/newsfirstlive-kannada/media/post_attachments/wp-content/uploads/2024/11/JOB_POLICE-1.jpg)
ಬೆಂಗಳೂರು: ಸಶಸ್ತ್ರ ಮೀಸಲು ಪಡೆ (ಕೆಎಸ್‌ಆರ್‌ಪಿ) ಯಲ್ಲಿ ಸದ್ಯದಲ್ಲೇ 2 ಸಾವಿರಕ್ಕೂ ಹೆಚ್ಚು ಉದ್ಯೋಗಗಳನ್ನು ನೇಮಕಾತಿ ಮಾಡಲಾಗುತ್ತದೆ. ಈಗಾಗಲೇ ರಾಜ್ಯ ಸರ್ಕಾರವು ಪೊಲೀಸ್ ಇಲಾಖೆಗೆ ಗ್ರೀನ್ ಸಿಗ್ನಲ್ ನೀಡಿದ್ದು ರಾಜ್ಯ ಪತ್ರ ಬರೆಯಲಾಗಿದೆ. ಪೊಲೀಸ್ ಇಲಾಖೆಯಲ್ಲಿ ಕೆಲಸ ಬೇಕೆಂದು ಕಾದು ಕುಳಿತಿರುವವರು ಈಗಿನಿಂದಲೇ ತಯಾರಿ ನಡೆಸಿದರೆ ಈ ಹುದ್ದೆ ಪಡೆಯಬಹುದು.
ರಾಜ್ಯ ಸರ್ಕಾರವು 2,400 ಕೆಎಸ್‌ಆರ್‌ಪಿ ಕಾನ್ಸ್ಟೆಬಲ್ ಹುದ್ದೆಗಳ ನೇಮಕಕ್ಕೆ ಪೊಲೀಸ್ ಇಲಾಖೆಗೆ ಆದೇಶ ನೀಡಿದೆ. ಈ ಹಿನ್ನೆಲೆಯಲ್ಲಿ 2 ಬೆಟಾಲಿಯನ್ ಪ್ರಾರಂಭಕ್ಕೆ ಅಧಿಕೃತವಾಗಿ ಸರ್ಕಾರದಿಂದ ಅನುಮತಿ ಸಿಕ್ಕಿದೆ. ಸದ್ಯ ರಾಜ್ಯದಲ್ಲಿ 12 ಕೆಎಸ್‌ಆರ್‌ಪಿ, 2 ಐಆರ್‌ಬಿ ಬೆಟಾಲಿಯನ್ ಇವೆ. ಇವಕ್ಕೆ ಇನ್ನೆರಡು ಬೆಟಾಲಿಯನ್ ಸೇರಿಕೊಳ್ಳಲಿವೆ. ಆದರೆ ಎಲ್ಲ ಸಿದ್ಧತೆಗಳು ಆಗಬೇಕಾದ ಹಿನ್ನೆಲೆಯಲ್ಲಿ ಇನ್ನಷ್ಟು ಕಾಲಾವಕಾಶ ತೆಗೆದುಕೊಳ್ಳಲಿದೆ.
ಇದನ್ನೂ ಓದಿ:600 ಜೂನಿಯರ್ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗೆ ಇಂದೇ ಕೊನೆ ದಿನ.. ಅಪ್ಲೇ ಮಾಡಿ!
ರಾಜ್ಯದಲ್ಲಿ ನೈಸರ್ಗಿಕ ವಿಪತ್ತು, ಬೃಹತ್ ಹೋರಾಟ, ಸಭೆ, ಸಮಾರಂಭ, ಚುನಾವಣೆಗಳಲ್ಲಿ ಭದ್ರತೆಗಾಗಿ ಪೊಲೀಸ್ ಸಿಬ್ಬಂದಿ ಅಗತ್ಯವಿತ್ತು. ಬೆಟಾಲಿಯನ್ ಬೇಕೆಂದು ಸಲ್ಲಿಸಿದ್ದ ಪ್ರಸ್ತಾವನೆಗೆ ಸರ್ಕಾರ ಒಪ್ಪಿಗೆ ಸೂಚಿಸಿರುವುದು ಖುಷಿ ವಿಚಾರ. ಜೊತೆಗೆ ಉದ್ಯೋಗಗಳು ಕೂಡ ಸೃಷ್ಟಿಯಾಗುತ್ತಿವೆ. ಸರ್ಕಾರದ ಒಪ್ಪಿಗೆ ಇರುವುದರಿಂದ ಹೊಸ ಬೆಟಾಲಿಯನ್‌ಗಳಿಗೆ ನೇಮಕಾತಿ ಪ್ರಕ್ರಿಯೆ ಇನ್ನೆರಡು- ಮೂರು ತಿಂಗಳಲ್ಲಿ ಆರಂಭವಾಗಲಿದೆ. ಹೀಗಾಗಿ ಅಭ್ಯರ್ಥಿಗಳು ಮೊದಲೇ ಎಲ್ಲ ಪ್ರಮಾಣ ಪತ್ರ ಸಿದ್ಧ ಪಡಿಸಿಕೊಳ್ಳುವುದರ ಜೊತೆಗೆ ದೈಹಿಕ ಪರೀಕ್ಷೆ ಹಾಗೂ ಲಿಖಿತ ಪರೀಕ್ಷೆಗೆ ತಯಾರಿ ಮಾಡಿಕೊಂಡರೆ ಉತ್ತಮ.
18 ವರ್ಷದಿಂದ 28 ವರ್ಷದೊಳಿಗಿನ ಅಭ್ಯರ್ಥಿಗಳನ್ನು ಈ ಹುದ್ದೆಗಳಿಗೆ ಪರಿಗಣಿಸಬಹುದು. ವಿದ್ಯಾರ್ಹತೆಯು ಮೊದಲು 10ನೇ ತರಗತಿ ಮೇಲೆ ಪೊಲೀಸ್ ಇಲಾಖೆಗೆ ನೇಮಕಾತಿ ಮಾಡಲಾಗುತ್ತಿತ್ತು. ಆದರೆ ಈ ಬಾರಿ ದ್ವಿತೀಯ ಪಿಯುಸಿಯನ್ನ ಪರಿಗಣಿಸಬಹುದು. ಏನೇ ಆಗಲಿ ಶೀಘ್ರವೇ ನೋಟಿಫಿಕೇಶನ್ ರಿಲೀಸ್ ಮಾಡುವ ಚಾನ್ಸ್ ಇದ್ದು ಸರ್ಕಾರಿ ಉದ್ಯೋಗಕ್ಕಾಗಿ ಆಕಾಂಕ್ಷಿಗಳು ತಯಾರಿ ನಡೆಸಿದರೆ ಅರ್ಧ ಉದ್ಯೋಗ ಪಡೆದಂತೆ ಆಗಬಹುದು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ