/newsfirstlive-kannada/media/post_attachments/wp-content/uploads/2024/06/darshan59.jpg)
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್ ಅಂಡ್ ಗ್ಯಾಂಗ್ ಜೈಲಿನಲ್ಲಿದ್ದಾರೆ. ಚಿತ್ರದುರ್ಗದ ಯುವಕನನ್ನು ಕ್ರೂರವಾಗಿ ಕೊಲೆ ಮಾಡಿದ್ದು ಪೊಲೀಸ್ ತನಿಖೆ ವೇಳೆ ತಿಳಿದು ಬಂದಿದೆ. ಹೀಗಾಗಿ ನಟ ದರ್ಶನ್ ಸೇರಿ ಒಟ್ಟು 17 ಆರೋಪಿಗಳು ಸೆರೆವಾಸ ಅನುಭವಿಸುತ್ತಿದ್ದಾರೆ. 17 ಆರೋಪಿಗಳಲ್ಲಿ ನಾಲ್ವರನ್ನು ತುಮಕೂರು ಜೈಲಿಗೆ ಶಿಫ್ಟ್ ಮಾಡಲಾಗಿದೆ.
ಇದನ್ನೂ ಓದಿ:ದರ್ಶನ್ ಗ್ಯಾಂಗ್‌ಗೆ ₹40 ಲಕ್ಷ ಕೊಟ್ಟ ರಹಸ್ಯ.. ಪೊಲೀಸರಿಗೆ ಮಹತ್ವದ ಸುಳಿವು; ಕೊಲೆ ಕೇಸ್‌ಗೆ ಹೊಸ ಟ್ವಿಸ್ಟ್!
ಇನ್ನು, ನೆಚ್ಚಿನ ನಟ ದರ್ಶನ್ ಅರೆಸ್ಟ್ ಆಗುತ್ತಿದ್ದಂತೆ ಅಭಿಮಾನಿಗಳು ಫುಲ್ ಶಾಕ್ ಆಗಿದ್ದರು. ಜೊತೆಗೆ ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್ ಅಂಡ್ ಗ್ಯಾಂಗ್ ಭಾಗಿಯಾಗಿದೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಕೆಲ ಅಭಿಮಾನಿಗಳು ಕಣ್ಣೀರಿಟ್ಟಿದ್ದರು. ಇನ್ನೂ ಕೆಲವರು ದರ್ಶನ್ ಮಾಡಿದ್ದು ತುಂಬಾ ದೊಡ್ಡ ತಪ್ಪು ಅಂತಾ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆಸುತ್ತಿದ್ದರು. ಸದ್ಯ ವಿಚಾರಣಾಧೀನ ಕೈದಿಯಾಗಿ ಸೆರೆಮನೆ ವಾಸ ಅನುಭವಿಸುತ್ತಿರೋ ನಟ ದರ್ಶನ್ಗೆ ಖೈದಿ 6106 ನಂಬರ್ ನೀಡಲಾಗಿದ್ದು, ಇದೇ ನಂಬರನ್ನು ಅಭಿಮಾನಿಯೊಬ್ಬ ವಾಹನ ನಂಬರ್ ಪ್ಲೇಟ್ಗಳಾಗಿ ಬಳಸುತ್ತಿದ್ದಾರೆ. ಇದರ ಮಧ್ಯೆ ನಟ ದರ್ಶನ್ ಜೈಲಿಗೆ ಸೇರುತ್ತಿದ್ದಂತೆ ‘ಡಿ’ಗ್ಯಾಂಗ್, ಪಟ್ಟಣಗೆರೆ ಶೆಡ್ ಮತ್ತು ಕೈದಿ ನಂ. 6106 ಟೈಟಲ್ಗೆ ಬೇಡಿಕೆ ಹೆಚ್ಚಾಗುತ್ತಿದೆ.
ಹೌದು, ನಟ ದರ್ಶನ್ ಪ್ರಕರಣ ಹತ್ತಿರವಾದ ಟೈಟಲ್ಗಳಿಗೆ ಹೆಚ್ಚಿನ ರೀತಿಯಲ್ಲಿ ಬೇಡಿಕೆ ಬರುತ್ತಿದೆಯಂತೆ. ಈ ಬಗ್ಗೆ ಬೆಂಗಳೂರಿನಲ್ಲಿ ನಿರ್ಮಾಪಕ ಭದ್ರಾವತಿ ಕುಮಾರ್ ಮಾಹಿತಿ ನೀಡಿದ್ದಾರೆ. ದರ್ಶನ್ ಜೈಲು ಪಾಲಾದ ಬಳಿಕ ಪ್ರಕರಣ ಹತ್ತಿರವಾದ ಟೈಟಲ್ಸ್ ಬಗ್ಗೆ ಹೆಚ್ಚಿದ ಕ್ರೇಜ್ ಹುಟ್ಟುಕೊಂಡಿದೆ. ಕೇಸ್ ಕೋರ್ಟ್ನಲ್ಲಿ ಇರುವುದರಿಂದ ಯಾರಿಗೂ ಟೈಟಲ್ ಸಿಕ್ಕಿಲ್ಲ. ‘ಡಿ’ ಬಾಸ್ ಟೈಟಲ್ ಈಗಾಗಲೇ ರಿಜಿಸ್ಟರ್ ಆಗಿರೋ ಬಗ್ಗೆ ಮಾಹಿತಿ ಇದೆ. 4-5 ವರ್ಷಗಳಿಂದ ‘ಬಾಸ್’ ಎಂಬ ಟೈಟಲ್ ಅನ್ನು ರಿಜಿಸ್ಟರ್ ರಿನಿವಲ್ ಮಾಡಲಾಗಿದೆ. ಬಹುಶಃ ದರ್ಶನ್ ಅವರಿಗಾಗಿ ಸಿನಿಮಾ ರಿಜಿಸ್ಟರ್ ಮಾಡಿರುವ ಸಾಧ್ಯತೆ ಇದೆ ಎಂದು ನ್ಯೂಸ್ಫಸ್ಟ್ ಮಾಹಿತಿ ನೀಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ