2 ಬೈಕ್​ಗಳಿಗೆ ಭಯಾನಕವಾಗಿ KSRTC ಬಸ್ ಡಿಕ್ಕಿ, ಪಲ್ಟಿ.. ಪ್ರಾಣ ಬಿಟ್ಟ ಸಬ್ ಇನ್​​ಸ್ಪೆಕ್ಟರ್

author-image
Bheemappa
Updated On
2 ಬೈಕ್​ಗಳಿಗೆ ಭಯಾನಕವಾಗಿ KSRTC ಬಸ್ ಡಿಕ್ಕಿ, ಪಲ್ಟಿ.. ಪ್ರಾಣ ಬಿಟ್ಟ ಸಬ್ ಇನ್​​ಸ್ಪೆಕ್ಟರ್
Advertisment
  • ನೋಡುತ್ತಿದ್ದಂತೆ ಎರಡು ಬೈಕ್​ಗಳಲ್ಲಿ ಡಿಕ್ಕಿಯಾದ ಬಸ್​
  • ಘಟನೆಯಲ್ಲಿ ಜೀವ ಕಳೆದುಕೊಂಡ ಸಬ್ ಇನ್​​ಸ್ಪೆಕ್ಟರ್
  • ಎಕ್ಸ್​ಕ್ಲೂಸಿವ್ ಸಿಸಿಟಿವಿ ದೃಶ್ಯ ನ್ಯೂಸ್ ಫಸ್ಟ್​ಗೆ ಲಭ್ಯ

ಬೆಂಗಳೂರು: ಚಾಲನೆಯಲ್ಲಿದ್ದ ಎರಡು ಬೈಕ್​ಗಳಿಗೆ ಕೆಎಸ್​ಆರ್​​ಟಿಸಿ ಬಸ್​ ಭೀಕರವಾಗಿ ಡಿಕ್ಕಿಯಾಗಿ ಪಲ್ಟಿಯಾದ ಪರಿಣಾಮ ಓರ್ವ ಜೀವ ಕಳೆದುಕೊಂಡಿದ್ದು 7 ಮಂದಿ ಗಂಭೀರವಾಗಿದ್ದಾರೆ. ಬೆಂಗಳೂರಿನ ಹೊರ ಭಾಗದ ಕಗ್ಗಲೀಪುರದ ತಿರುವಿನಲ್ಲಿ ಈ ಘಟನೆ ನಡೆದಿದೆ. ಈ ಘಟನೆಯ ಎಕ್ಸ್​ಕ್ಲೂಸಿವ್ ಸಿಸಿಟಿವಿ ದೃಶ್ಯ ನ್ಯೂಸ್ ಫಸ್ಟ್​ಗೆ ಲಭ್ಯವಾಗಿದೆ.

ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಸಬ್ ಇನ್​​ಸ್ಪೆಕ್ಟರ್ ನಾಗರಾಜು ಮೃತ ದುರ್ದೈವಿ. ಕೆಎಸ್​ಆರ್​ಟಿಸಿ ಬಸ್ ಕಗ್ಗಲಿಪುರದ ತಿರುವಿನಲ್ಲಿ ವೇಗವಾಗಿ ಬರುತ್ತಿತ್ತು. ಈ ವೇಳೆ ನಿಯಂತ್ರಣ ತಪ್ಪಿದ ಬಸ್,​ ಎದುರಿಗೆ ಬರುತ್ತಿದ್ದ ಎರಡು ಬೈಕ್​​ಗಳಿಗೆ ಡಿಕ್ಕಿ ಹೊಡೆದು ಬಳಿಕ ಹಳ್ಳಕ್ಕೆ ಪಲ್ಟಿಯಾಗಿದೆ. ಇದರ ಪರಿಣಾಮ ಸಬ್ ಇನ್​​ಸ್ಪೆಕ್ಟರ್​ ನಾಗರಾಜು ಅವರು ನಿಧನರಾಗಿದ್ದಾರೆ. ಘಟನೆಯಲ್ಲಿ 7 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.

publive-image

ಗಾಯಾಳುಗಳನ್ನು ನಗರದ ದಯಾನಂದ ಸಾಗರ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬಸ್​ ಡಿಕ್ಕಿಯ ರಭಸಕ್ಕೆ ಬೈಕ್​ನಲ್ಲಿದ್ದ ಸಬ್​​ ಇನ್​ಸ್ಪೆಕ್ಟರ್​ ಜೀವ ಸ್ಥಳದಲ್ಲೇ ಹೋಗಿದೆ. ಇನ್ನು ಬಸ್​ನಲ್ಲಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳು ಆಗಿವೆ. ರಸ್ತೆ ತಿರುವಿನಲ್ಲಿ ನಿಯಂತ್ರಣ ಕಳೆದುಕೊಂಡು ಎದುರು ಬರುತ್ತಿದ್ದ ಬೈಕ್​ಗಳಿಗೆ ಭಯಾನಕವಾಗಿ ಬಸ್ ಡಿಕ್ಕಿ ಹೊಡೆದು ಬಳಿಕ ಹಳ್ಳಕ್ಕೆ ಮಗುಚಿ ಬಿದ್ದಿದೆ. ಈ ದೃಷ್ಯ ಎಲ್ಲವೂ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಇದೀಗ ನ್ಯೂಸ್​​ಫಸ್ಟ್​ಗೆ ವಿಡಿಯೋ ಲಭ್ಯವವಾಗಿದೆ.

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment