/newsfirstlive-kannada/media/post_attachments/wp-content/uploads/2025/03/KL_RAHUL-3.jpg)
ಚಾಂಪಿಯನ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡುತ್ತಿರುವ ನ್ಯೂಜಿಲೆಂಡ್ ತಂಡ 81 ರನ್ಗೆ ಮೂರು ಪ್ರಮುಖ ವಿಕೆಟ್ ಕಳೆದುಕೊಂಡಿದೆ. ಟೀಮ್ ಇಂಡಿಯಾ ಪರ ಸ್ಪಿನ್ ಬೌಲರ್ಸ್ ಪರಾಕ್ರಮ ಮೆರೆದಿದ್ದಾರೆ.
ದುಬೈ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಫೈನಲ್ ಪಂದ್ಯ ನಡೆಯುತ್ತಿದೆ. ಇದರಲ್ಲಿ ಟಾಸ್ ಗೆದ್ದ ಕಿವೀಸ್ ನಾಯಕ ಮಿಚೆಲ್ ಸ್ಯಾಟ್ನರ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆ ವಿಲ್ ಯಂಗ್ ಹಾಗೂ ಕನ್ನಡಿಗ ರಚಿನ್ ರವೀಂದ್ರ ಬ್ಯಾಟಿಂಗ್ ಆಗಮಿಸಿದ್ದರು. ಬೌಲಿಂಗ್ ಮಾಡುತ್ತಿರುವ ಭಾರತದ ಆಟಗಾರರು ಆರಂಭದಲ್ಲೇ ಉತ್ತಮ ಲಯ ಕಂಡುಕೊಂಡಿದ್ದು ಓಪನರ್ಸ್ಗಳಿಗೆ ಪೆವಿಲಿಯನ್ ದಾರಿ ತೋರಿಸಿದ್ದಾರೆ.
ಇದನ್ನೂ ಓದಿ: ಭರ್ಜರಿ ಬ್ಯಾಚುಲರ್ಸ್ ವೇದಿಕೆ ಮೇಲೆ ನಟಿ ಸುಕೃತಾಳ ಆಸೆ ಈಡೇರಿಸಿದ ಕ್ರೇಜಿ ಸ್ಟಾರ್ ರವಿಚಂದ್ರನ್; ಏನದು?
ಸ್ಪಿನ್ನಲ್ಲಿ ಮ್ಯಾಜಿಕ್ ಮಾಡಿದ ವರುಣ್ ಚಕ್ರವರ್ತಿ, ವಿಲ್ ಯಂಗ್ ಅವರನ್ನು ಎಲ್ಬಿಡಬ್ಲು ಬಲಿಗೆ ಕೆಡವಿದರು. ಈ ಮೂಲಕ ವಿಲ್ ಯಂಗ್ ಕೇವಲ 15 ರನ್ ಗಳಿಸಿ ಪೆವಿಲಿಯನ್ ಅತ್ತ ನಡೆದರು. ಇದಾದ ಮೇಲೆ ರಚಿನ್ ರವೀಂದ್ರ 37 ರನ್ ಗಳಿಸಿ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದರು. ಆದರೆ ಈ ವೇಳೆ ಬೌಲಿಂಗ್ ಮಾಡಲು ಬಂದ ಕುಲ್ದೀಪ್ ಯಾದವ್ ಕಮಾಲ್ ಮಾಡಿದರು. ರಚಿನ್ ರವೀಂದ್ರ ಅವರನ್ನು ಕ್ಲೀನ್ ಬೋಲ್ಡ್ ಮಾಡಿ, ಸಂಭ್ರಮಿಸಿದರು.
ಇದಾದ ಮೇಲೆ ಕ್ರೀಸ್ಗೆ ಬ್ಯಾಟಿಂಗ್ ಮಾಡಲು ಬಂದ ಕೀವಿಸ್ನ ಹಿರಿಯ ಆಟಗಾರ ಕೇನ್ ವಿಲಿಯಮ್ಸನ್ ಬಂದ ದಾರಿಗೆ ಸುಂಕ ಇಲ್ಲ ಎಂಬಂತೆ ವಾಪಸ್ ಹೋಗಿದ್ದಾರೆ. ಕುಲ್ದೀಪ್ ಯಾದವ್ ಅವರು ಮಾಡಿದ ಸ್ಪಿನ್ ಬೌಲ್ ಅನ್ನು ಸಿಂಪಲ್ ಆಗಿ ಹೊಡೆದರು. ಆದರೆ ಆ ಬಾಲ್ ನೇರ ಕುಲ್ದೀಪ್ ಯಾದವ್ ಕೈ ಸೇರಿತು. ಸದ್ಯ ಕಿವೀಸ್ 3 ಮುಖ್ಯವಾದ ವಿಕೆಟ್ಗಳನ್ನು ಕಳೆದುಕೊಂಡಿದೆ. 15 ಓವರ್ಗೆ 83 ರನ್ಗಳನ್ನು ಗಳಿಸಿ ಬ್ಯಾಟಿಂಗ್ ಮಾಡುತ್ತಿದೆ.
ಟೀಮ್ ಇಂಡಿಯಾ ಪ್ಲೇಯಿಂಗ್-11
ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ಶ್ರೇಯಸ್ ಅಯ್ಯರ್, ವಿರಾಟ್ ಕೊಹ್ಲಿ, ಕೆ ಎಲ್ ರಾಹುಲ್, ಅಕ್ಷರ್ ಪಟೇಲ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ಶಮಿ, ವರುಣ್ ಚಕ್ರವರ್ತಿ.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ