/newsfirstlive-kannada/media/post_attachments/wp-content/uploads/2024/12/KULDEEP_SEN_1.jpg)
ಐಪಿಎಲ್​ನಿಂದ ಹಲವು ಆಟಗಾರರ ಜೀವನವೇ ಬದಲಾಗಿದೆ. ಪಾಂಡ್ಯ ಬ್ರದರ್ಸ್​ನಿಂದ ಹಿಡಿದು ಮುಂಬೈನ ರಸ್ತೆ ಬದಿಯಲ್ಲಿ ಪಾನಿಪೂರಿ ಮಾರಿದ್ದ ಜೈಸ್ವಾಲ್, ರಿಂಕು ಸಿಂಗ್​ವರೆಗೆ ಸಾಲು ಸಾಲು ಆಟಗಾರರ ಬದುಕು ಬದಲಾಗಿದೆ. ಒಂದೊತ್ತಿನ ಊಟಕ್ಕೂ ಪರಿತಪಿಸಿದವರು, ತಮ್ಮ ಸಾಮರ್ಥ್ಯದಿಂದ ಕೋಟ್ಯಧಿಪತಿಗಳು ಆಗಿದ್ದಾರೆ. ಇಂಥವರಲ್ಲಿ ಕುಲ್​ದೀಪ್ ಸೇನ್​ ಕೂಡ ಒಬ್ಬರು. ಹಾಗಾದ್ರೆ, ಕುಲ್​​ದೀಪ್ ಸೇನ್​​ ಸಾಧನೆಯ ಆಫ್ ದ ಫೀಲ್ಡ್ ಕಥೆ ಏನು?
ಕ್ರೀಡಾಲೋಕದಲ್ಲಿ ರಾತ್ರೋರಾತ್ರಿ ಸ್ಟಾರ್‌ಗಳಾದ ಸಾಕಷ್ಟು ಸಾಧಕರಿದ್ದಾರೆ. ಒಂದೊತ್ತಿನ ಊಟಕ್ಕೂ ಪರಿತಪಿಸುತ್ತಿದ್ದವರು ಊಹಿಸಲಾರದಷ್ಟು ಎತ್ತರಕ್ಕೇರಿ ಕ್ರಿಕೆಟ್ ಜಗತ್ತನ್ನೇ ನಿಬ್ಬೆರಗಾಗಿಸಿದವರಿದ್ದಾರೆ. ಭಾರತೀಯ ಕ್ರಿಕೆಟ್‌ನಲ್ಲಿ ಇಂತಹ ಹಲವು ಸ್ಪೂರ್ತಿದಾಯಕ ಕಥೆ ಸಿಗುತ್ತವೆ. ಆ ಪಟ್ಟಿಗೆ ಹೊಸ ಸೇರ್ಪಡೆ ಈ ಕುಲ್​ದೀಪ್ ಸೇನ್.
/newsfirstlive-kannada/media/post_attachments/wp-content/uploads/2024/12/KULDEEP_SEN_2.jpg)
ಇದನ್ನೂ ಓದಿ: IPL Mega Auction; ಅದೃಷ್ಟ ಲಕ್ಷ್ಮಿ.. ರೋಹಿತ್ ಟೀಮ್ ಸೇರಿದ ಧೋನಿಯ ನೆಚ್ಚಿನ ಬೌಲರ್!
ಕಳೆದ ಆವೃತ್ತಿಯಲ್ಲೇ ವೇಗಿ ಕುಲ್​ದೀಪ್ ಸೇನ್ ಹೆಸರು ಕ್ರೀಡಾಭಿಮಾನಿಗಳು ಕೇಳಿದ್ದಾರೆ. ಈತನ ಆಟವನ್ನು ನೋಡಿ ಕೊಂಡಾಡಿದ್ದಾರೆ. ನೋಡ ನೋಡುತ್ತಿದ್ದಂತೆ ಈ ಕುಲ್​ದೀಪ್​ ಟೀಮ್ ಇಂಡಿಯಾ ಪರವೂ ಡೆಬ್ಯು ಮಾಡಿದ್ದರು. ಆದ್ರೆ, ಈತನ ಕಡು ಕಷ್ಟ ಮಾತ್ರ ತೀರಿರಲಿಲ್ಲ. ಆದ್ರೀಗ ಮೆಗಾ ಹರಾಜಿನಲ್ಲಿ ಸೇಲಾದ ಬಳಿಕ ಕುಲ್​ದೀಪ್ ಜೀವನ ಬದಲಾಗಿದೆ.
ಕ್ಷೌರಿಕನ ಕುಲ್​ದೀಪ್ ಸೇನ್​​​ ಕ್ರಿಕೆಟರ್​ ಆಗಿದ್ದೇ ರೋಚಕ..!
ಕುಲದೀಪ್ ಸೇನ್.. ಕಡು ಬಡತನದಿಂದ ಬೆಳೆದ ಪ್ರತಿಭೆ. ಚಿಕ್ಕಂದಿನಿಂದ ಕ್ರಿಕೆಟರ್​ ಆಗೋ ಕನಸು ಕಂಡಿದ್ದ ಮಧ್ಯಪ್ರದೇಶದ ರೇವಾ ಜಿಲ್ಲೆಯ ಹರಿಹಾಪುರದ ಕುಲ್​ದೀಪ್​ ಸೇನ್​ಗೆ ಬಡತನ ದೊಡ್ಡ ತಡೆಗೋಡೆ ಆಗಿತ್ತು. ಕ್ಷೌರಿಕ ವೃತ್ತಿಯನ್ನ ಮಾಡುತ್ತಿದ್ದ ತಂದೆಯ ಆದಾಯ ಜೀವನ ನಡೆಸೋಕೆ ಆಗುತ್ತಿರಲಿಲ್ಲ. ಇಂತಹ ಕಡು ಬಡತನದ ನಡುವೆ ಕುಲ್​ದೀಪ್​ ಸೆನ್​ ಕ್ರಿಕೆಟರ್​ ಆಗಿದ್ದೇ ರೋಚಕ.
ಅಂದು ಕುಲ್​​ದೀಪ್​ಗೆ 500 ರೂ.ಗೆ ನೋ ಎಂದಿದ್ದ ಅಪ್ಪ..!
ಚಿಕ್ಕಂದಿನಿಂದ ಕ್ರಿಕೆಟ್​​ನಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದ ಕುಲ್​ದೀಪ್​​, 8ನೇ ವಯಸ್ಸಿನಲ್ಲಿ ಕ್ರಿಕೆಟ್ ಆಡಲು ಆರಂಭಿಸಿದರು. ಒಂದು ಬಾರಿ ಕ್ಷೌರಿಕ ವೃತ್ತಿ ಮಾಡ್ತಿದ್ದ ತಂದೆಯ ಕ್ರಿಕೆಟ್​ ಆಡಲು 500 ರೂಪಾಯಿ ಕೇಳಿ ಹಿಗ್ಗಾಮುಗ್ಗ ಬೈಸಿಕೊಂಡಿದ್ರು. ಅಂದು ಕ್ರಿಕೆಟ್​ನಿಂದ ಮಗನ ಜೀವನ ಹಾಳಾಗುತ್ತೆ. ಹಣವೂ ವ್ಯರ್ಥವಾಗುತ್ತೆ ಎಂದು ಅವರ ತಂದೆ ಯೋಚಿಸಿದ್ದರು. ಆದ್ರೀಗ ಅದೇ ಮಗ ಕ್ರಿಕೆಟ್​ನಿಂದ ಲಕ್ಷಾಧೀಶನಾಗಿದ್ದಾನೆ. ತಂದೆಯನ್ನ ಹೆಮ್ಮೆ ಪಡುವಂತೆ ಮಾಡಿದ್ದಾನೆ.
ಬ್ಯಾಟ್ಸ್​ಮನ್ ಆಗಲು ಬಯಸಿದ್ದವ ಆಗಿದ್ದು ಬೌಲರ್.!
ಕ್ರಿಕೆಟರ್​ ಆಗೋ ಕನಸು ಕಂಡಿದ್ದ ಸೇನ್​​​ಗೆ ಬ್ಯಾಟ್ಸ್​ಮನ್ ಆಗಲು ಬಯಸಿದ್ದರು. ಆದ್ರೆ, ಬಾಲ್ಯದ ಕೋಚ್ ಅರಿಲ್​ ಆ್ಯಂಟೋನಿ, ಬೌಲಿಂಗ್ ಮಾಡಲು ಸೂಚಿಸಿದ್ದರು. ಕೋಚ್ ಮಾತು ಕೇಳಿದ ಕುಲ್​ದೀಪ್, ಬೌಲಿಂಗ್​ನಲ್ಲಿ ಮಿಂಚಿದರು. ಬಡವ ಎಂಬ ಕಾರಣಕ್ಕೆ ಕೋಚ್​, ಕುಲ್​ದೀಪ್ ಸೇನ್​ಗೆ ಉಚಿತ ಟ್ರೈನಿಂಗ್ ನೀಡಿದ್ದರು. ಕ್ಲಬ್ ಕ್ರಿಕೆಟ್​ ಟು ರಾಜ್ಯ ತಂಡವನ್ನು ಪ್ರತಿನಿಧಿಸಿದ್ದ ಕುಲ್​​ದೀಪ್​ಗೆ ಅವತ್ತು ಉತ್ತಮ ಶೂ ಇರಲಿಲ್ಲ. ಆಗ ಕುಲ್​ದೀಪ್​ ಕಷ್ಟ ನೋಡಿದ್ದ​ ಟೀಮ್​ ಇಂಡಿಯಾ ಮಾಜಿ ವೇಗಿ ಈಶ್ವರ್​ ಪಾಂಡೆ ತಮ್ಮ ಶೂ ನೀಡಿದ್ದರು. ಇಲ್ಲಿಂದ ಆರಂಭವಾದ ಜರ್ನಿ ಬಳಿಕ ಐಪಿಎಲ್​ಗೆ ಕಾಲಿಡುವಂತೆ ಮಾಡಿತ್ತು.
3 ವರ್ಷ 20 ಲಕ್ಷ.. ಈಗ 80 ಲಕ್ಷಕ್ಕೆ ಪಂಜಾಬ್ ಪಾಲು..!
2018-19ರಲ್ಲಿ ರಣಜಿ ಟ್ರೋಫಿಗೆ ಪಾದಾರ್ಪಣೆ ಮಾಡಿದ್ದ ಕುಲ್​ದೀಪ್ ಸೇನ್​​ ಐಪಿಎಲ್ ಬಾಗಿಲು ತೆರೆಯಲು ಕಾದಿದ್ದು 3 ವರ್ಷ. 2022ರ ಐಪಿಎಲ್ ಹರಾಜಿನಲ್ಲಿ ರಾಜಸ್ಥಾನ್ ರಾಯಲ್ಸ್​ಗೆ 20 ಲಕ್ಷಕ್ಕೆ ಸೇಲಾಗಿದ್ದ ಕುಲ್​ದೀಪ್​​​​​​​​, ಅದೇ ವರ್ಷ ಸಿಕ್ಕ ಅವಕಾಶದಲ್ಲಿ ಮ್ಯಾಚ್ ವಿನ್ನರ್ ಅನ್ನೋದನ್ನ ನಿರೂಪಿಸಿವರು. ಅಷ್ಟೇ ಅಲ್ಲ, ಈ ಪರ್ಫಾಮೆನ್ಸ್​ ಆಧಾರದಲ್ಲಿ ಟೀಮ್ ಇಂಡಿಯಾಗೂ ಎಂಟ್ರಿ ಕೊಟ್ಟಿದ್ದರು. ಬಾಂಗ್ಲಾ ಎದುರು ಏಕದಿನಕ್ಕೆ ಡೆಬ್ಯೂ ಮಾಡಿದ್ದರು. ಆದರೆ, ಜೀವನ ಮಾತ್ರ ಬದಲಾಗಲಿಲ್ಲ. ಇದೀಗ ಐಪಿಎಲ್​ನಲ್ಲಿ 80 ಲಕ್ಷಕ್ಕೆ ಪಂಜಾಬ್ ಕಿಂಗ್ಸ್​ ಪಾಲಾದ ಬಳಿಕ ಕಷ್ಟಗಳು ದೂರಾಗಿ ಜೀವನ ಬದಲಾಗುವ ಭರವಸೆ ಹುಟ್ಟಿದೆ.
/newsfirstlive-kannada/media/post_attachments/wp-content/uploads/2024/12/KULDEEP_SEN.jpg)
ಮಗ ಮೆಗಾ ಹರಾಜಿನಲ್ಲಿ 80 ಲಕ್ಷಕ್ಕೆ ಸೇಲಾದ್ರೂ, ಅಪ್ಪ ಮಾತ್ರ ಜೀವನಕ್ಕೆ ದಾರಿ ದೀಪವಾದ ಕ್ಷೌರಿಕನ ಕೆಲಸ ಬಿಟ್ಟಿಲ್ಲ. ಇಂದಿಗೂ ತಂದೆ ಅದೇ ವೃತ್ತಿಯನ್ನ ಮುಂದುವರೆಸಿದ್ದಾರೆ. ಮುಂದೆ ಅದನ್ನ ಬಿಡಲ್ಲ ಅನ್ನೋ ಮಾತನ್ನೂ ಆಡುತ್ತಿದ್ದಾರೆ.
ಕಡು ಬಡತನದಲ್ಲಿ ಬೆಳೆದು ರೋಚಕ ರೀತಿಯಲ್ಲಿ ಕ್ರಿಕೆಟರ್​ ಆಗಿ ರೂಪುಗೊಂಡಿರುವ ಕುಲ್​ದೀಪ್​ ಸೇನ್​, ಜೀವನದ ಸಂಕಷ್ಟಗಳೆಲ್ಲಾ ದೂರಾಗಲಿ. ಈ ಬಾರಿಯ ಐಪಿಎಲ್​ನಲ್ಲಿ ಮಿಂಚು ಹರಿಸಿ ಮತ್ತಷ್ಟು ಎತ್ತರಕ್ಕೆ ಬೆಳಯಲಿ. ಯುವ ಪೀಳಿಗೆಗೆ ಮಾದರಿ ಆಗುವಂತಾಗಲಿ ಅನ್ನೋದೇ ಎಲ್ಲರ ಆಶಯ
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us