newsfirstkannada.com

KSRTC ಬಸ್​- ಕಾರಿನ ಮಧ್ಯೆ ಭಯಾನಕ ಡಿಕ್ಕಿ.. ಸ್ಥಳದಲ್ಲೇ ಚಾಲಕ ಸಾವು, ನಾಲ್ವರ ಸ್ಥಿತಿ ಚಿಂತಾಜನಕ

Share :

Published May 20, 2024 at 1:13pm

    ಗಂಭೀರವಾಗಿ ಗಾಯಗೊಂಡವರನ್ನು ಮಿಮ್ಸ್ ಆಸ್ಪತ್ರೆಗೆ ದಾಖಲು

    ಎರಡು ವಾಹನಗಳು ಡಿಕ್ಕಿಯಾದ ರಭಸಕ್ಕೆ ಕಾರು ನುಜ್ಜುಗುಜ್ಜಾಗಿದೆ

    ಆಸ್ಪತ್ರೆಗೆ ದಾಖಲು ಮಾಡಿದ ಗಾಯಾಳುಗಳ ಸ್ಥಿತಿ ಚಿಂತಾಜನಕ

ಮಂಡ್ಯ: ಕೆಎಸ್​ಆರ್​ಟಿಸಿ ಬಸ್ ಹಾಗೂ ಕಾರು ನಡುವೆ ಭೀಕರ ಮುಖಾಮುಖಿ ಡಿಕ್ಕಿ ಸಂಭವಿಸಿ ಕಾರು ಡ್ರೈವರ್​ ಸ್ಥಳದಲ್ಲೇ ಸಾವನ್ನಪ್ಪಿದ್ದು ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಘಟನೆಯು ಮಂಡ್ಯದ ಮದ್ದೂರು ತಾಲೂಕಿನ ಸಾದೊಳಲು ಗ್ರಾಮ ಬಳಿ ನಡೆದಿದೆ.

ಸಾದೊಳಲು ಗ್ರಾಮ ಬಳಿ ಬರುವ ಮದ್ದೂರು-ಮಳವಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಕೆಎಸ್​ಆರ್​ಟಿಸಿ ಬಸ್ ಹಾಗೂ ಕಾರು ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಪರಿಣಾಮ ಕಾರನ್ನು ಚಾಲನೆ ಮಾಡುತ್ತಿದ್ದ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಕಾರಿನಲ್ಲಿದ್ದ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ನಾಲ್ವರ ಸ್ಥಿತಿ ಚಿಂತಾಜನಕವಾಗಿದೆ.

ಇದನ್ನೂ ಓದಿ: World Meditation day ಯಾವಾಗ.. ಧ್ಯಾನದಿಂದ ನಮಗೆ ಏನೆಲ್ಲ ಪ್ರಯೋಜನ ಗೊತ್ತಾ?

ಕೆಎಸ್​ಆರ್​ಟಿಸಿ ಬಸ್ ಮಳವಳ್ಳಿ ಕಡೆಯಿಂದ ಬರುತ್ತಿತ್ತು. ಮದ್ದೂರು ಕಡೆಯಿಂದ ಶಿಫ್ಟ್ ಕಾರು ಹೋಗುವಾಗ ದುರ್ಘಟನೆ ನಡೆದಿದೆ. ಎರಡು ವಾಹನಗಳು ಡಿಕ್ಕಿಯಾದ ರಭಸಕ್ಕೆ ಕಾರು ನುಜ್ಜುಗುಜ್ಜಾಗಿದೆ. ಮದ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

KSRTC ಬಸ್​- ಕಾರಿನ ಮಧ್ಯೆ ಭಯಾನಕ ಡಿಕ್ಕಿ.. ಸ್ಥಳದಲ್ಲೇ ಚಾಲಕ ಸಾವು, ನಾಲ್ವರ ಸ್ಥಿತಿ ಚಿಂತಾಜನಕ

https://newsfirstlive.com/wp-content/uploads/2024/05/MND_BUS_CAR_ACCIDENT.jpg

Load More