/newsfirstlive-kannada/media/post_attachments/wp-content/uploads/2025/01/KLR_ACCIDENT_1.jpg)
ಕೋಲಾರ: ತಮಿಳುನಾಡು ಹಾಗೂ ಕರ್ನಾಟಕ ಗಡಿ ಭಾಗದಲ್ಲಿ ಕೆಎಸ್​ಆರ್​ಟಿಸಿ- ಕ್ಯಾಂಟರ್ ನಡುವೆ ಭೀಕರ ಡಿಕ್ಕಿ ಸಂಭವಿಸಿ ಸ್ಥಳದಲ್ಲೇ ನಾಲ್ವರು ಜೀವ ಕಳೆದುಕೊಂಡಿದ್ದಾರೆ. ಈ ಘಟನೆಯು ತಮಿಳುನಾಡಿನ ರಾಣಿಪೇಟೆ ಬಳಿ ನಡೆದಿದೆ.
ಅಪಘಾತದಲ್ಲಿ ಕೋಲಾರದ ಶ್ರೀನಿವಾಸಪುರ ತಾಲೂಕಿನ ಸೀಗೆಹಳ್ಳಿ ಗ್ರಾಮದ ಕ್ಯಾಂಟರ್ ಚಾಲಕ ಮಂಜುನಾಥ್, ಕ್ಲೀನರ್ ಶಂಕರ್, ಸಹಾಯಕ ಸೋಮಶೇಖರ್, ವೆಂಕಟೇಶ್ ನಗರ ಗ್ರಾಮದ ರೈತ ಕೃಷ್ಣಪ್ಪ ಕೊನೆಯುಸಿರೆಳೆದಿದ್ದಾರೆ. ಕೆಎಸ್​ಆರ್​ಟಿಸಿ ಬಸ್ ಮುಳಬಾಗಿಲು ತಾಲೂಕಿನ ನಲ್ಲೂರು ಗ್ರಾಮದ 50 ಜನರು ತಮಿಳುನಾಡಿನ ಮೇಲ್ಮರವತ್ತೂರು ಓಂಶಕ್ತಿ ದೇವಾಲಯಕ್ಕೆ ಪ್ರವಾಸ ಹೋಗಿದ್ದರು. ದೇವರಿಗೆ ಪೂಜೆ ಪುನಸ್ಕಾರ ಮಾಡಿ ಬಳಿಕ ವಾಪಸ್ ಆಗುತ್ತಿದ್ದರು.
/newsfirstlive-kannada/media/post_attachments/wp-content/uploads/2025/01/KLR_ACCIDENT.jpg)
ಇದನ್ನೂ ಓದಿ: Stampede; ತಿರುಪತಿ ಕಾಲ್ತುಳಿತದಲ್ಲಿ ಜೀವ ಬಿಟ್ಟ ಕರ್ನಾಟಕದ ಓರ್ವ ಮಹಿಳೆ
ಶ್ರೀನಿವಾಸಪುರ ತಾಲೂಕಿನ ಸೀಗೆಹಳ್ಳಿ ಗ್ರಾಮದ ನಾಲ್ವರು, ತರಕಾರಿ ತುಂಬಿಕೊಂಡು ಕ್ಯಾಂಟರ್​ನಲ್ಲಿ ಚೆನ್ನೈಗೆ ಹೋಗುತ್ತಿದ್ದರು. ಈ ವೇಳೆ ತಮಿಳುನಾಡಿನ ರಾಣಿಪೇಟೆ ಬಳಿ ಬರುತ್ತಿದ್ದಂತೆ ಎರಡು ವಾಹನದ ನಡಿವೆ ಭೀಕರ ಅಪಘಾತ ಸಂಭವಿಸಿದೆ. ಇದರಿಂದ ಕ್ಯಾಂಟರ್​ನಲ್ಲಿದ್ದ ನಾಲ್ವರು ಸ್ಥಳದಲ್ಲೇ ಜೀವ ಬಿಟ್ಟಿದ್ದಾರೆ. ಕೆಎಸ್​ಆರ್​ಟಿಸಿ ಬಸ್​ನಲ್ಲಿದ್ದವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಇದರಲ್ಲಿ ಬಸ್ ಚಾಲಕ ಮುಳಬಾಗಿಲು ತಾಲೂಕು ನೆರ್ನಹಳ್ಳಿ ಬಾಬು ಹಾಗೂ ಬಸ್​ನಲ್ಲಿದ್ದ ನಲ್ಲೂರು ಗ್ರಾಮದ ಸರಸ್ವತಮ್ಮ ಸ್ಥಿತಿ ಗಂಭೀರವಾಗಿದೆ. ಗಾಯಗೊಂಡವರನ್ನು ತಮಿಳುನಾಡಿನ ವೇಲೂರು ಸಿಎಂಸಿ ಆಸ್ಪತ್ರೆ, ರತ್ನಗಿರಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
​ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us