ಪ್ರಾಣದ ಹಂಗು ತೊರೆದು ಅಜ್ಜಿ ಜೀವ ಉಳಿಸಲು ನದಿಗೆ ಜಿಗಿದ KSRTC ಡ್ರೈವರ್; ಕೊನೆಗೆ ಏನಾಯ್ತು?

author-image
Gopal Kulkarni
Updated On
ಪ್ರಾಣದ ಹಂಗು ತೊರೆದು ಅಜ್ಜಿ ಜೀವ ಉಳಿಸಲು ನದಿಗೆ ಜಿಗಿದ KSRTC ಡ್ರೈವರ್; ಕೊನೆಗೆ ಏನಾಯ್ತು?
Advertisment
  • ಆತ್ಮಹತ್ಯೆ ಮಾಡಿಕೊಳ್ಳಲೆಂದು ಕುಮದ್ವತಿ ನದಿಗೆ ಜಿಗಿದ ಅಜ್ಜಿ
  • ಅಜ್ಜಿಯನ್ನು ಬದುಕಿಸಲು ನದಿಗೆ ಹಾರಿದ ಕೆಎಸ್​​ಆರ್​ಟಿಸಿ ಡ್ರೈವರ್
  • ಪ್ರಾಣದ ಹಂಗು ತೊರೆದು ಪ್ರಯತ್ನಿಸಿದರೂ ಕೊನೆಗೆ ಗೆದ್ದಿದ್ದು ಯಮನೇ..!

ಹಾವೇರಿ: ಏಲಕ್ಕಿ ಕಂಪಿನ ನಾಡು ಹಾವೇರಿಯಲ್ಲೊಂದು ಮನಕಲಕುವ ಘಟನೆಯೊಂದು ನಡೆದಿದೆ. ಒಂದು ಕಡೆ ಕರ್ತವ್ಯ ಮತ್ತೊಂದು ಕಡೆ ಮಾನವೀಯತೆ, ಎರಡು ಒಂದೇ ಸಂದರ್ಭದಲ್ಲಿ ಎದುರಾದಾಗ ಹಾವೇರಿಯ ಬಸ್​ ಚಾಲಕನೊಬ್ಬ ಮೊದಲು ಆಯ್ಕೆ ಮಾಡಿಕೊಂಡಿದ್ದು ಮಾನವೀಯತೆಯನ್ನ.

ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಮಾಸೂರು ಗ್ರಾಮದ ಬಳಿ ಅಜ್ಜಿಯೊಬ್ಬರು ಆತ್ಮಹತ್ಯೆ ಮಾಡಿಕೊಳ್ಳಲು ತುಂಬಿ ಹರಿಯುತ್ತಿರುವ ಕುಮದ್ವತಿ ನದಿಗೆ ಹಾರಿದ್ದಾರೆ. ಅದೇ ವೇಳೆ ಮಜೀದಸಾಬ್ ಎಂಬ ಕೆಎಸ್​ಆರ್​​ಟಿಸಿ ಡ್ರೈವರ್​ ರಟ್ಟಿಹಳ್ಳಿಯಿಂದ ಹಿರೇಕೆರೂರಿಗೆ ಬಸ್ ಓಡಿಸಿಕೊಂಡು ಹೋಗುತ್ತಿದ್ದರು, ಅಜ್ಜಿ ನದಿಗೆ ಜಿಗಿದಿದ್ದನ್ನು ಗಮನಿಸಿದ ಮಜೀದ್​ ಸಾಬ್​ ಹಿಂದೆ ಮುಂದೆ ನೋಡದೆ ಅಲ್ಲಿಯೇ ಬಸ್​ ನಿಲ್ಲಿಸಿ. ಉಕ್ಕಿ ಹರಿಯುತ್ತಿದ್ದ ನದಿಗೆ ಜೀವದ ಹಂಗು ತೊರೆದು ಜಿಗಿದಿದ್ದಾರೆ. ಈಜಿಕೊಂಡು ಹೋಗಿ ಅಜ್ಜಿಯ ದೇಹವನ್ನು ನದಿಯ ದಂಡೆಗೆ ಎಳೆದುಕೊಂಡು ಬಂದಿದ್ದಾರೆ. ಆದ್ರೆ ವಿಪರ್ಯಾಸ ನೋಡಿ ಕಾಲನ ಮುಂದೆ ಯಾವ ಮಜೀದ್​​ಸಾಬ್​ ಅವರ ಮಾನವೀಯತೆಯ ಪ್ರತಿನಿಧಿಸುವ ಆ ಪ್ರಯತ್ನ ವಿಫಲವಾಗಿದೆ. ಅಜ್ಜಿಯನ್ನು ಕಾಪಾಡಲು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಿದರೂ ಕೂಡ ಆಕೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ:ಅಪ್ಪನ ಮೂಳೆಯನ್ನಾದರೂ ತಂದು ಕೊಡಿ; ಶಿರೂರು ಗುಡ್ಡ ಕುಸಿತದಲ್ಲಿ ತಂದೆ ಕಳ್ಕೊಂಡ ಮಗಳ ಕಣ್ಣೀರು

publive-image

ಮಜೀದಸಾಬ್ ಗುಬ್ಬಿ ಹೋರಾಟಕ್ಕೆ ಸಲಾಂ ಎಂದ ಜನರು

ಇನ್ನೂ ಜೀವದ ಹಂಗು ತೊರೆದು ಅಜ್ಜಿಯನ್ನು ಕಾಪಾಡಲು ನದಿಗೆ ಹಾರಿದ ಡ್ರೈವರ್ ಮಜೀದಸಾಬ್ ಗುಬ್ಬಿಯವರ ಪ್ರಯತ್ನಕ್ಕೆ ಜನರು ಹಾಗೂ ಪ್ರಯಾಣಿಕರು ಭೇಷ್ ಎಂದಿದ್ದಾರೆ. ಹಾಡಿ ಹೊಗಳಿದ್ದಾರೆ. ಮಜೀದಸಾಬ್​ ನದಿಗೆ ಜಿಗಿದಾಗ ಅವರ ಅಜ್ಜಿಯನ್ನುಳಿಸುವ ಪ್ರಯತ್ನಕ್ಕೆ ಪ್ರಯಾಣಿಕರು ಸಹ ಸಾಥ್ ನೀಡಿದ್ದಾರೆ. ಆದ್ರೆ ಯಮನಿಗೆ ಗಡುವು ಕರುಣೆ ಅನ್ನೋದೆಲ್ಲಿದೆ. ಇವರೆಲ್ಲರ ಆ ಪ್ರಯತ್ನವೂ ಕೈಗೂಡದೇ ಹೋಗಿದೆ. ಅಜ್ಜಿ ಕೊನೆಗೂ ಸಾವನ್ನಪ್ಪಿದ್ದಾರೆ. ಆದ್ರೆ ಮಜೀದಸಾಬ್ ಅವರ ಮೆರೆದ ಮಾನವೀಯತೆಗೆ ಎಲ್ಲರಿಂದಲೂ ಶ್ಲಾಘನೆ ವ್ಯಕ್ತವಾಗಿದೆ. ಸದ್ಯ ಆತ್ಮಹತ್ಯೆಗೆ ಮುಂದಾದ ವೃದ್ಧೆ ಯಾರು ಏನು ಎಂಬುದು ಸ್ಪಷ್ಟವಾಗಿಲ್ಲ ರಟ್ಟಿಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲೆಗೊಂಡಿದ್ದು, ಅಜ್ಜಿಯ ಗುರುತು ಪತ್ತೆಗಾಗಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment