/newsfirstlive-kannada/media/post_attachments/wp-content/uploads/2023/11/AYYAPPA_TEMPLE_1.jpg)
ಬೆಂಗಳೂರು: ಶಬರಿಮಲೆಯ ಅಯ್ಯಪ್ಪಸ್ವಾಮಿ ಮಾಲಾಧಾರಿಗಳಿಗೆ ಕೆಎಸ್​ಆರ್​ಟಿಸಿ ಸಿಹಿ ಸುದ್ದಿ ನೀಡಿದೆ. ಬೆಂಗಳೂರಿನಿಂದ ಶಬರಿಮಲೆಗೆ KSRTC ವೋಲ್ವೋ ಬಸ್ ಬಿಡಲಿದೆ.
ನವೆಂಬರ್ 29 ರಿಂದ ಬೆಂಗಳೂರು ಟು ಶಬರಿಮಲೆಗೆ ಬಸ್ ಸಂಚಾರ ಶುರುವಾಗಲಿದೆ. ಶಬರಿಮಲೆ ಅಯ್ಯಪ್ಪಸ್ವಾಮಿ ಸೀಸನ್ ಹಿನ್ನೆಲೆಯಲ್ಲಿ ಭಕ್ತರಿಗೆ ಅನುಕೂಲ ಆಗಲಿ ಎಂದು ಈ ವ್ಯವಸ್ಥೆ ಮಾಡಿದೆ. ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳ ಪ್ರಯಾಣಕ್ಕಾಗಿ ಮೊದಲ ಬಾರಿಗೆ ವೋಲ್ವೋ ಬಸ್ ಸಂಚಾರ ಮಾಡಲಿದೆ.
ಇದನ್ನೂ ಓದಿ:ಐಪಿಎಲ್ ಹೊತ್ತಿನಲ್ಲೇ ಧೋನಿಗೆ ಬಿಗ್​ ಶಾಕ್; ದಾಖಲಾಯ್ತು ಕೌಂಟರ್ ಕೇಸ್..!
ಶಾಂತಿನಗರದಿಂದ ಶಬರಿಮಲೆ ನೀಲಕ್ಕಲ್​ಗೆ ಬಸ್ ಪ್ರಯಾಣ ಬೆಳಸಲಿದೆ. ಶಾಂತಿನಗರದಿಂದ ನೀಲಕ್ಕಲ್ ಹಾಗೂ ನೀಲಕ್ಕಲ್​ನಿಂದ ಶಾಂತಿನಗರಕ್ಕೆ ಪ್ರಯಾಣ ಬೆಳೆಸಲಿದೆ. ಮಧ್ಯಾಹ್ನ 1.50ಕ್ಕೆ ಶಾಂತಿನಗರದಿಂದ ಹೊರಟು ಬೆಳಗ್ಗೆ 6.40ಕ್ಕೆ ನೀಲಕ್ಕಲ್ ತಲುಪಲಿದೆ.
ವಿಶೇಷ ಸೂಚನೆ: ಎಲ್ಲಾ DTH ಮತ್ತು Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ