ನಿದ್ದೆ ಮಂಪರಿನಲ್ಲಿ ಚಾಲಕನ ಅನಾಹುತ; ಡಿವೈಡರ್‌ಗೆ ಡಿಕ್ಕಿ‌ ಹೊಡೆದ KSRTC ಅಂಬಾರಿ ಬಸ್; ಏನಾಯ್ತು?

author-image
admin
Updated On
ನಿದ್ದೆ ಮಂಪರಿನಲ್ಲಿ ಚಾಲಕನ ಅನಾಹುತ; ಡಿವೈಡರ್‌ಗೆ ಡಿಕ್ಕಿ‌ ಹೊಡೆದ KSRTC ಅಂಬಾರಿ ಬಸ್; ಏನಾಯ್ತು?
Advertisment
  • ನಿದ್ದೆ ಮಂಪರಿನಲ್ಲಿದ್ದ ಚಾಲಕ, ಬೆಚ್ಚಿ ಬಿದ್ದ ಅಂಬಾರಿ ಬಸ್‌ನಲ್ಲಿದ್ದವರು
  • ಕೇರಳದ ಕ್ಯಾಲಿಕಟ್‌ನಿಂದ ಬೆಂಗಳೂರಿಗೆ ಬರುತ್ತಿದ್ದ ಪ್ರಯಾಣಿಕರು
  • ಬೆಳಗಿನ ಜಾವ ಬಿಡದಿಯ ಕೇತುಗಾನಹಳ್ಳಿ ಬ್ರಿಡ್ಜ್ ಬಳಿ‌ ಅಪಘಾತ

ರಾಮನಗರ: ಬೆಳ್ಳಂಬೆಳಗ್ಗೆ ಡಿವೈಡರ್‌ಗೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದ ಅಪಘಾತ ಬಿಡದಿಯ ಕೇತುಗಾನಹಳ್ಳಿ ಬ್ರಿಡ್ಜ್ ಬಳಿ‌ ನಡೆದಿದೆ. ಡಿವೈಡರ್‌ಗೆ ಡಿಕ್ಕಿ ಹೊಡೆದ ರಭಸಕ್ಕೆ KSRTC ಅಂಬಾರಿ ಬಸ್‌ನ ಮುಂಭಾಗ ನಜ್ಜುಗುಜ್ಜಾಗಿದೆ.

ಅಂಬಾರಿ ಬಸ್‌ ಕೇರಳದ ಕ್ಯಾಲಿಕಟ್‌ನಿಂದ ಬೆಂಗಳೂರಿಗೆ ಬರುತ್ತಾ ಇತ್ತು. ಇಂದು ಬೆಳಗಿನ ಜಾವ 5.30ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ.

publive-image

ಕೆಎಸ್‌ಆರ್‌ಟಿಸಿ ಚಾಲಕ ನಿದ್ದೆ ಮಂಪರಿನಲ್ಲಿ ಎಡಬದಿಯ ಡಿವೈಡರ್‌ಗೆ ಡಿಕ್ಕಿ‌ ಹೊಡೆದಿದ್ದಾನೆ. ಆದರೆ ತಕ್ಷಣವೇ ಬಸ್ ಕಂಟ್ರೋಲ್‌ಗೆ ಮುಂದಾಗಿದ್ದು ಅದೃಷ್ಟವಶಾತ್ ಹೆಚ್ಚಿನ ಅಪಾಯ ತಪ್ಪಿದೆ. ಅದೃಷ್ಟವಶಾತ್ ಡಿವೈಡರ್‌ಗೆ ಡಿಕ್ಕಿ ಹೊಡೆದಾಗ ಎದುರುಗಡೆ ಯಾವುದೇ ವಾಹನಗಳು ಇರಲಿಲ್ಲ.

ಇದನ್ನೂ ಓದಿ:ಹಠಾತ್ ಹೃದಯಾಘಾತಕ್ಕೆ ಯುವತಿ ಸಾವು.. ಮನೆಯಲ್ಲಿ ರೆಡಿ ಆಗುವಾಗ ಜವರಾಯ ಎಂಟ್ರಿ 

ಬಸ್ ಅಪಘಾತದಲ್ಲಿ ಕೆಎಸ್‌ಆರ್‌ಟಿಸಿ ಡ್ರೈವರ್, ಕಂಡಕ್ಟರ್‌ಗೆ ಸಣ್ಣ, ಪುಟ್ಟ ಗಾಯಗಳಾಗಿದೆ. ಬಸ್‌ನಲ್ಲಿದ್ದ ಪ್ರಯಾಣಿಕರು ಸೇಫ್ ಆಗಿದ್ದಾರೆ ಎನ್ನಲಾಗಿದೆ. ಗಾಯಗೊಂಡವರಿಗೆ ಬಿಡದಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment