ಬಿಜೆಪಿ ಪಾದಯಾತ್ರೆಗೆ ಬಿಗ್ ಶಾಕ್; ಜೆಡಿಎಸ್ ಬೆಂಬಲ ಹಿಂಪಡೆದಿದ್ದು ಯಾಕೆ?

author-image
Ganesh
Updated On
ಬಿಜೆಪಿ ಪಾದಯಾತ್ರೆಗೆ ಬಿಗ್ ಶಾಕ್; ಜೆಡಿಎಸ್ ಬೆಂಬಲ ಹಿಂಪಡೆದಿದ್ದು ಯಾಕೆ?
Advertisment
  • ‘ನಮ್ಮ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ, ನೈತಿಕ ಬೆಂಬಲವೂ ಕೊಡಲ್ಲ’
  • ‘ನನ್ನ ಮನಸ್ಸಿಗೆ ನೋವಾಗಿದೆ, ಯಾಕೆ ಬೆಂಬಲ ಕೊಡಬೇಕು?’
  • ಕಾನೂನು ಹೋರಾಟ ಮುಖ್ಯ, ನಮಗೆ ರಾಜಕೀಯವೇ ಪ್ರಾಮುಖ್ಯವಲ್ಲ

ಮೂಡಾ, ವಾಲ್ಮೀಕಿ ನಿಗಮದ ಹಗರಣವಿಟ್ಟುಕೊಂಡು ಬಿಜೆಪಿ ಹಾಗೂ ಜೆಡಿಎಸ್​ ನಾಯಕರು ಇದೇ ಶನಿವಾರದಿಂದ ಪಾದಯಾತ್ರೆಯ ರಣಕಹಳೆ ಮೊಳಗಿಸಲು ಪ್ಲಾನ್ ಮಾಡಿದ್ದರು. ಇದೀಗ ಬಿಜೆಪಿಯ ಪಾದಯಾತ್ರೆಗೆ ಕೇಂದ್ರ ಸಚಿವ ಕುಮಾರಸ್ವಾಮಿ ಬಿಗ್ ಶಾಕ್ ನೀಡಿದ್ದು, ನಮ್ಮನ್ನ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ, ನಾವು ಬರಲ್ಲ ಎಂದುಬಿಟ್ಟಿದ್ದಾರೆ.

ಕುಮಾರಸ್ವಾಮಿ ಹೇಳಿದ್ದೇನು..?
ಆರಂಭದಿಂದಲೂ ಪಾದಯಾತ್ರೆ ಸಂಬಂಧ ಮೈತ್ರಿ ನಾಯಕರಲ್ಲಿ ಗೊಂದಲ ಇತ್ತು. ಇದೇ ವಿಚಾರವಾಗಿ ದೆಹಲಿಯಲ್ಲಿ ಮಾತನಾಡಿರುವ ಅವರು.. ನಾವು ಪಾದಯಾತ್ರೆಯಿಂದ ಹಿಂದೆ ಸರಿದಿದ್ದೇವೆ. ಜನರ ಭಾವನೆಗೆ, ನೋವಿಗೆ ನಾವು ಸ್ಪಂದಿಸಬೇಕಾಗಿದೆ. ನೂರಾರು ಹಳ್ಳಿಗಳು ಪ್ರವಾಹದಿಂದ ತತ್ತರಿಸಿ ಹೋಗಿವೆ. ನಮ್ಮನ್ನ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಇದ್ದರೆ ನೈತಿಕ ಬೆಂಬಲವೂ ಕೊಡಲ್ಲ. ರಾಜಕಾರಣ ಬೇರೆ, ಬೆಂಗಳೂರಿಂದ ಮೈಸೂರಿನ ಭಾಗದಲ್ಲಿ ನಮ್ಮ ಪ್ರಭಾವ‌ ಜಾಸ್ತಿ ಇದೆ. ನಮ್ಮನ್ನ ಪರಿಗಣಿಸದೇ ಸಭೆ ಮಾಡಿರೋದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ:‘ಅಮ್ಮ, ಅಪ್ಪ ಎಲ್ಲಿ..’ ತಂಗಿಯ ಶವದ ಮುಂದೆ ಅಕ್ಕ ರೋದನೆ.. ಭೂಕುಸಿತಕ್ಕೆ ಸ್ಮಶಾನವಾದ ಮದುವೆ ಸಂಭ್ರಮ..

ನಾಟಿ ಶುರುವಾಗಿದೆ
ಜೆ‌.ಟಿ.ದೇವೇಗೌಡರ ನೇತೃತ್ವದಲ್ಲಿ ಕೋರ್ ಕಮಿಟಿ ಸದಸ್ಯರು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಪಾದಯಾತ್ರೆಯಲ್ಲಿ ಭಾಗಿ ಆಗಬಾರದು ಎಂದು ನಿರ್ಧಾರ ತೆಗೆದುಕೊಂಡಿದ್ದಾರೆ. ಕೇರಳದಲ್ಲಿ ನೂರಾರು ಜನ ಸಾವನ್ನಪ್ಪಿದ್ದಾರೆ. ಕರ್ನಾಟಕದಿಂದ ಹೋದ ಜನರು ಗುಡ್ಡ ಕುಸಿತದಲ್ಲಿ ಕಣ್ಮರೆ ಆಗಿದ್ದಾರೆ. ವಾಪಸ್ ಬರಲು ಸಮಸ್ಯೆ ಎದುರಿಸುತ್ತಿದ್ದಾರೆ. ರಾಜ್ಯದಲ್ಲೂ ಹಲವೆಡೆ ರೆಡ್, ಯೆಲ್ಲೋ ಅಲರ್ಟ್ ಘೋಷಣೆ ಆಗಿದೆ. ಹಲವು ಜಿಲ್ಲೆಗಳಲ್ಲಿ ಜಲಾವೃತಗೊಂಡು ಸಂಕಷ್ಟ ಎದುರಿಸುತ್ತಿದ್ದಾರೆ. ಮಂಡ್ಯ ಭಾಗದಲ್ಲಿ ಭತ್ತದ ಸಸಿ ನೆಡುವ ಕೆಲಸ ಶುರು ಆಗಲಿದೆ. ಈ ಹಿನ್ನೆಲೆಯಲ್ಲಿ ನಮ್ಮ ನಾಯಕರು ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಪಾದಯಾತ್ರೆ ಮಾಡಬೇಕು ಎಂದು ಬಿಜೆಪಿ ನಾಯಕರು ಈ ಮುಂಚೆ ನಿರ್ಧಾರ ಮಾಡಿದ್ದರು. ನಮಗೆ ಮಾಹಿತಿಗಾಗಿ ಹೇಳಿದ್ದಾರಷ್ಟೇ. ಬಿಜೆಪಿ ನಿಲುವಿನಲ್ಲಿ ತೀರ್ಮಾನ ತೆಗೆದುಕೊಂಡು ಹೋರಾಟ ಮಾಡುತ್ತಿದ್ದಾರೆ. ಪಾದಯಾತ್ರೆಗೆ ಸೂಕ್ತವಾದ ಸಂದರ್ಭವಲ್ಲ ಎಂದು ನಾವು ಹಿಂದೆ ಸರಿದಿದ್ದೇವೆ. ಜನರ ಟೀಕೆ ವ್ಯಕ್ತವಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ನಾವು ಪಾದಯಾತ್ರೆಯಿಂದ ಹಿಂದೆ ಸರಿದಿದ್ದೇವೆ. ಅಲ್ಲಿನ ಜನರ ಸಮಸ್ಯೆ ಏನು ಅದು ಮುಖ್ಯ ಎಂದರು.

ಇದನ್ನೂ ಓದಿ:ಆರ್​ಸಿಬಿಗೆ ದೊಡ್ಡ ಲಾಸ್​; ತಂಡ ತೊರೆಯಲು ನಿರ್ಧರಿಸಿದ ಬಿಗ್​ ಪ್ಲೇಯರ್..!

ಪಾದಯಾತ್ರೆಯಿಂದ ಲಾಭ ಏನು? ಕಾನೂನು ಹೋರಾಟ ಮುಖ್ಯ. ನಮಗೆ ರಾಜಕೀಯವೇ ಪ್ರಾಮುಖ್ಯವಲ್ಲ. ನಾವು ನೈತಿಕ ಬೆಂಬಲವೂ ಕೊಡಲ್ಲ, ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿದ್ದಾಗ ಯಾಕೆ ಬೆಂಬಲ ಕೊಡಬೇಕು. ಬೆಂಗಳೂರು ಮೈಸೂರುವರೆಗೂ ನಮ್ಮ ಶಕ್ತಿ ಇದೆ. ನಮ್ಮನ್ನು ಪರಿಗಣಿಸದಿದ್ದರೆ ಹೇಗೆ? ನನ್ನ ಮನಸ್ಸಿಗೆ ನೋವಾಗಿದೆ, ಯಾಕೆ ಬೆಂಬಲ ಕೊಡಬೇಕು ಎಂದು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ:ಗಂಭೀರ್ ಅಧ್ಯಕ್ಷತೆಯಲ್ಲಿ ಎಲ್ಲರೂ ಬೌಲರ್​ಗಳೇ​​.. 4 ವಿಕೆಟ್ ಕಿತ್ತ ಸೂರ್ಯ, ರಿಂಕು ಸಿಂಗ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment