/newsfirstlive-kannada/media/post_attachments/wp-content/uploads/2025/04/KULDEEP.jpg)
ಐಪಿಎಲ್ನ 48ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್, ಡೆಲ್ಲಿ ಕ್ಯಾಪಿಟಲ್ಸ್ ಅನ್ನು 14 ರನ್‌ಗಳಿಂದ ಸೋಲಿಸಿದೆ. ಬೆನ್ನಲ್ಲೇ ಕುಲದೀಪ್ ಯಾದವ್ ರಿಂಕು ಸಿಂಗ್ಗೆ ಕಪಾಳಮೋಕ್ಷ ಮಾಡುತ್ತಿರುವುದು ವಿಡಿಯೋ ಒಂದು ವೈರಲ್ ಆಗಿದೆ.
ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಪಂದ್ಯದ ನಂತರ ಆಟಗಾರರು ಪರಸ್ಪರ ಮಾತನಾಡುತ್ತಿರುವ ದೃಶ್ಯ ವಿಡಿಯೋದಲ್ಲಿದೆ. ಕುಲದೀಪ್ ಯಾದವ್ ಡೆಲ್ಲಿ ಕ್ಯಾಪಿಟಲ್ಸ್ ಆಟಗಾರ. ರಿಂಕು ಸಿಂಗ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಭಾಗವಾಗಿದ್ದಾರೆ.
ವಿಡಿಯೋದಲ್ಲಿ ಏನಿದೆ..?
ಪಂದ್ಯ ಮುಗಿದ ನಂತರ ಎರಡೂ ತಂಡದ ಆಟಗಾರರು ಮೈದಾನದಲ್ಲಿ ನಿಂತು ಮಾತಾಡ್ತಿದ್ದಾರೆ. ಸಂಭಾಷಣೆಯಲ್ಲಿ ರಿಂಕು ಸಿಂಗ್ ನಗುತ್ತ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಆಗ ಕುಲದೀಪ್ ಯಾದವ್, ರಿಂಕು ಸಿಂಗ್ಗೆ ಹೊಡೆದು ಏನೋ ಹೇಳುತ್ತಾರೆ. ಆಗ ರಿಂಕು ಸಿಂಗ್, ಬೇಸರದಲ್ಲಿ ದಿಟ್ಟಿಸಿ ನೋಡಿದ್ದಾರೆ. ಮತ್ತೆ ಕುಲ್ದೀಪ್ ಕಪಾಳಕ್ಕೆ ಬಾರಿಸುತ್ತಾರೆ. ಆಗ ರಿಂಕು ಸಿಂಗ್ ಮುಖ ಕೆಂಪಾಗಿದೆ. ಅಲ್ಲದೇ ಗುರಾಯಿಸುತ್ತಿರುವ ದೃಶ್ಯ ವೈರಲ್ ಆಗಿದೆ. ಇಬ್ಬರ ಮಧ್ಯೆ ನಿಜಕ್ಕೂ ಆಗಿರೋದು ಏನು ಅನ್ನೋದು ಇನ್ನು ಬಹಿರಂಗವಾಗಿಲ್ಲ. ಆದರೆ ತುಂಬಾ ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ: ಆಪ್ ಶಾಸಕನ ಆಪ್ತನ ಮಗಳು ಕೆನಡಾದಲ್ಲಿ ನಿಗೂಢ ದುರಂತ ಅಂತ್ಯ.. ಓದಲು ಹೋಗಿದ್ದ ಯುವತಿಗೆ ಏನಾಯ್ತು..?
Yo kuldeep watch it pic.twitter.com/z2gp4PK3OY
— irate lobster🦞 (@rajadityax) April 29, 2025
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್