newsfirstkannada.com

ಅಂಪೈರ್ ಮೇಲೆ ಸಿಟ್ಟಿಗೆದ್ದ ಕುಲ್ದೀಪ್, DRS ತೆಗೆದುಕೊಂಡ ರೀತಿ ನೋಡಿದ್ರೆ ಬಿದ್ದು ಬಿದ್ದು ನಗ್ತೀರಿ..! ವಿಡಿಯೋ

Share :

Published March 29, 2024 at 2:49pm

    ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ಗೆದ್ದು ಬೀಗಿದ ರಾಜಸ್ಥಾನ್ ರಾಯಲ್ಸ್

    ಬಟ್ಲರ್​​​ ವಿಕೆಟ್ ಪಡೆಯಲು DRS ಮೊರೆ ಹೋಗಿದ್ದ ಕುಲ್ದೀಪ್

    ಕೊನೆಗೂ ಡಿಆರ್​ಎಸ್​ನಲ್ಲಿ ಗೆದ್ದ ಪಂತ್, ವಿಡಿಯೋ ನೋಡಲೇಬೇಕು

ಐಪಿಎಲ್​-2024ರ 9ನೇ ಪಂದ್ಯವು ರಾಜಸ್ಥಾನ ಜೈಪುರದಲ್ಲಿ ನಿನ್ನೆ ನಡೆಯಿತು. ರಾಜಸ್ಥಾನ್ ರಾಯಲ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಿದ್ದವು.

ಮೊದಲು ರಾಜಸ್ಥಾನ್ ರಾಯಲ್ಸ್​ ಬ್ಯಾಟಿಂಗ್ ಆರಂಭಿಸಿತ್ತು. 7.2ನೇ ಓವರ್​ನಲ್ಲಿ ಕುಲ್ದೀಪ್ ಯಾದವ್ ಅವರು ಎದುರಾಳಿ ಜೋಶ್ ಬಟ್ಲರ್​​ಗೆ ಬಾಲ್ ಮಾಡಿ, ಎಲ್​​ಬಿಡಬ್ಲ್ಯೂಗೆ ಅಪೀಲ್ ಮಾಡಿದ್ದರು. ಆದರೆ ಅಂಪೈರ್​, ಬಟ್ಲರ್ ಔಟ್ ಎಂದು ತೀರ್ಪು ಕೊಡಲು ನಿರಾಕರಿಸಿದರು.

ಇದರಿಂದ ರೊಚ್ಚಿಗೆದ್ದ ಕುಲ್ದೀಪ್ ಯಾದವ್, ಕ್ಯಾಪ್ಟನ್ ಪಂತ್ ಬಳಿ ಸಿಟ್ಟಿನಿಂದಲೇ ಬರುತ್ತಾರೆ. ಪಂತ್ ಅವರ ಎರಡೂ ಕೈಗಳನ್ನು ಹಿಡಿದು ಡಿಆರ್​ಎಸ್ ತೆಗೆದುಕೊಳ್ಳು ಸ್ಟೈಲ್​​ನಲ್ಲಿ ಮೇಲೆತ್ತಿ, ಥರ್ಡ್​ ಅಂಪೈರ್​ಗೆ ಮನವಿ ಮಾಡುವಂತೆ ಸೂಚಿಸುತ್ತಾರೆ. ಸಣ್ಣ ನಗೆ ಬೀರಿದ ರಿಷಬ್ ಪಂತ್, ಡಿಆರ್​ಎಸ್​ ತೆಗೆದುಕೊಳ್ತಾರೆ. ಕೊನೆಗೂ ಕುಲ್ದೀಪ್ ಯಾದವ್, ಅವರ ಬಲವಾದ ನಂಬಿಕೆ ಸತ್ಯವಾಗಿದ್ದು, ಬಟ್ಲರ್ ಔಟ್ ಎಂದು ತೀರ್ಪು ಬಂತು.

ಇನ್ನು ನಿನ್ನೆಯ ಪಂದ್ಯವನ್ನ ದೆಹಲಿ ಕ್ಯಾಪಿಟಲ್ಸ್​ ಕೈಚೆಲ್ಲಿದೆ. ಆರ್​ಆರ್​ 186 ರನ್​ಗಳ ಟಾರ್ಗೆಟ್ ನೀಡಿತ್ತು. ಇದನ್ನು ಬೆನ್ನಟ್ಟಿದ ಪಂತ್ ಪಡೆ ನಿಗದಿತ ಓವರ್​ನಲ್ಲಿ 173 ರನ್​ಗಳಿಸಿ ಸೋಲನ್ನು ಒಪ್ಪಿಕೊಳ್ತು.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಅಂಪೈರ್ ಮೇಲೆ ಸಿಟ್ಟಿಗೆದ್ದ ಕುಲ್ದೀಪ್, DRS ತೆಗೆದುಕೊಂಡ ರೀತಿ ನೋಡಿದ್ರೆ ಬಿದ್ದು ಬಿದ್ದು ನಗ್ತೀರಿ..! ವಿಡಿಯೋ

https://newsfirstlive.com/wp-content/uploads/2024/03/KULDEEP.jpg

Load More