ಕಪಾಳಕ್ಕೆ ಹೊಡೆದ ಕುಲ್​​ದೀಪ್ ಯಾದವ್.. ರಿಂಕು ಸಿಂಗ್ ರಿಯಾಕ್ಷನ್ ಹೇಗಿದೆ? -Video

author-image
Bheemappa
Updated On
ಕಪಾಳಕ್ಕೆ ಹೊಡೆದ ಕುಲ್​​ದೀಪ್ ಯಾದವ್.. ರಿಂಕು ಸಿಂಗ್ ರಿಯಾಕ್ಷನ್ ಹೇಗಿದೆ? -Video
Advertisment
  • ಕಪಾಳಮೋಕ್ಷ; ಸೋಶಿಯಲ್ ಮೀಡಿಯಾದಲ್ಲಿ ಪ್ರಶ್ನೆಗಳ ಸುರಿಮಳೆ
  • ಕೆಕೆಆರ್ ಪಂದ್ಯವನ್ನು ಗೆಲ್ಲಿಸಿದ್ದಕ್ಕೆ ಬ್ಯಾಟರ್​ಗೆ ಸ್ಪಿನ್ನರ್ ಹೊಡೆದ್ರಾ.?
  • ಯಂಗ್ ಬ್ಯಾಟರ್​ ರಿಂಕು ಡೆಲ್ಲಿ ವಿರುದ್ಧ ಎಷ್ಟು ರನ್​ಗಳನ್ನ ಗಳಿಸಿದ್ರು?

ತವರಿನಲ್ಲಿ ಟಾಸ್ ಗೆದ್ದರೂ ಡೆಲ್ಲಿ ಕ್ಯಾಪಿಟಲ್ಸ್​​ಗೆ​ ಪಂದ್ಯವನ್ನು ಗೆಲ್ಲಲು ಆಗಲಿಲ್ಲ. ಮೊದಲ ಬ್ಯಾಟಿಂಗ್ ಮಾಡಿದ್ದ ಕೆಕೆಆರ್ ಭರ್ಜರಿ ಬ್ಯಾಟಿಂಗ್​ನಿಂದ 205 ರನ್​ಗಳ ಬೃಹತ್​ ಮೊತ್ತದ ಟಾರ್ಗೆಟ್​ ನೀಡಿತ್ತು. ಆದ್ರೆ ಈ ರನ್​ಗಳ ಚೇಸ್ ಮಾಡುವಲ್ಲಿ ಡೆಲ್ಲಿ ಮಕಾಡೆ ಮಲಗಿತು. ಪಂದ್ಯ ಮುಗಿದ ಬಳಿಕ ಯುವ ಸ್ಫೋಟಕ ಬ್ಯಾಟರ್ ರಿಂಕು ಸಿಂಗ್​ಗೆ, ಕುಲ್​ದೀಪ್ ಯಾದವ್​ ಕಪಾಳಮೋಕ್ಷ ಮಾಡಿರುವುದು ಭಾರೀ ಚರ್ಚೆ ಆಗುತ್ತಿದೆ.

ಕೆಕೆಆರ್​ ಹಾಗೂ ಡೆಲ್ಲಿ ನಡುವಿನ ಪಂದ್ಯದ ಬಳಿಕ ಎಲ್ಲ ಪ್ಲೇಯರ್ಸ್​ ಮೈದಾನದಲ್ಲಿ ನಿಂತು ಚರ್ಚೆ ಮಾಡುತ್ತಿದ್ದರು. ಈ ವೇಳೆ ಕುಲ್​ದೀಪ್ ಯಾದವ್​ ಇದ್ದಕ್ಕಿದ್ದಾಗೆ ರಿಂಕು ಸಿಂಗ್​ ಕೆನ್ನೆಗೆ ಒಂದೇಟು ಬಾರಿಸುತ್ತಾರೆ. ಇದಾದ ಮೇಲೆ ಇನ್ನೆರಡು ಮಾತುಗಳನ್ನು ಹೇಳಿ ಮತ್ತೊಂದು ಏಟನ್ನು ರಿಂಕು ಕೆನ್ನೆಗೆ ಹೊಡೆದಿದ್ದಾರೆ. ಆಗ ರಿಂಕು ಸಿಂಗ್ ಬೇಸರದಲ್ಲಿ ಕೋಪದಿಂದಲೇ ಕುಲ್​ದೀಪ್ ಯಾದವ್ ಕಡೆಗೆ ಗುರಾಯಿಸಿಕೊಂಡು ನೋಡುತ್ತಾರೆ.

ಇದನ್ನೂ ಓದಿ:ವೈಭವ್​ ಸೂರ್ಯವಂಶಿಗೆ ಬಹುಮಾನ ಘೋಷಿಸಿದ CM.. ಯುವ ಆಟಗಾರನಿಗೆ ಭಾರೀ ಲಕ್​!

publive-image

ರಿಂಕು ಸಿಂಗ್ ಗುರಾಯಿಸಿಕೊಂಡು ನೋಡಿದ ಮೇಲೆ ವಿಡಿಯೋ ಮುಗಿದು ಹೋಗುತ್ತದೆ. ಆದರೆ ಪಂದ್ಯ ಮುಗಿದ ಮೇಲೆ ಡೆಲ್ಲಿ ಕ್ಯಾಪಿಟಲ್ಸ್​ ಸ್ಪಿನ್ನರ್ ಆಗಿರುವ ಕುಲ್​ದೀಪ್ ಯಾದವ್​, ಕೆಕೆಆರ್ ಬ್ಯಾಟರ್ ಆಗಿರುವ ರಿಂಕುಗೆ ಹೊಡೆದಿದ್ದು ಯಾಕೆ ಎಂಬುದು ಇನ್ನು ತಿಳಿದು ಬಂದಿಲ್ಲ. ಆದ್ರೆ ವಿಡಿಯೋ ಮಾತ್ರ ಎಲ್ಲ ಕಡೆಗೂ ವೈರಲ್ ಆಗುತ್ತಿದ್ದು ಕ್ರಿಕೆಟ್​ನಲ್ಲಿ ಹಿರಿಯ ಆಟಗಾರರು, ಕಿರಿಯ ಆಟಗಾರನಿಗೆ ಹೀಗೆ ಮಾಡೋದಾ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.

ಇನ್ನು ಈ ಪಂದ್ಯದದಲ್ಲಿ ಡೆಲ್ಲಿ ಪರವಾಗಿ ಬೌಲಿಂಗ್​ ಮಾಡಿದ್ದ ಕುಲ್​ದೀಪ್ ಯಾದವ್ 3 ಓವರ್​ ಮಾಡಿ ಯಾವುದೇ ವಿಕೆಟ್​​ ಅನ್ನು ಪಡೆದಿರಲಿಲ್ಲ. ಆದ್ರೆ ಐಪಿಎಲ್ ಆರಂಭದಿಂದಲೂ ಯಾವ ಪಂದ್ಯದಲ್ಲಿ ಅಬ್ಬರಿಸದ ರಿಂಕು, ಡೆಲ್ಲಿ ವಿರುದ್ಧ ಒಳ್ಳೆಯ ಬ್ಯಾಟಿಂಗ್ ಮಾಡಿದ್ದರು. ಕೇವಲ 25 ಎಸೆತಗಳನ್ನು ಎದುರಿಸಿದ್ದ ಯುವ ಬ್ಯಾಟರ್​​ 3 ಬೌಂಡರಿ, 1 ಸಿಕ್ಸರ್​ನಿಂದ 36 ರನ್​ ಗಳಿಸಿದ್ದರು. ಇದರಿಂದ ತಂಡದ ಗೆಲುವಿಗೂ ಕಾರಣರಾಗಿದ್ದರು.


">April 29, 2025

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment