದ್ಯೋಗಗಳಿಗೆ ಅಭ್ಯರ್ಥಿಗಳನ್ನು ನೇಮಕ ಮಾಡಲಾಗುತ್ತಿದೆ. ಈ ಕೆಲಸಗಳನ್ನು ಮಾಡಲು ಇಷ್ಟ ಪಡುವಂತವರು ಅರ್ಜಿ ಸಲ್ಲಿಕೆ ಮಾಡಬಹುದು.
ಕರ್ನಾಟಕ ಸರ್ಕಾರದಡಿ ಹಾವೇರಿ, ಯಾದಗಿರಿಯಲ್ಲಿ ಕೆಲಸ ಮಾಡಲು ಬಯಸುವ ಉದ್ಯೋಗ ಆಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು 16 ಡಿಸೆಂಬರ್ 2024 ರ ಒಳಗಾಗಿ ಆನ್‌ಲೈನ್‌ನಲ್ಲಿ ಮೂಲಕ ಅರ್ಜಿ ಸಲ್ಲಿಸಬಹುದು. ಇನ್ನು ಅರ್ಜಿ ಶುಲ್ಕ, ವೇತನ ಶ್ರೇಣಿ, ವಯೋಮಿತಿ, ವಿದ್ಯಾರ್ಹತೆ ಇನ್ನಿತರ ಮಾಹಿತಿಗಳನ್ನು ಇಲ್ಲಿ ನೀಡಲಾಗಿದೆ.
ಒಟ್ಟು ಹುದ್ದೆಗಳು- 39
ಕೆಲಸ ಮಾಡುವ ಸ್ಥಳ- ಹಾವೇರಿ, ಯಾದಗಿರಿ
ಯಾವ್ಯಾವ ಉದ್ಯೋಗಗಳು
- ಕ್ಲಸ್ಟರ್ ಮೇಲ್ವಿಚಾರಕರು
- DEO/ MIS ಸಂಯೋಜಕರು
- ಬ್ಲಾಕ್ ಮ್ಯಾನೇಜರ್
- ಜಿಲ್ಲಾ ವ್ಯವಸ್ಥಾಪಕರು
- ಜಿಲ್ಲಾ MIS ಸಹಾಯಕ ಮತ್ತು DEO
- ಕಚೇರಿ ಸಹಾಯಕ
- ತಾಲೂಕು ಕಾರ್ಯಕ್ರಮ ನಿರ್ವಾಹಕ
ಇದನ್ನೂ ಓದಿ; ಹೆಚ್ಚುವರಿ ಆಯ್ಕೆಪಟ್ಟಿ ಪ್ರಕಟಿಸಿದ KPSC.. ಈ 3 ಪರೀಕ್ಷೆ ಬರೆದಿದ್ರೆ ನಿಮ್ಮ ಹೆಸರು ಇದೆಯೇ ಅಂತ ಚೆಕ್ ಮಾಡಿ
ಉದ್ಯೋಗಗಳಿಗೆ ತಕ್ಕಂತೆ ವಿದ್ಯಾರ್ಹತೆ
- ಕ್ಲಸ್ಟರ್ ಮೇಲ್ವಿಚಾರಕರು- ಪದವಿ
- DEO/ MIS ಸಂಯೋಜಕರು- ಪದವಿ, ಸ್ನಾತಕೋತ್ತರ
- ಬ್ಲಾಕ್ ಮ್ಯಾನೇಜರ್- ಸ್ನಾತಕೋತ್ತರ
- ಜಿಲ್ಲಾ ವ್ಯವಸ್ಥಾಪಕರು- ಬಿಎಸ್ಸಿ, ಎಂ.ಎಸ್ಸಿ, ಮಾಸ್ಟರ್ ಡಿಗ್ರಿ
- ಜಿಲ್ಲಾ MIS ಸಹಾಯಕ ಮತ್ತು DEO- ಪದವಿ
- ಕಚೇರಿ ಸಹಾಯಕ- ಪದವಿ
- ತಾಲೂಕು ಕಾರ್ಯಕ್ರಮ ನಿರ್ವಾಹಕ- ಸ್ನಾತಕೋತ್ತರ / ಡಿಪ್ಲೋಮಾ
ಅರ್ಜಿ ಶುಲ್ಕ, ವೇತನ ಶ್ರೇಣಿ, ವಯೋಮಿತಿ ಇವುಗಳ ಮಾಹಿತಿ ಎಲ್ಲ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಪ್ರಚಾರ ಸಂಘ ನಿರ್ಧರಿಸಿದಂತೆ ಇರುತ್ತದೆ.
ಆಯ್ಕೆ ಪ್ರಕ್ರಿಯೆ
ಸಂದರ್ಶನ
ಮುಖ್ಯವಾದ ದಿನಾಂಕ ನೆನಪಿಡಿ
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 16 ಡಿಸೆಂಬರ್ 2024
ಅರ್ಜಿ ಹಾಕುವ ಅಭ್ಯರ್ಥಿಗಳು ಇಲ್ಲಿಗೆ ಭೇಟಿ ನೀಡಿ- https://jobsksrlps.karnataka.gov.in/
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ