/newsfirstlive-kannada/media/post_attachments/wp-content/uploads/2025/06/KULDEEP-YADAV.jpg)
ಟೀಂ ಇಂಡಿಯಾ ಜೂನ್ 20 ರಿಂದ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಆಡಲಿದೆ. ಉಭಯ ತಂಡಗಳ ನಡುವೆ ಐದು ಟೆಸ್ಟ್ ಪಂದ್ಯಗಳು ನಡೆಯಲಿವೆ. ಈ ಹಿನ್ನೆಲೆಯಲ್ಲಿ ಭಾರತ ತಂಡ ಈಗಗಾಲೇ ಇಂಗ್ಲೆಂಡ್ಗೆ ಪ್ರಯಾಣ ಬೆಳೆಸಿದೆ.
ಟೀಂ ಇಂಡಿಯಾದ ಕೆಲವು ಆಟಗಾರರು ನಿನ್ನೆ ಇಂಗ್ಲೆಂಡ್ಗೆ ಪ್ರಯಾಣ ಬೆಳೆಸಿದ್ದಾರೆ. ಅವರಲ್ಲಿ ಕುಲ್ದೀಪ್ ಯಾದವ್ ಕೂಡ ಒಬ್ಬರು. ವಿಶೇಷ ಅಂದರೆ ಕುಲ್ದೀಪ್ ಯಾದವ್ ಜೂನ್ 4 ರಂದು ನಿಶ್ಚಿತಾರ್ಥ ನೆರವೇರಿಸಿಕೊಂಡಿದ್ದಾರೆ. ನಿಶ್ಚಿತಾರ್ಥ ನೆರವೇರಿಸಿಕೊಂಡ ಕೇವಲ 2 ದಿನದಲ್ಲಿ ಟೀಂ ಇಂಡಿಯಾ ಡ್ಯೂಟಿಗೆ ಮರಳಿದ್ದಾರೆ.
ಇದನ್ನೂ ಓದಿ: ಹೃದಯಗೆದ್ದ ಕನ್ನಡಿಗರು.. ಐಪಿಎಲ್ನಲ್ಲಿ ಕರ್ನಾಟಕ ಪ್ಲೇಯರ್ಗಳದ್ದೇ ಪರಾಕ್ರಮ..!
ಅಂದ್ಹಾಗೆ ಕುಲ್ದೀಪ್ ತಮ್ಮ ಬಾಲ್ಯದ ಗೆಳತಿ ವಂಶಿಕಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ವಿಶೇಷ ಅಂದ್ರೆ ರಿಂಕು ಸಿಂಗ್ ತಮ್ಮ ಭಾವಿ ಸಂಗಾತಿ ಪ್ರಿಯಾ ಸರೋಜ್ ಜೊತೆ ನಿಶ್ಚಿತಾರ್ಥ ಸಮಾರಂಭದಲ್ಲಿ ಭಾಗಿಯಾಗಿದ್ದರು.
ಕುಲ್ದೀಪ್ ಜೋಡಿ ಯಾರು..?
ವಂಶಿಕಾ ಲಕ್ನೋದ ಶ್ಯಾಮ್ ನಗರದ ನಿವಾಸಿ. ವಂಶಿಕಾ ಮತ್ತು ಕುಲದೀಪ್ ಬಾಲ್ಯದ ಸ್ನೇಹಿತರು. ವಂಶಿಕಾ ಎಲ್ಐಸಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ನಿಶ್ಚಿತಾರ್ಥಕ್ಕೆ ಕುಲ್ದೀಪ್ ಬ್ಯಾಂಡ್‌ಗಲಾ ಸೂಟ್ ಧರಿಸಿದ್ದರೆ, ಅವರ ಸಂಗಾತಿ ಕಿತ್ತಳೆ ಬಣ್ಣದ ಲೆಹೆಂಗಾ ಧರಿಸಿದ್ದರು. ಈ ವರ್ಷದ ಅಂತ್ಯದಲ್ಲಿ ಇಬ್ಬರು ಮದುವೆ ಆಗಲಿದ್ದಾರೆ.
ಇನ್ನು ಭಾರತ ತಂಡ ಇಂಗ್ಲೆಂಡ್ ಪ್ರವಾಸಕ್ಕೆ ಕೇವಲ ಒಬ್ಬನೇ ಒಬ್ಬ ಸ್ಪಿನ್ನರ್‌ನೊಂದಿಗೆ ಹೋಗುತ್ತಿದೆ. ಅದು ಕುಲ್ದೀಪ್ ಯಾದವ್. ಅದಾಗ್ಯೂ ರವೀಂದ್ರ ಜಡೇಜಾ ಮತ್ತು ವಾಷಿಂಗ್ಟನ್ ಸುಂದರ್ ಅವರಂತಹ ಆಲ್‌ರೌಂಡರ್‌ಗಳು ತಂಡದಲ್ಲಿದ್ದಾರೆ.
ಇದನ್ನೂ ಓದಿ: ಗೋಯೆಂಕ ಮತ್ತೆ ಗರಂ.. ಪಂತ್ ಒಬ್ಬರೇ ಅಲ್ಲ LSGಯಲ್ಲಿ ಮೂವರ ತಲೆದಂಡ ಪಕ್ಕಾ..!
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ