newsfirstkannada.com

ಶ್ರೀ ಕ್ಷೇತ್ರಕ್ಕೆ ಹೊರಟಿದ್ದ KSRTC ಬಸ್ಸಿನ ಬ್ರೇಕ್ ಫೇಲ್.. ಶಾಲೆಗೆ ನುಗ್ಗಿ ಒಂದು ಸಾವು

Share :

Published February 4, 2024 at 11:30am

    ಬಸ್ಸಿನ ಮುಂಭಾಗದ ಕಿಟಕಿ ಬಳಿ ಕುಳಿತ್ತಿದ್ದ ಪ್ರಯಾಣಿಕ ಸಾವು

    ಹಲವು ಪ್ರಯಾಣಿಕರಿಗೆ ಗಂಭೀರ ಗಾಯ, ಆಸ್ಪತ್ರೆಗೆ ದಾಖಲು

    ಕೆಎಸ್​ಆರ್​ಟಿಸಿ ಬಸ್ ಎಲ್ಲಿಂದ ಎಲ್ಲಿಗೆ ಹೋಗುತ್ತಿತ್ತು ಗೊತ್ತಾ?

ಹಾಸನ: ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದ ಕೆಎಸ್​ಆರ್​ಟಿಸಿ ಬಸ್ಸಿನ ಬ್ರೇಕ್ ಫೇಲ್​ ಆಗಿ ಶಾಲೆಯೊಂದಕ್ಕೆ ನುಗ್ಗಿದ ಪರಿಣಾಮ ಓರ್ವ ಪ್ರಯಾಣಿಕ ಸಾವನ್ನಪ್ಪಿದ್ದಾನೆ. ಈ ಘಟನೆ ಸಕಲೇಶಪುರ ತಾಲೂಕಿನ ಬಾಗೆ ಬಳಿ ನಡೆದಿದೆ.

ಕೆಎಸ್​ಆರ್​ಟಿಸಿ ಬಸ್​ ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಹೋಗುವಾಗ ಮಾರ್ಗಮಧ್ಯೆ ಬ್ರೇಕ್ ಫೇಲ್ ಆಗಿದೆ. ಹೀಗಾಗಿ ಬಾಗೆ ಬಳಿ ಇರುವ ಜೆಎಸ್ಎಸ್​ ಶಾಲೆಗೆ ಬಸ್​ ನುಗ್ಗಿಕೊಂಡು ಹಾಗೇ ಮುಂದೆ ಹೋಗಿದೆ. ಪರಿಣಾಮ ಬಸ್ಸಿನ ಮುಂಭಾಗದ ಕಿಟಕಿ ಬಳಿ ಕುಳಿತ್ತಿದ್ದ ಪ್ರಯಾಣಿಕ ಸಾವನ್ನಪ್ಪಿದ್ದಾನೆ. ಹಲವು ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿದ್ದು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಇಂದು ಭಾನುವಾರವಾಗಿದ್ದರಿಂದ ಶಾಲೆಗೆ ರಜೆ ಇತ್ತು. ಹೀಗಾಗಿ ಮಕ್ಕಳು ಇಲ್ಲದ ಕಾರಣ ದೊಡ್ಡ ಅನಾಹುತವೊಂದು ತಪ್ಪಿದೆ. ಇನ್ನು ಶಾಲೆಯ ಕಟ್ಟಡವು ಹಾನಿಯಾಗಿದೆ. ಸಕಲೇಶಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಶ್ರೀ ಕ್ಷೇತ್ರಕ್ಕೆ ಹೊರಟಿದ್ದ KSRTC ಬಸ್ಸಿನ ಬ್ರೇಕ್ ಫೇಲ್.. ಶಾಲೆಗೆ ನುಗ್ಗಿ ಒಂದು ಸಾವು

https://newsfirstlive.com/wp-content/uploads/2024/02/HSN_BUS_SCHOOL.jpg

Load More