newsfirstkannada.com

KSRTC ಪ್ರಯಾಣಿಕರಿಗೆ ಬಿಗ್ ಶಾಕ್‌; ಶೀಘ್ರವೇ ಟಿಕೆಟ್ ದರ ಹೆಚ್ಚಳ?

Share :

Published June 9, 2024 at 6:03am

  ಶೇಕಡಾ 10 ರಷ್ಟು ದರ ಏರಿಕೆಗೆ ಕೆಎಸ್ಆರ್ಟಿಸಿಯಿಂದ ಪ್ರಸ್ತಾಪ

  ಪ್ರಸ್ತಾವನೆ ಗ್ರೀನ್ ಸಿಗ್ನಲ್ ನೀಡಿದ್ರೆ ದರ ಪರಿಷ್ಕರಣೆ ಫಿಕ್ಸ್​ ಫಿಕ್ಸ್!​

  ಪ್ರತಿ ಸ್ಟೇಜ್ ಆಧಾರದ ಮೇಲೆ 2-3 ರೂಪಾಯಿ ಹೆಚ್ಚೋ ಸಾಧ್ಯತೆ

ಬೆಂಗಳೂರು: ದುಬಾರಿ ದುನಿಯಾದಲ್ಲಿ ಜೀವನ ಮಾಡೋಕೆ ಕಷ್ಟ ಆಗ್ಬಿಟ್ಟಿದೆ. ಪೆಟ್ರೋಲ್, ಡೀಸೆಲ್, ಅಡುಗೆ ಎಣ್ಣೆ ದಿನನಿತ್ಯ ಬಳಕೆ ವಸ್ತುಗಳ ಬೆಲೆ ಏರಿಕೆ ಜನ ಸಾಮಾನ್ಯರನ್ನ ಹಿಂಡಿ ಹಿಪ್ಪೆ ಮಾಡ್ತಿದೆ. ಇದರ ನಡುವೆ ಇದೀಗ ಸರ್ಕಾರ ಮತ್ತೊಂದು ದರ ಪರಿಷ್ಕರಣೆಗೆ ಮುಂದಾಗಿದೆ. ನಿಮ್ಮ ಜೇಬಿಗೆ ಕತ್ತರಿ ಬೀಳೊದು ಪಕ್ಕಾ.

ಇದನ್ನೂ  ಓದಿ: 6 ತಿಂಗಳ ಹಿಂದೆಯೇ ಡಿವೋರ್ಸ್​ಗೆ ನಿರ್ಧಾರ, ರಾಜಿ ಪಂಚಾಯ್ತಿ ಮಾಡಿದ್ರು; ವಕೀಲೆ ಅನಿತಾ ಏನಂದ್ರು ಗೊತ್ತಾ?

ಇದು ಮನೆ ಮನೆ ರಾಮಾಯಾಣ. ಇರೋದ್ರಲ್ಲೇ ಸಂಸಾರ ನಿಭಾಯಿಸೋಕೆ ಆಗದೇ ಸಾಮಾನ್ಯ ಜನ ಒದ್ದಾಡ್ತಿದ್ದಾರೆ. ಹಿಂಗೆ​ ಇರ್ಬೇಕಾದ್ರೆ ಜನಸಾಮಾನ್ಯರ ಅನುಕೂಲಕ್ಕಿರೋ ಕೆಎಸ್​ಆರ್​ಟಿಸಿ ನಿಗಮ ಜನರ ಜೇಬಿಗೆ ಕತ್ತರಿ ಹಾಕೋಕೆ​ ಮುಂದಾಗಿದೆ. ದರ ಪರಿಷ್ಕರಣೆ ಮಾಡೋಕೆ​ ಮುಂದಾಗಿದೆ. ದರ ಏರಿಕೆ ಮಾಡಲು ಸರ್ಕಾರಕ್ಕೆ ಈಗಾಗಲೇ KSRTC ಪ್ರಸ್ತಾವನೆ ಸಲ್ಲಿಸಲು ಮುಂದಾಗಿದೆ. ಕಳೆದ ಬಾರಿ ಶೇಖಡ 20 ರಷ್ಟು ದರ ಏರಿಕೆಗೆ ಪ್ರಸ್ತಾವನೆ ಕಳಿಸಿದ್ದ ನಿಗಮ, ಇದೀಗ ಶೇಕಡಾ 20 ರಷ್ಟು ದರ ಏರಿಕೆಗೆ ಬೇಡಿಕೆ ಇಟ್ಟಿದೆ.

ಇದನ್ನೂ  ಓದಿ: ಉಪ್ಪಿನಕಾಯಿ ಮಾರಾಟದಿಂದ ಸಾಮ್ರಾಜ್ಯ ಕಟ್ಟಿದ ಧೀಮಂತ.. ರಾಮೋಜಿ ರಾವ್ ಬದುಕಿನ ರೋಚಕ ಕಥೆ ಇಲ್ಲಿದೆ

ಕಳೆದ ಮೂರು ನಾಲ್ಕು ವರ್ಷದಿಂದ ಟಿಕೆಟ್ ದರ ಏರಿಕೆಯೂ ಆಗಿಲ್ಲ. ಬಸ್ ಬಿಡಿಭಾಗಗಳು ಬಹಳಷ್ಟು ದುಬಾರಿಯಾಗಿದೆ. ಜೊತೆಗೆ ಬಸ್ ಪ್ರಯಾಣಿಕರ ಸಂಖ್ಯೆ ಕುಸಿದಿದೆ. ಇದರಿಂದ ಟಿಕೆಟ್ ರೆವೆನ್ಯೂ ಕಲೆಕ್ಷನ್ ಸಹ ಪಾತಾಳಕ್ಕೆ ಇಳಿದಿದೆ. ಹೀಗಾಗಿ ದರ ಏರಿಕೆ ಮಾಡದಿದ್ರೆ ಬಸ್ ರಸ್ತೆಗಿಳಿಸೋದು ಕಷ್ಟ ಅಂತಿದೆ ಇಲಾಖೆ. ಹೀಗಾಗಿ ಸದ್ಯದ ಆರ್ಥಿಕ ಸಂಕಷ್ಟದಿಂದ ಹೊರಬರಲು ಕನಿಷ್ಠ 10 ಶೇಕಡಾ ದರ ಏರಿಕೆ ಮಾಡ್ಬೇಕೆಂದು KSRTC ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಶಕ್ತಿ ಯೋಜನೆಯಿಂದ ಈ ಬಾರಿ KSRTCಯಲ್ಲಿ ಜನರ ಸಂಚಾರ ಹೆಚ್ಚಾಗಿದೆ. ನಾರಿಯರು ದೇವಸ್ಥಾನ, ಮಠ ಮಂದಿರ ಅಂತ ಸುತ್ತಿದ್ದಾರೆ. ಹೀಗಿದ್ರೂ ನಿಗಮ ನಷ್ಟ ಅನುಭವಿಸ್ತಿದ್ದು, ಒಟ್ಟಿನಲ್ಲಿ ಸರ್ಕಾರ KSRTC ಪ್ರಸ್ತಾವನೆ ಗ್ರೀನ್ ಸಿಗ್ನಲ್ ನೀಡಿದ್ರೆ ಪ್ರತಿ ಸ್ಟೇಜ್ ಆಧಾರದ ಮೇಲೆ, 2 ರಿಂದ 3 ರೂ ಹೆಚ್ಚು ಸಾಧ್ಯತೆ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

KSRTC ಪ್ರಯಾಣಿಕರಿಗೆ ಬಿಗ್ ಶಾಕ್‌; ಶೀಘ್ರವೇ ಟಿಕೆಟ್ ದರ ಹೆಚ್ಚಳ?

https://newsfirstlive.com/wp-content/uploads/2023/06/KSRTC_1.jpg

Load More