ಡಿವೈಡರ್​ಗೆ ಡಿಕ್ಕಿ ಹೊಡೆದ KSRTC ಬಸ್​; 7 ವರ್ಷದ ಬಾಲಕ ಸಾವು, 12 ಜನರಿಗೆ ಗಂಭೀರ ಗಾಯ

author-image
AS Harshith
Updated On
ಡಿವೈಡರ್​ಗೆ ಡಿಕ್ಕಿ ಹೊಡೆದ KSRTC ಬಸ್​; 7 ವರ್ಷದ ಬಾಲಕ ಸಾವು, 12 ಜನರಿಗೆ ಗಂಭೀರ ಗಾಯ
Advertisment
  • ಬೆಂಗಳೂರಿನಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ KSRTC ಬಸ್​
  • ಡಿಕ್ಕಿ ಹೊಡೆದ ರಭಸಕ್ಕೆ ಬಸ್​ನಲ್ಲಿದ್ದ 7 ವರ್ಷದ ಬಾಲಕ ಸಾವು
  • ಡಿವೈಡರ್​ಗೆ ಡಿಕ್ಕಿ ಹೊಡೆದಂತೆ ತುಮಕೂರು ಜಿಲ್ಲೆಯ ಬಾಲಕ ಸಾವು

ಚಿಕ್ಕಮಗಳೂರು: ಕೆಎಸ್ಆರ್​​​ಟಿಸಿ ಬಸ್ ಡಿವೈಡರ್ ಗೆ ಡಿಕ್ಕಿ ಹೊಡೆದ ಘಟನೆ ತರೀಕೆರೆ ತಾಲೂಕಿನ ಬೆಟ್ಟದಹಳ್ಳಿ ಸಮೀಪ ನಡೆದಿದೆ. ಘಟನೆಯಲ್ಲಿ ಬಸ್ಸಿನಲ್ಲಿದ್ದ 7 ವರ್ಷದ ಬಾಲಕ ಸಾವನ್ನಪ್ಪಿದ್ದು, 12 ಜನರಿಗೆ ಗಂಭೀರ ಗಾಯವಾಗಿದೆ.

ಕೆಎಸ್ಆರ್​​​ಟಿಸಿ ಬಸ್ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಸಾವನ್ನಪ್ಪಿದ 7 ವರ್ಷದ ಬಾಲಕನನ್ನು ಪ್ರಮೋದ್ ಎಂದು ಗುರುತಿಸಲಾಗಿದೆ. ಈತ ತುಮಕೂರು ಜಿಲ್ಲೆಯ ಗುಬ್ಬಿ ನಿವಾಸಿಯಾಗಿದ್ದಾನೆ. ತರೀಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment