Advertisment

KTM ADVENTURE 390X ಅತ್ಯಂತ ಕಡಿಮೆ ಬೆಲೆಗೆ ಲಭ್ಯ.. ಹಳೆ ಮಾಡೆಲ್​ಗಿಂತ 70 ಸಾವಿರ ರೂಪಾಯಿ ಕಡಿಮೆ!

author-image
Bheemappa
Updated On
KTM ADVENTURE 390X ಅತ್ಯಂತ ಕಡಿಮೆ ಬೆಲೆಗೆ ಲಭ್ಯ.. ಹಳೆ ಮಾಡೆಲ್​ಗಿಂತ 70 ಸಾವಿರ ರೂಪಾಯಿ ಕಡಿಮೆ!
Advertisment
  • ಭಾರತೀಯ ಮಾರುಕಟ್ಟೆಗೆ ಬಂದ ಮೇಲೆ ಕಂಪನಿಗೆ ಬಿಗ್ ಹೈಪ್
  • KTM ADVENTURE 390X ಬೈಕ್​ನ ತೂಕ ಇರುವುದು ಎಷ್ಟು?
  • ಈ ಬೈಕ್ ಪ್ರತಿ ಲೀಟರ್​ಗೆ ಎಷ್ಟು ಮೈಲೆಜ್​ ಕೊಡುತ್ತದೆ ಗೊತ್ತಾ.?

ಕೆಟಿಎಂ ಬೈಕ್​ಗಳು ಹೊಸದಾಗಿ 2012ರಲ್ಲಿ ಭಾರತೀಯ ಮಾರುಕಟ್ಟೆಗೆ ಬಂದಾಗ ಇದು ದೊಡ್ಡ ಕ್ರೇಝ್​ ಹುಟ್ಟುಹಾಕಿತ್ತು. ಅದಾದ ಮೇಲೆ ಈ ಕಂಪನಿ ಹಿಂದಿರುಗಿ ನೋಡಿಯೇ ಇಲ್ಲ. ಇವತ್ತಿನವರೆಗೂ ಅದರ ಹೈಪ್​ ಹಾಗೇ ಇದೆ. ಡ್ಯೂಕ್​ 200, 290, 390, 890 ಹೀಗೆ ಎಲ್ಲವೂ ಕೂಡ ಸೂಪರ್​ ಹಿಟ್​.

Advertisment

ಈಗ ಮಾರುಕಟ್ಟೆನ ಕಬ್ಜ ಮಾಡೋಕೆ ಹೊಸದಾಗಿ ಒಂದು ಅಡ್ವೆಂಚರ್​ ಸೀರೀಸ್​ ಬೈಕ್​ನ ಲಾಂಚ್ ಮಾಡ್ತಾ ಇದೆ. ಅದೇ KTM ADVENTURE 390X. ಅನೇಕ ವಿಶೇಷತೆಗಳೊಂದಿಗೆ ಇದೀಗ ಮಾರ್ಕೆಟ್​ಗೆ ಎಂಟ್ರಿ ಕೊಟ್ಟಿರುವ ಈ ಬೈಕ್, ಎಲ್ಲರ ಮನ ಗೆದ್ದಿದೆ. ನೀವೂ ಕೂಡ ಈ ಹೊಸ ಬೈಕ್​ ಮೇಲೆ ಕಣ್ಣಿಟ್ಟಿದ್ರೆ ನೀವು ಈ ಬೈಕ್​ನ ಸ್ಪೆಸಿಫಿಕೇಷನ್ಸ್​ ಬಗ್ಗೆ ತಿಳಿದುಕೊಳ್ಳೇಬೇಕು.

publive-image

ಹಳೇಯ KTM ADVENTURE 390ನ ಆಲ್​ಮೋಸ್ಟ್​​ ಎಲ್ಲಾ ವಿಶೇಷತೆಗಳನ್ನು ಮುಂದುವರೆಸಿಕೊಂಡು ಬಂದಿದೆ. ಆದ್ರೆ ಕೆಲವೊಂದಿಷ್ಟು ಬದಲಾವಣೆ ಮಾಡಿಕೊಂಡು ಇದೀಗ ಬರ್ತಾ ಇದೆ. ಮೊದಲನೇಯದ್ದಾಗಿ ಇದರ ತೂಕ 181 ಕೆಜಿ ಹೊಂದಿದೆ.

ಇನ್ನು ಸಸ್ಪೆನ್ಷನ್​ ವಿಷ್ಯಕ್ಕೆ ಬಂದ್ರೆ WP APEX USD FORKS ಹಾಗೇ WP APEX MONOSHOCK SUSPENSION ಹೊಂದಿದೆ. ಇದ್ರಿಂದ ನಿಮಗೆ ಆರಾಮದಾಯಕ ರೈಡಿಂಗ್​ ಅನುಭವ ನೀಡುತ್ತೆ.

Advertisment

ಈ ಬೈಕ್ ಮುಂದಿನ ಚಕ್ರದಲ್ಲಿ 19 ಇಂಚಿನ ವ್ಹೀಲ್​ ALLOY ಹಾಗೂ ಹಿಂದಿನ ಚಕ್ರದಲ್ಲಿ 17 ಇಂಚಿನ ವ್ಹೀಲ್​ ALLOY ಹೊಂದಿದೆ.

ಇದಕ್ಕೆ ಸಿಂಗಲ್​ ಸಿಲಿಂಡರ್​, 4 ಸ್ಟ್ರೋಕ್, 4 ವಾಲ್ವ್​, ಲಿಕ್ವಿಡ್​ ಕೂಲ್ಡ್​​ ಇಂಜಿನ್ ಹೊಂದಿದ್ದು, ಡಬಲ್​ ಡಿಸ್ಕ್​ ಜೊತೆಗೆ ಬದಲಿಸಿಕೊಳ್ಳಬಹುದಾದ ABS ಹೊಂದಿದೆ.. ಇದರ ಮತ್ತೊಂದು ವಿಶೇಷತೆ ಏನೆಂದ್ರೆ ಈ ಗಾಡೀನಾ ಓಡಿಸೋಕೆ ಎಲ್ಲರೂ ಖುಷಿ ಪಡ್ತಾರೆ. ಯಾಕಂದ್ರೆ ಇದರ ರೈಡಿಂಗ್​ ಌಂಗಲ್​ ಕಡಿಮೆ ಉದ್ದ ಇರೋರಿಗೂ ಅಡ್ಜಸ್ಟ್​ ಆಗುತ್ತೆ.

ಇದನ್ನೂ ಓದಿ: IIIT ಬೆಂಗಳೂರು ವಿದ್ಯಾರ್ಥಿಗೆ ಲಕ್.. ಪ್ರತಿಷ್ಠಿತ ಕಂಪನಿಯಲ್ಲಿ 1.45 ಕೋಟಿ ರೂಪಾಯಿ ಸಂಬಳದ ಉದ್ಯೋಗ! ​

Advertisment

publive-image

ಪೆಟ್ರೋಲ್​ ಕೆಪ್ಯಾಸಿಟಿಗೆ ಬಂದ್ರೆ 14.5 ಲೀ. ಪೆಟ್ರೋಲ್​ನ ಸಾಮರ್ಥ್ಯ ಹೊಂದಿದೆ. ಈಗ ಮೇನ್​ ವಿಷ್ಯ ಇದರ ಮೈಲೇಜ್​ ಎಷ್ಟು?. ಇದರ ಬಗ್ಗೆ ಕಂಪನಿ ಹೇಳೋದು ಪ್ರತೀ ಲೀಟರ್​ಗೆ ಇದರ ಮೈಲೇಜ್​ 32.4 ಕಿಮೀ ಅಂತ. ಆದ್ರೆ ಪ್ರ್ಯಾಟಿಕಲೀ ಇದರ ಮೈಲೇಜ್​ 32 ಕಿ.ಮೀ/ಲೀ. ಅಂತ ಅಂದಾಜಿಸಲಾಗಿದೆ.

ಆದ್ರೆ ಇದರ ಹಿಂದಿನ ಮಾಡೆಲ್​ ಆದ KTM ADVENTURE 390ಗೆ ಹೋಲಿಕೆ ಮಾಡಿದ್ರೆ, KTM ADVENTURE 390X 70 ಸಾವಿರಕ್ಕಿಂತ ಕಡಿಮೆ ಬೆಲೆಗೆ ಸಿಗ್ತಾ ಇದೆ. ಅಂದ್ರೆ KTM ADVENTURE 390 ಬೆಲೆ 3,69,000 ಆದ್ರೆ KTM ADVENTURE 390X ಬೆಲೆ 3,03,000 ರೂಪಾಯಿ. ಹಾಗಾದ್ರೆ KTM ADVENTURE 390X ಬಗ್ಗೆ ಯಾವ ರೀತಿಯ ರಿವ್ಯೂಗಳು ಮುಂದಿನ ದಿನಗಳಲ್ಲಿ ಬರುತ್ತೋ ಕಾದು ನೋಡಬೇಕು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment