/newsfirstlive-kannada/media/post_attachments/wp-content/uploads/2024/07/Reels-1.jpg)
ಹುಬ್ಬಳ್ಳಿ: ಸರ್ಕಾರಿ ಬಸ್ ಚಾಲಕನ ರೀಲ್ಸ್ ಹುಚ್ಚಾಟಕ್ಕೆ ಎರಡು ಎತ್ತುಗಳು ಬಲಿಯಾದ ಘಟನೆ ನಡೆದಿದೆ. ಇಬ್ಬರು ರೈತರಿಗೆ ಗಂಭೀರ ಗಾಯಗಳಾಗಿವೆ. ಹುಬ್ಬಳ್ಳಿ ತಾಲೂಕಿನ ಕುಸುಗಲ್ ಬಳಿ ಈ ಘಟನೆ ನಡೆದಿದೆ.
ಸರ್ಕಾರಿ ಬಸ್​​ ಹುಬ್ಬಳ್ಳಿಯಿಂದ ಬಾಗಲಕೋಟೆ ಕಡೆ ಹೊರಟಿತ್ತು. ಈ ಸಮಯದಲ್ಲಿ ಬಸ್ ಚಾಲಕ ರೀಲ್ಸ್ ಮಾಡಲು ಮುಂದಾಗಿದ್ದಾನೆ. ಸಂಚಾರದ ವೇಳೆ ರೀಲ್ಸ್​ನಲ್ಲಿ ಮುಳುಗಿದ್ದ ಡ್ರೈವರ್​ ರಸ್ತೆಯಲ್ಲಿ ಅದರ ಪಾಡಿಗೆ ಸಾಗುತ್ತಿದ್ದ ಎತ್ತಿನಗಾಡಿ ಮತ್ತು ರೈತರನ್ನು ಗಮನಿಸದೆ ರೀಲ್ಸ್ ಗುಂಗಿನಲ್ಲಿ ಹೋಗಿ ಗುದ್ದಿದ್ದಾನೆ.
ಸರ್ಕಾರಿ ಬಸ್ ಚಾಲಕನ ರೀಲ್ಸ್ ಹುಚ್ಚಾಟಕ್ಕೆ ಎರಡು ಎತ್ತುಗಳು ಬಲಿಯಾದ ಘಟನೆ ನಡೆದಿದೆ. ಇಬ್ಬರು ರೈತರಿಗೆ ಗಂಭೀರ ಗಾಯಗಳಾಗಿವೆ. ಹುಬ್ಬಳ್ಳಿ ತಾಲೂಕಿನ ಕುಸುಗಲ್ ಬಳಿ ಈ ಘಟನೆ ನಡೆದಿದೆ.#Accident#Hubballi#RoadAccident#KSRTC#KarnatakaPolice#Karnataka#Reelspic.twitter.com/pzcE9OmHAi
— Harshith Achrappady (@HAchrappady)
ಸರ್ಕಾರಿ ಬಸ್ ಚಾಲಕನ ರೀಲ್ಸ್ ಹುಚ್ಚಾಟಕ್ಕೆ ಎರಡು ಎತ್ತುಗಳು ಬಲಿಯಾದ ಘಟನೆ ನಡೆದಿದೆ. ಇಬ್ಬರು ರೈತರಿಗೆ ಗಂಭೀರ ಗಾಯಗಳಾಗಿವೆ. ಹುಬ್ಬಳ್ಳಿ ತಾಲೂಕಿನ ಕುಸುಗಲ್ ಬಳಿ ಈ ಘಟನೆ ನಡೆದಿದೆ.#Accident#Hubballi#RoadAccident#KSRTC#KarnatakaPolice#Karnataka#Reelspic.twitter.com/pzcE9OmHAi
— Harshith Achrappady (@HAchrappady) July 17, 2024
">July 17, 2024
ಇದನ್ನೂ ಓದಿ: ಡ್ರೋನ್​​ ಮೂಲಕ ಹೆಂಡತಿ ಅಕ್ರಮ ಸಂಬಂಧ ಪತ್ತೆ ಹಚ್ಚಿದ ಗಂಡ.. ಆಮೇಲೆ ನಡೆದಿದ್ದೇ ಬೇರೆ!
ಬಸ್​ ಎತ್ತಿನಗಾಡಿಗೆ ಹಿಂಬದಿಗೆ ಹೋಗಿ ಗುದ್ದಿದ ಪರಿಣಾಮ ಎರಡು ಎತ್ತುಗಳು ಸ್ಥಳದಲ್ಲೇ ಸಾವನ್ನಪ್ಪಿದೆ. ಇಬ್ಬರು ರೈತರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳಿಗೆ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹುಬ್ಬಳ್ಳಿಯ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ