ನಂಗೆ ಬಾಲಿವುಡ್ ಸಂದರಿ ಬೇಡ.. ನನ್ ಹುಡ್ಗಿ ಹೇಗಿರಬೇಕು ಅಂದರೆ.. ಕುಲ್ದೀಪ್ ಆಸೆ ಏನು?

author-image
Ganesh
Updated On
2ನೇ ಟೆಸ್ಟ್​​ ಪಂದ್ಯ: ಟೀಮ್​ ಇಂಡಿಯಾದಲ್ಲಿ ಸ್ಥಾನಕ್ಕಾಗಿ ಇಬ್ಬರು ಸ್ಟಾರ್ಸ್​ ಮಧ್ಯೆ ಭಾರೀ ಪೈಪೋಟಿ
Advertisment
  • ಟಿ-20 ವಿಶ್ವಕಪ್ ಗೆಲ್ಲಲು ಕುಲ್ದೀಪ್ ಕೂಡ ಕಾರಣ
  • ಐದು ಪಂದ್ಯದಲ್ಲಿ 10 ವಿಕೆಟ್ ಪಡೆದಿರುವ ಸ್ಪಿನ್ನರ್
  • ಕುಲ್ದೀಪ್ ಯಾದವ್​​​​ಗೆ ಹುಟ್ಟೂರಲ್ಲಿ ಅದ್ದೂರಿ ಸ್ವಾಗತ

ಕುಲ್ದೀಪ್ ಯಾದವ್, ಟಿ20 ವಿಶ್ವಕಪ್ ಗೆದ್ದ ಟೀಂ ಇಂಡಿಯಾದ ಭಾಗವಾಗಿದ್ದರು. ಇದೀಗ ಅವರು ಕ್ರಿಕೆಟ್ ಅಭಿಮಾನಿಗಳಿಗೆ ಭರ್ಜರಿ ಸುದ್ದಿಯೊಂದನ್ನು ನೀಡಿದ್ದಾರೆ.

ವಿಶ್ವಕಪ್ ಗೆದ್ದ ಸಂಭ್ರಮದ ಬಳಿಕ ಮೊದಲ ಬಾರಿಗೆ ಕಾನ್ಪುರಕ್ಕೆ ತೆರಳಿದ್ದ ಕುಲ್ದೀಪ್ ಯಾದವ್​​ಗೆ ಅದ್ದೂರಿ ಸ್ವಾಗತ ಸಿಕ್ಕಿತು. ಅಭಿಮಾನಿಗಳು ಆತ್ಮೀಯವಾಗಿ ಸ್ವಾಗತಿಸಿದರು. ಇದೇ ವೇಳೆ ಅವರು ತಮ್ಮ ಮದುವೆ ವಿಚಾರದ ಬಗ್ಗೆ ಮಾತನಾಡಿದ್ದಾರೆ.

ಇದನ್ನೂ ಓದಿ:BCCIನಿಂದ 125 ಕೋಟಿ ರೂಪಾಯಿ ಬಹುಮಾನ.. ಕೊಹ್ಲಿ, ರೋಹಿತ್, ದ್ರಾವಿಡ್​ ಎಷ್ಟು ಕೋಟಿ ಪಡೆದರು..

ನಾನು ಯಾವುದೇ ನಟಿಯನ್ನು ಮದುವೆಯಾಗುವುದಿಲ್ಲ. ಕ್ರಿಕೆಟಿಗರು ಹೆಚ್ಚಾಗಿ ಬಾಲಿವುಡ್ ನಟಿಯರನ್ನು ಮದುವೆಯಾಗುತ್ತಾರೆ. ಆದರೆ ನಾನು ನಟಿಯರನ್ನು ಮದುವೆ ಆಗಲು ಬಯಸಲ್ಲ. ಯಾರನ್ನು ಮದುವೆ ಆಗ್ತೀನಿ ಅನ್ನೋದನ್ನು ನಿಮಗೆ ಶೀಘ್ರದಲ್ಲೇ ಹೇಳ್ತೀನಿ. ನಾನು ಮದುವೆಯಾಗುವ ಹುಡುಗಿ ನನ್ನ ಮತ್ತು ಕುಟುಂಬವನ್ನು ನೋಡಿಕೊಳ್ಳುವುದು ಮುಖ್ಯ ಎಂದಿದ್ದಾರೆ.

ಟೀಂ ಇಂಡಿಯಾ ವಿಶ್ವಕಪ್ ಗೆಲ್ಲಲು ಕುಲ್ದೀಪ್ ಯಾದವ್ ಅವರ ಪಾತ್ರವೂ ಪ್ರಮುಖವಾಗಿದೆ. ಐದು ಪಂದ್ಯಗಳ ಪ್ಲೇಯಿಂಗ್ -11ನಲ್ಲಿ ಸ್ಥಾನ ಪಡೆದುಕೊಂಡಿದ್ದರು. ಪಿಚ್‌ಗಳ ವರ್ತನೆ ಆಧಾರದ ಮೇಲೆ ಅವರನ್ನು ಆಡಿಸಲಾಗಿತ್ತು. ಅಮೆರಿಕದಲ್ಲಿ ನಡೆದ ಗುಂಪು ಹಂತದ ಪಂದ್ಯಗಳಲ್ಲಿ ಅವರನ್ನು ಹೊರಗಿಡಲಾಗಿತ್ತು. ಸೂಪರ್-8 ಪಂದ್ಯಗಳು, ಸೆಮಿಫೈನಲ್ ಮತ್ತು ಫೈನಲ್‌ನಲ್ಲಿ ಸಿರಾಜ್ ಬದಲಿಗೆ ಕುಲದೀಪ್ ಯಾದವ್ ಅವರನ್ನು ಆಡಿಸಲಾಗಿತ್ತು. ವಿಶ್ವಕಪ್​​ನಲ್ಲಿ ಕುಲ್ದೀಪ್ ಯಾದವ್ ಐದು ಪಂದ್ಯಗಳಲ್ಲಿ 10 ವಿಕೆಟ್ ಪಡೆದುಕೊಂಡರು.

ಇದನ್ನೂ ಓದಿ:ಕಾಲೇಜಿನಲ್ಲಿ ಪ್ರೀತಿ, ಪ್ರೇಮ ವಿವಾಹ.. ಪತಿ ಗೆಸ್ಟ್​ಹೌಸ್​ನಲ್ಲಿ, ಪತ್ನಿ ಅಪ್ಪನ ಮನೆಯಲ್ಲಿ ದಿಢೀರ್ ಸಾವು.. ಆಗಿದ್ದೇನು..

ಕುಲ್ದೀಪ್ ಯಾದವ್ ಇಲ್ಲಿಯವರೆಗೆ ಭಾರತ ಪರ 12 ಟೆಸ್ಟ್, 103 ODI ಮತ್ತು 40, T20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್‌ನಲ್ಲಿ 53, ಏಕದಿನದಲ್ಲಿ 168 ಮತ್ತು ಟಿ20 ಕ್ರಿಕೆಟ್‌ನಲ್ಲಿ 69 ವಿಕೆಟ್‌ಗಳನ್ನು ಪಡೆದಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment